ಕೋವಿಡ್ ನಿಯಮ ಉಲ್ಲಂಘಿಸಿ ಹುಟ್ಟುಹಬ್ಬ ಆಚರಿಸಿಕೊಂಡ ‘ಬಿಜೆಪಿ’ ನಾಯಕನಿಗೆ ದಂಡ.!

bjp leader

ಬೆಂಗಳೂರು ಜ 21 : ರಾಜ್ಯದಲ್ಲಿ ಕೊರೊನಾ ಸೊಂಕಿನ ಏರಿಕೆ ತೀವ್ರವಾಗುತ್ತಿದೆ. ಈ ಸಮಯದಲ್ಲಿ ರಾಜ್ಯ ಸರ್ಕಾರ ಕೂಡ ಕೊರೊನಾ ತಡೆಯಲು ಸಾಧ್ಯವಾದ ಎಲ್ಲಾ ರೀತಿಯ ನಿಯಮಾವಳಿಗಳನ್ನು ಬಿಗಿಯಾಗಿ ಪಾಲಿಸಲು ಸೂಚಿಸಿದೆ. ಮುಖಗವಸು ಸೇರಿದಂತೆ ಸ್ಯಾನಿಟೈಸರ್, ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಲು ಸೂಕ್ತವಾಗಿ ತಿಳಿಸಿದೆ. ಈ ಮಧ್ಯೆ ಜನಸಂದಣಿ ಹೆಚ್ಚಾಗಿ ಸೇರುವಂತ ಸ್ಥಳಗಳಲ್ಲಿ ಜನರು ಸಾಮಾಜಿಕ ಅಂತರವನ್ನು ಹಾಗೂ ಗುಂಪು ಗುಂಪಾಗಿ ಸೇರುವಂತಿಲ್ಲ. ಮದುವೆ ಸಮಾರಂಭಗಳು, ಪಾರ್ಟಿಗಳಲ್ಲಿ ಸೇರುವಂತಿಲ್ಲ ಅವೆಲ್ಲದಕ್ಕೂ ಬ್ರೇಕ್ ಏರುವಂತೆ ಸರ್ಕಾರ ಕಾನೂನು ಬದ್ಧವಾಗಿ ತಿಳಿಸಿದೆ. ಈ ಮಧ್ಯೆ ಬಿಜೆಪಿ ಪಕ್ಷದ ನಾಯಕರೊಬ್ಬರು ಕೊರೊನಾ ನಿಯಮವನ್ನು ಉಲ್ಲಂಘಿಸಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಕ್ಕೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಷ್ಟಕ್ಕೂ ಯಾರು ಈ ಬಿಜೆಪಿ ನಾಯಕ ಎಂದು ತಿಳಿಯಲು ಮುಂದೆ ಓದಿ.

ಬೆಂಗಳೂರಿನ ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷರಾಗಿರುವ ರಮೇಶ್ ವಿರುದ್ಧ ಬನಶಂಕರಿ ಪೊಲೀಸರು ಶಿಸ್ತುಬದ್ಧವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬನಶಂಕರಿ ಪೊಲೀಸ್ ಲಿಮಿಟ್ಸ್ ಒಳಗೆ ಸೇರ್ಪಡೆ ಬರುವ, ರಮೇಶ್ ಅವರು ವಾಸವಿರುವ ಎನ್.ಆರ್ ರೆಸಿಡೆನ್ಸಿಯಲ್ ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ತಮ್ಮ ಮನೆ ಮುಂದೆ ದೊಡ್ಡದಾಗಿ ಪೆಂಡಾಲ್, ವೇದಿಕೆ ಕಲ್ಪಿಸಿ ಕಾರ್ಯಕ್ರಮವನ್ನು ಜೋರಾಗಿ ಸಂಭ್ರಮಿಸಿದ್ದಾರೆ. ನೂರಾರು ಜನರು ಆಗಮಿಸಿದ್ದ ಕಾರ್ಯಕ್ರಮದಲ್ಲಿ ಯಾರು ಮಾಸ್ಕ್ ಧರಿಸಿರಲಿಲ್ಲ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿರಲಿಲ್ಲ.! ಈ  ಬಗ್ಗೆ ಸಿಕ್ಕ ದೂರಿನ ಅನ್ವಯ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಪರೀಕ್ಷಿಸಿದಾಗ  ಕೋವಿಡ್‌ ನಿಯಮ ಉಲ್ಲಂಘನೆಯಾಗಿರುವುದು ಕಂಡುಬಂದಿದೆ. ಆ ಕ್ಷಣವೇ ಸಬ್ ಇನ್ಸ್‍ಪೆಕ್ಟರ್ ದೂರನ್ನು ದಾಖಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Exit mobile version