download app

FOLLOW US ON >

Monday, August 8, 2022
Breaking News
ಆಮ್ಲಜನಕ ಕೊರತೆ ; ಮಾರ್ಗಸೂಚಿ ಪಾಲಿಸುವಲ್ಲಿ ಸಿಬ್ಬಂದಿಯ ವಿಫಲವೆಂದ ಬಿ.ಎ ಪಾಟೀಲ್ ವರದಿ : `ದ ಫೈಲ್ಸ್’ಹಿಟ್ಲರ್ ಕೂಡಾ ಚುನಾವಣೆಗಳನ್ನು ಗೆಲ್ಲುತ್ತಿದ್ದ : ರಾಹುಲ್‌ ಗಾಂಧಿಅರ್ಪಿತಾ ಮುಖರ್ಜಿ ಪ್ರಾಣಕ್ಕೆ ಅಪಾಯವಿದೆ ; ಆಹಾರ ಮತ್ತು ನೀರನ್ನು ಪರೀಕ್ಷಿಸಬೇಕು : ನ್ಯಾಯಾಲಯಕ್ಕೆ ಇ.ಡಿ ಮನವಿಕಾಮನ್ ವೆಲ್ತ್ ಗೇಮ್ಸ್ 2022 : ಕೇವಲ 1 ಗಂಟೆ ಅಂತರದಲ್ಲಿ ಹ್ಯಾಟ್ರಿಕ್ ಚಿನ್ನ ಗೆದ್ದ ಕುಸ್ತಿ ವೀರರುಜ್ಯೂಸ್ ಬಾಟಲಿಯನ್ನೇ ಮೈಕ್ ಮಾಡಿಕೊಂಡು ಶಾಲೆಯ ದುಸ್ಥಿತಿಯನ್ನು ವರದಿ ಮಾಡಿದ ಬಾಲಕ ; ವೀಡಿಯೋ ವೈರಲ್ಸಚಿವ ಸುನೀಲ್‌ ಕುಮಾರ್‌ಗೆ ಇಂಥಾ ಗುಲಾಮಿ ಮನಸ್ಥಿತಿ ಬರಬಾರದಿತ್ತು : ಸಿದ್ದರಾಮಯ್ಯಮೋದಿ-ಮಮತಾ ಬ್ಯಾನರ್ಜಿ ಭೇಟಿ : ಪಶ್ಚಿಮ ಬಂಗಾಳಕ್ಕೆ ಹಣ ಬಿಡುಗಡೆಗೆ ಒತ್ತಾಯ!ಸಿಎಂಗೆ ಕೋವಿಡ್ ಪಾಸಿಟಿವ್ ದೃಢ ; ದೆಹಲಿ ಪ್ರವಾಸ ರದ್ದು!ಜಮೀರ್‌ ಅಹಮದ್‌ ಮುಸ್ಲಿಂ ಮಹಿಳೆಯರು ಚುನಾವಣೆಗೆ ಸ್ಪರ್ಧಿಸುವುದನ್ನು ಬಯಸುವುದಿಲ್ಲ : ಬಿಜೆಪಿಜಮ್ಮು- ಕಾಶ್ಮೀರದಲ್ಲಿ ಪತ್ತೆಯಾಗಿದೆ 1,200 ವರ್ಷಗಳ ಹಿಂದಿನ ಮೂರು ತಲೆಯ ವಿಷ್ಣುವಿನ ಪುರಾತನ ವಿಗ್ರಹ!
English English Kannada Kannada

ರುಚಿಯಲ್ಲಿ ಕಹಿಯಾಗಿದ್ದರೂ, ಆರೋಗ್ಯಕ್ಕೆ ಸಿಹಿ ಲಾಭ ನೀಡುವ ಕಹಿಬೇವು..

ಕಹಿ ಸಸ್ಯ ನಿಮ್ಮ ಆರೋಗ್ಯಕ್ಕೆ ಎಂತಹ ಸಿಹಿ ಪ್ರಯೋಜನ ನೀಡುವುದು ಗೊತ್ತಾ?. ಪ್ರಾಚೀನ ಕಾಲದಿಂದಲೂ, ಕಹಿ ಬೇವಿನ ಬ್ಯಾಕ್ಟೀರಿಯಾ ವಿರೋಧಿ, ಪರಾವಲಂಬಿ ವಿರೋಧಿ, ಶಿಲೀಂಧ್ರ-ವಿರೋಧಿ, ಉರಿಯೂತದ ಮತ್ತು ನೋವು ನಿವಾರಕ ಗುಣಲಕ್ಷಣಗಳಿಂದಾಗಿ ಆರೋಗ್ಯವನ್ನು ಉತ್ತಮಗೊಳಿಸಲು ಮತ್ತು ತೂಕ ನಷ್ಟ ಸಮಸ್ಯೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ.

ಆಯುರ್ವೇದದಲ್ಲಿ ಅಪಾರ ಮಹತ್ವ ಪಡೆದಿರುವ ಕಹಿಬೇವು, ಸೌಂದರ್ಯ ಸ್ನೇಹಿ ಎನ್ನುವುದು ಎಲ್ಲರಿಗೂ ತಿಳಿದಿದೆ. ಆದರೆ ಈ ಕಹಿ ಸಸ್ಯ ನಿಮ್ಮ ಆರೋಗ್ಯಕ್ಕೆ ಎಂತಹ ಸಿಹಿ ಪ್ರಯೋಜನ ನೀಡುವುದು ಗೊತ್ತಾ?. ಪ್ರಾಚೀನ ಕಾಲದಿಂದಲೂ, ಕಹಿ ಬೇವಿನ ಬ್ಯಾಕ್ಟೀರಿಯಾ ವಿರೋಧಿ, ಪರಾವಲಂಬಿ ವಿರೋಧಿ, ಶಿಲೀಂಧ್ರ-ವಿರೋಧಿ, ಉರಿಯೂತದ ಮತ್ತು ನೋವು ನಿವಾರಕ ಗುಣಲಕ್ಷಣಗಳಿಂದಾಗಿ ಆರೋಗ್ಯವನ್ನು ಉತ್ತಮಗೊಳಿಸಲು ಮತ್ತು ತೂಕ ನಷ್ಟ ಸಮಸ್ಯೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಆದ್ದರಿಂದ ಇಲ್ಲಿ ನಾವು ಕಹಿ ಬೇವು ತೂಕ ನಷ್ಟಕ್ಕೆ ಹೇಗೆ ಸಹಾಯ ಮಾಡುವುದು ಎಂಬುದನ್ನು ತಿಳಿದುಕೊಳ್ಳೋಣ.

ಕಹಿಬೇವಿನ ನಂಬಲಾಗದ ತೂಕ ನಷ್ಟಕ್ಕೆ ಸಂಬಂಧಿಸಿದ ಪ್ರಯೋಜನಗಳನ್ನು ಈ ಕೆಳಗೆ ನೀಡಲಾಗಿದೆ:

ಹಸಿವನ್ನು ನಿಯಂತ್ರಿಸುವುದು:
ತೂಕ ಹೆಚ್ಚಾಗಲು ಪ್ರಮುಖ ಕಾರಣವೆಂದರೆ ಅಸಮತೋಲಿತ ಆಹಾರ ಸೇವನೆ. ಕಹಿ ಬೇವಿನಲ್ಲಿ ಫೈಬರ್ ಸಮೃದ್ಧವಾಗಿದ್ದು, ಜೀರ್ಣಕ್ರಿಯೆಯನ್ನು ನಿಧಾನಗೊಳಿಸುವುದು. ಈ ಮೂಲಕ ನಿಮ್ಮ ಹಸಿವನ್ನು ನಿರ್ಬಂಧಿಸುತ್ತದೆ ಜೊತೆಗೆ ಮುಂದಿನ ಊಟದಲ್ಲಿ ಕಡಿಮೆ ತಿನ್ನುವಂತೆ ಮಾಡುವುದು. ಹೆಚ್ಚು ಸಮಯದವರೆಗೆ ಹೊಟ್ಟೆ ತುಂಬಿರುವಂತೆ ಇಡುವುದು. ಈ ಎಲೆಗಳೊಳಗಿನ ನಾರಿನಂಶವು ದೇಹದ ಜೀರ್ಣಾಂಗ ವ್ಯವಸ್ಥೆಯನ್ನು ಸರಿಯಾಗಿಡಲು ನೆರವಾಗುವುದಲ್ಲದೇ, ಯಾವುದೇ ಜೀರ್ಣಕಾರಿ ಸಮಸ್ಯೆಗಳನ್ನು ತಪ್ಪಿಸುವುದು.

ಚಯಾಪಚಯ ಶಕ್ತಿ ಹೆಚ್ಚಿಸುವುದು:
ತೂಕ ನಷ್ಟಕ್ಕೆ ಉತ್ತಮ ಚಯಾಪಚಯ ಶಕ್ತಿ ಬಹಳ ಮುಖ್ಯ. ಕಹಿ ಬೇವು ಉತ್ತಮ ಪ್ರಮಾಣದ ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ನಿಮ್ಮ ತೂಕದಲ್ಲಿ ತೀವ್ರ ಬದಲಾವಣೆಗಳಿಗೆ ಕಾರಣವಾಗುವ ಹೆಚ್ಚಿನ ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ. ಈ ಮೂಲಕ ನಿಮ್ಮ ತೂಕ ನಿಯಂತ್ರಣದಲ್ಲಿಡಲು ಸಹಾಯ ಮಾಡುವುದು.

ದೇಹದಿಂದ ಕಲ್ಮಶಗಳನ್ನು ತೆಗೆದುಹಾಕುವುದು:
ನಿಮ್ಮ ಆಂತರಿಕ ವ್ಯವಸ್ಥೆಯನ್ನು ಸ್ವಚ್ಛಗೊಳಿಸುವ ಮೂಲಕ, ರಕ್ತವನ್ನು ಶುದ್ಧೀಕರಿಸುವುದು. ಈ ಮುಖಾಂತರ ದೇಹದಿಂದ ಹಾನಿಕಾರಕ ರಾಸಾಯನಿಕಗಳನ್ನು ಹೊರಹಾಕಲು ಕಹಿಬೇವು ಸಹಾಯ ಮಾಡುತ್ತದೆ. ಇದಲ್ಲದೆ, ತೂಕ ಹೆಚ್ಚಾಗಲು ಕಾರಣವಾಗುವ ಅಂಶವಾಗಿರುವ ಉರಿಯೂತವನ್ನು ತಡೆಗಟ್ಟುತ್ತದೆ. ದೇಹದಿಂದ ಅನಾರೋಗ್ಯಕರ ಅಥವಾ ಹೆಚ್ಚು ಅಲರ್ಜಿಕ್ ಪದಾರ್ಥಗಳನ್ನು ಹೊರಹಾಕುವ ಮೂಲಕ ಒಟ್ಟಾರೆ ಆರೋಗ್ಯವನ್ನು ಕಾಪಾಡುವುದು. ಆರೋಗ್ಯಕರ ದೇಹವು ಸಕಾರಾತ್ಮಕ ಮತ್ತು ಆರೋಗ್ಯಕರ ತೂಕ ನಷ್ಟವನ್ನು ಮಾತ್ರ ಬೆಂಬಲಿಸುತ್ತದೆ.

ಕೊಬ್ಬನ್ನು ಕಡಿಮೆ ಮಾಡುವುದು:
ಕಹಿಬೇವು ಅಗತ್ಯ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಉತ್ತೇಜಿಸುವುದು. ಹಾಗಾಗಿ ಕೊಬ್ಬನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ. ದೇಹವು ಯಾವುದೇ ಕೊಬ್ಬಿನ ಹೀರಿಕೊಳ್ಳದಂತೆ ಸ್ವಯಂಚಾಲಿತವಾಗಿ ನಿಯಂತ್ರಿಸುವುದು. ಅಷ್ಟೇ ಅಲ್ಲ, ಉತ್ತಮ ಪೋಷಕಾಂಶಗಳನ್ನು ಹೀರಿಕೊಳ್ಳಲು ದೇಹಕ್ಕೆ ಸಹಾಯ ಮಾಡುವುದು. ನಿಮ್ಮ ದಿನಚರಿಯಲ್ಲಿ ಕಹಿ ಬೇವನ್ನು ಸೇರಿಸುವುದು ತೂಕ ಹೆಚ್ಚಾಗುವುದನ್ನು ತಪ್ಪಿಸಲು ಸುಸ್ಥಿರ ಮತ್ತು ನೈಸರ್ಗಿಕ ವಿಧಾನವಾಗಿದೆ.

ಕೊಬ್ಬನ್ನು ಸುಡುವುದು:
ಕಹಿಬೇವು ಚಯಾಪಚಯ ಸಾಮರ್ಥ್ಯವನ್ನು ಹೆಚ್ಚಿಸಿದಂತೆ, ಕೊಬ್ಬಿನ ಚಯಾಪಚಯ ಕ್ರಿಯೆಗೆ ಕಾರಣವಾದ ಹಾರ್ಮೋನ್ ಅನ್ನು ಒಡೆಯುವ ಕಿಣ್ವವನ್ನು ತಡೆಯಲು ಇದು ಗಮನಾರ್ಹವಾಗಿ ಸಹಾಯ ಮಾಡುತ್ತದೆ. ಜೊತೆಗೆ ವ್ಯಾಯಾಮ ಮಾಡುವಾಗ ಕೊಬ್ಬನ್ನು ಕಡಿಮೆ ಮಾಡಲು ಬೇವು ಸೇವನೆ ಉತ್ತಮ ಎಂಬುದು ಅನೇಕ ಸಂಶೋಧನೆಗಳು ತಿಳಿಸಿವೆ. ಆದ್ದರಿಂದ ತೂಕ ನಷ್ಟಕ್ಕೆ ಕಹಿಬೇವು ಉತ್ತಮ ಆಯ್ಕೆಯಾಗಿದೆ.

Share News on

Share on facebook
Facebook
Share on google
Google+
Share on twitter
Twitter
Share on linkedin
LinkedIn
Share on whatsapp
WhatsApp
error: Content is protected !!

Submit Your Article