ಬಿಳಿ ಕೂದಲ ಸಮಸ್ಯೆಯೇ? ಇಲ್ಲಿದೆ ಸುಲಭ ಪರಿಹಾರ

ಇತ್ತೀಚಿನ ದಿನಗಳಲ್ಲಿ ಅನೇಕರಿಗೆ ಕೂದಲು ಅತಿ ಬೇಗನೆ ಬಿಳಿಯಾಗುವುದು ಸಾಮಾನ್ಯವಾಗಿದೆ. ಹಲವಾರು ಕೂದಲ ಸಮಸ್ಯೆಗೆ ಇಲ್ಲಿದೆ ಒಂದು ಪರಿಹಾರ. ವಿಪರೀತ ಕೂದಲು ಉದುರುತ್ತಿದ್ದರೆ, ಕೂದಲಿನಲ್ಲಿ ಹೊಟ್ಟು ಇದ್ದರೆ, ಅಕಾಲಿಕವಾಗಿ ಕೂದಲು ಬಿಳಿಯಾಗಿದ್ದರೆ, ಮನೆಯಲ್ಲೇ ಕಂಡುಕೊಳ್ಳಬಹುದು ಸುಲಭ ಪರಿಹಾರವನ್ನು.
ಅನೇಕರು ಏನೇನೋ ಶಾಂಪುಗಳು ಎಣ್ಣೆಗಳನ್ನೆಲ್ಲಾ ತಂದು ಹಣ ಕಳೆದುಕೊಳ್ಳುತ್ತಾರೆ. ಇದರ ಬದಲು ಮನೆಯಲ್ಲಿ ಇರುವ ಸಾಮಗ್ರಿಗಳಿಂದಲೇ ಮನೆ ಮದ್ದು ಮಾಡಿಕೊಳ್ಳಬಹುದಾಗಿದೆ. ಎರಡು ಚಮಚ ಮೊಸರು, ಎರಡು ಚಮಚ ಕೊಬ್ಬರಿ ಎಣ್ಣೆ, ಎರಡು ಚಮಚ ಹರಳೆಣ್ಣೆ ಹಾಗೂ ಅರ್ದ ನಿಂಬೇ ಹಣ್ಣಿನ ರಸವನ್ನು ಸಮನಾಗಿ ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿಕೊಂಡು ಕೂದಲಿನ ಬುಡಕ್ಕೆ ಚೆನ್ನಾಗಿ ಹಚ್ಚಿಕೊಂಡು ಒಂದೆರಡು ಗಂಟೆಗಳ ಕಾಲ ಕೂದಲಲ್ಲೇ ಬಿಟ್ಟು ಬಳಿಕ ನಿತ್ಯ ಬಳಸುವ ಶಾಂಪೂವಿನಿಂದ ಅಥವಾ ಶೀಗೆಕಾಯಿ ಪುಡಿಯಿಂದ ಸ್ನಾನ ಮಾಡಬೇಕು. ವಾರದಲ್ಲಿ ಮೂರು ಬಾರಿ ಈ ವಿಧಾನವನ್ನು ಪಾಲಿಸುತ್ತಾ ಬಂದರೆ, ಆಗ ಹೊಳೆಯುವ ಕೂದಲು ನಿಮ್ಮದಾಗುವುದು. ಅಕಾಲಿಕವಾಗಿ ಬೆಳ್ಳಗಾದ ಕೂದಲು ಕಪ್ಪು ಬಣ್ಣಕ್ಕೆ ತಿರುಗುವುದು. ಕೂದಲ ಉದುರುವಿಕೆ ನಿಲ್ಲುವುದು.

Exit mobile version