ನವದೆಹಲಿ ಸೆ 14 : ಗುಜರಾತ್ನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಭೂಪೇಂದ್ರ ಪಟೇಲ್ ಅವರಿಗೆ ಪ್ರಧಾನಿ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, “ಗುಜರಾತ್ನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಭೂಪೇಂದ್ರ ಭಾಯ್ ಅವರಿಗೆ ಅಭಿನಂದನೆಗಳು. ನಾನು ಅವರನ್ನು ಹಲವು ವರ್ಷಗಳಿಂದ ಬಲ್ಲೆ. ಅದು ಬಿಜೆಪಿ ಸಂಘಟನೆಯಲ್ಲಿರಲಿ ಅಥವಾ ನಾಗರಿಕ ಆಡಳಿತದಲ್ಲಿರಲಿ ಅಥವಾ ಸಮುದಾಯ ಸೇವೆಯಲ್ಲಿರಲಿ ಅವರ ಅನುಕರಣೀಯ ಕೆಲಸವನ್ನು ನೋಡಿದ್ದೇನೆ. ಅವರು ಖಂಡಿತವಾಗಿಯೂ ಗುಜರಾತ್ನ ಬೆಳವಣಿಗೆಯ ಪಥವನ್ನು ಶ್ರೀಮಂತಗೊಳಿಸುತ್ತಾರೆ ಎಂದು ಅವರು ಟ್ವೀಟ್ ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ
ಜೊತೆಗೆ ನಿರ್ಗಮಿತ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರನ್ನೂ ಶ್ಲಾಘಿಸಿರುವ ಪ್ರಧಾನಿ ಸಿಎಂ ಆಗಿದ್ದ ಐದು ವರ್ಷಗಳ ಅವಧಿಯಲ್ಲಿ ರೂಪಾನಿ ಅನೇಕ ಜನಸ್ನೇಹಿ ಕ್ರಮಗಳನ್ನು ಕೈಗೊಂಡಿದ್ದರು. ಸಮಾಜದ ಎಲ್ಲ ವರ್ಗಕ್ಕೂ ಅವಿರತವಾಗಿ ಶ್ರಮಿಸಿದ್ದರು ಎಂದು ಹೇಳಿದ್ದಾರೆ.