ಅಧ್ಯಕ್ಷೀಯ ಚುನಾವಣೆಯಿಂದಲೇ ಅನರ್ಹ: ಟ್ರಂಪ್ಗೆ ಬಿಗ್ ಶಾಕ್..!

Washington: ಅಮೇರಿಕಾದ (Big Shock for Donald Trump) ಮಾಜಿ ಅಧ್ಯಕ್ಷ ಹಾಗೂ ಈ ಬಾರಿ ನಡೆಯುತ್ತಿರುವ ಚುನಾವಣೆಯ ಅಧ್ಯಕ್ಷೀಯ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್

(Donald Trump) ಅವರನ್ನು ಚುನಾವಣೆಗೆ ಸ್ಪರ್ಧೆ ಮಾಡದಂತೆ ಕೊಲೊರಾಡೋ (Big Shock for Donald Trump) ನ್ಯಾಯಾಲಯ ಅನರ್ಹಗೊಳಿಸಿದೆ.

ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜನವರಿ 6, 2021 ರಂದು ಯುಎಸ್ ಕ್ಯಾಪಿಟಲ್ (US Capital) ಮೇಲೆ ಅವರ ಬೆಂಬಲಿಗರು ನಡೆಸಿದ ದಾಳಿಯಲ್ಲಿ ಅವರ ಪಾತ್ರವಿರುವುದು ದೃಢಪಟ್ಟಿರುವ ಕಾರಣ

ಮುಂದಿನ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರು ಸ್ಪರ್ಧೆ ಮಾಡಲು ಸಾಧ್ಯವಿಲ್ಲ ಎಂದು ಕೊಲೊರಾಡೋ ರಾಜ್ಯದ ಉನ್ನತ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿದೆ.

ಅಮೇರಿಕಾದ ರಾಜಕೀಯ ಇತಿಹಾಸದಲ್ಲೇ ಚುನಾವಣೆ ಕಣದಿಂದಲೇ ಅನರ್ಹಗೊಂದ ಮೊದಲ ಮಾಜಿ ಅಧ್ಯಕ್ಷ ಎಂಬ ಕುಖ್ಯಾತಿಗೆ ಇದೀಗ ಡೊನಾಲ್ಡ್ ಟ್ರಂಪ್ ಅವರು ಪಾತ್ರರಾಗಿದ್ದಾರೆ. ಇನ್ನು ಈ ಕುರಿತು

ಪ್ರತಿಕ್ರಿಯೆ ನೀಡಿರುವ ಡೊನಾಲ್ಡ್ ಟ್ರಂಪ್ ಅವರ ಮಾಧ್ಯಮ ವಕ್ತಾರರು, ಇದೊಂದು ದೋಷಪೂರಿತ ತೀರ್ಮಾನವಾಗಿದ್ದು, ಇದರ ವಿರುದ್ದ ನಾವು ಅಮೇರಿಕಾದ ಸರ್ವೋಚ್ಚ ನ್ಯಾಯಾಲಯ (Supreme

Court) ದಲ್ಲಿ ಮೇಲ್ಮನವಿ ಸಲ್ಲಿಸುತ್ತೇವೆ.

ನಮಗೆ ಸೂಕ್ತ ನ್ಯಾಯ ಸಿಗುವ ಭರವಸೆ ಇದೆ ಎಂದಿದ್ದಾರೆ. ಇನ್ನು ವಾಷಿಂಗ್ಟನ್ನಲ್ಲಿನ ಸಿಟಿಜನ್ಸ್ ಫಾರ್ ರೆಸ್ಪಾನ್ಸಿಬಿಲಿಟಿ ಅಂಡ್ ಎಥಿಕ್ಸ್ನ (Citizens for Responsibility and Ethics) ಸಂಘಟನೆ,

ಅಧ್ಯಕ್ಷೀಯ ಅಧಿಕಾರದ ವರ್ಗಾವಣೆಯನ್ನು ತಡೆಯುವ ವಿಫಲ ಪ್ರಯತ್ನದಲ್ಲಿ ಕ್ಯಾಪಿಟಲ್ ಮೇಲೆ ದಾಳಿ ಮಾಡಲು ತನ್ನ ಬೆಂಬಲಿಗರನ್ನು ಪ್ರಚೋದಿಸಿದ್ದಕ್ಕಾಗಿ ಟ್ರಂಪ್ ಅನರ್ಹಗೊಳಿಸಬೇಕು ಎಂದು

ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ಈ ಕುರಿತು ವಿಚಾರಣೆ ನಡೆದು, ಇದೀಗ ಟ್ರಂಪ್ ಅವರನ್ನು ಕೊಲೊರಾಡೋ ನ್ಯಾಯಾಲಯ (Colorado Court) ಅನರ್ಹಗೊಳಿಸಿದೆ. ಆದರೆ ಈ ತೀರ್ಪಿನ

ವಿರುದ್ದ ಮೇಲ್ಮನವಿ ಸಲ್ಲಿಸಲು ಟ್ರಂಪ್ ಅವರಿಗೆ ಅವಕಾವಿದೆ.

ಇದೇ ವೇಳೆ ಟ್ರಂಪ್ ಅವರನ್ನು ಇತರ ರಾಜ್ಯಗಳಲ್ಲಿನ ಪ್ರಾಥಮಿಕ ಮತದಾನದಿಂದ ದೂರವಿರಿಸಲು ಕೋರಿ ಸಲ್ಲಿಕೆಯಾಗಿದ್ದ ಹಲವು ಮೊಕದ್ದಮೆಗಳನ್ನು ನ್ಯಾಯಾಲಯಗಳು ತಿರಸ್ಕರಿಸಿವೆ. ಮಿನ್ನೇಸೋಟದ

ಉನ್ನತ ನ್ಯಾಯಾಲಯವು ಆ ರಾಜ್ಯದಲ್ಲಿನ ರಿಪಬ್ಲಿಕನ್ ಪ್ರೈಮರಿ (Republican Primary)ಯಿಂದ ಟ್ರಂಪ್ ಅವರನ್ನು ಅನರ್ಹಗೊಳಿಸುವ ಪ್ರಯತ್ನವನ್ನು ನಿರಾಕರಿಸಿತು, ಆದರೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಲು

ಅವರ ಒಟ್ಟಾರೆ ಅರ್ಹತೆಯ ಮೇಲೆ ತೀರ್ಪು ನೀಡಲಿಲ್ಲ.

ಇನ್ನು ಟ್ರಂಪ್ ಅವರ ವಕೀಲರು ಈ ಪ್ರಕರಣದಲ್ಲಿ ಹಲವಾರು ಪ್ರತಿವಾದಗಳನ್ನು ಮಂಡಿಸಿದ್ದು, ಗಲಭೆಯ ದಿನದಂದು ಬೆಂಬಲಿಗರಿಗೆ ಟ್ರಂಪ್ ಮಾಡಿದ ಭಾಷಣವು ಅವರ ವಾಕ್ ಸ್ವಾತಂತ್ರ್ಯದ ಹಕ್ಕಿನಿಂದ

ರಕ್ಷಿಸಲ್ಪಟ್ಟಿದೆ ಎಂದು ವಾದಿಸಿದ್ದಾರೆ.

ಇದನ್ನು ಓದಿ: ಈ ದೇಶದ ಯುವಕರು ಹೇಗೆ ಪ್ರತಿಭಟಿಸಬೇಕು: ನಟ ಕಿಶೋರ್ ಕುಮಾರ್ ಹುಲಿ ಪ್ರಶ್ನೆ

Exit mobile version