‘ಎರಡೂ ರಾಜ್ಯಗಳಲ್ಲಿ ಬಿಜೆಪಿ ನಾಯಕರ ಮಧ್ಯೆ ಮ್ಯಾಚ್ ಫಿಕ್ಸಿಂಗ್’ : ಡಿಕೆಶಿ

Karnataka : ಬೆಳಗಾವಿ ಗಡಿ ವಿವಾದ ರಾಜ್ಯ ಮತ್ತು ಮಹಾರಾಷ್ಟ್ರದ ಬಿಜೆಪಿ ನಾಯಕರ ನಡುವಿನ ಮ್ಯಾಚ್ ಫಿಕ್ಸಿಂಗ್ ನಡೆಯುತ್ತಿದೆ ಎಂದು ಕರ್ನಾಟಕ ರಾಜ್ಯ ಕಾಂಗ್ರೆಸ್ (BJP Are Match Fixing) ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಎರಡೂ ರಾಜ್ಯಗಳ ಬಿಜೆಪಿ ನಾಯಕರು ಮ್ಯಾಚ್ ಫಿಕ್ಸಿಂಗ್ ಮಾಡಿದ್ದಾರೆ ಮತ್ತು ಪ್ರಚೋದನಕಾರಿ (BJP Are Match Fixing) ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಬೆಳಗಾವಿ ಗಡಿ ವಿವಾದದ ಬಗ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar),

ಎರಡು ರಾಜ್ಯಗಳ ಬಿಜೆಪಿ (BJP) ನಾಯಕರ ನಡುವೆ ಮ್ಯಾಚ್ ಫಿಕ್ಸಿಂಗ್ ಆಗಿದೆ. ಬಿಜೆಪಿ ಪಕ್ಷದಲ್ಲೇ ಇರುವ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್ ಅವರು ತಮ್ಮ ಹೇಳಿಕೆಯಲ್ಲಿ ನಮ್ಮ ಕಾರವಾರವೂ ಬೇಕು ಎಂದು ಹೇಳಿದ್ದಾರೆ.

https://youtu.be/j-7JgkXjCBc ಸೂರತ್ಕಲ್ : ಅಕ್ರಮ ಟೋಲ್ ನಮಗೆ ಬೇಡ, ಟೋಲ್ ಕಿತ್ತುಬಿಸಾಡಿ!

ಬೆಳಗಾವಿಯ ನಂತರ ಈಗ ಕಾರವಾರದ ಅವಶ್ಯಕತೆ ಇದೆ ಎಂದು ಹೇಳಿರುವುದು ಅಶ್ಚರ್ಯ! ಸಿಎಂ ಕೂಡ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.

ಇದೆಲ್ಲಾ ಮ್ಯಾಚ್ ಫಿಕ್ಸಿಂಗ್, ಒಂದೂಕಾಲು ಭೂಮಿ, ಕರ್ನಾಟಕದಲ್ಲಿ ನೆಲೆಸಿರುವ ಮರಾಠಿಗರೆಲ್ಲ ನಮ್ಮ ಜನ. ಕರ್ನಾಟಕದಲ್ಲಿ ಮರಾಠಿ ಮಾತನಾಡುತ್ತಿರುವವರು ನಮ್ಮ ಮಹಾರಾಷ್ಟ್ರಕ್ಕೆ ಸೇರುತ್ತಾರೆ ಎಂದು ಫಡ್ನವೀಸ್ ಹೇಳಿದ್ದಾರೆ.

ಆದ್ರೆ, ಕರ್ನಾಟಕದಲ್ಲಿರುವ ಅಷ್ಟು ಮರಾಠಿಗರು ಕೂಡ ಕನ್ನಡಿಗರೇ ಎಂಬುದು ಅವರಿಗೆ ತಿಳಿದಿರಬೇಕು ಎಂದು ಡಿಕೆಶಿ ಹೇಳಿದ್ದಾರೆ. ಏನೇ ಭದ್ರತೆ ಬೇಕು ಎಂದರೂ ಅದನ್ನು ಈ ಹಿಂದಿನ ಎಲ್ಲಾ ಸರ್ಕಾರಗಳು ಒದಗಿಸಿವೆ.

ಆ ಬಗ್ಗೆ ಯಾರೂ ಆತಂಕ ಪಡಬೇಕಾಗಿಲ್ಲ. ಬಿಜೆಪಿ ಅವರು ಮ್ಯಾಚ್ ಫಿಕ್ಸಿಂಗ್ ಮಾಡಿದ್ದಾರೆ. ಹಾಗಾಗಿ ಈ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ.

ಈ ಮಧ್ಯೆ, ಬೆಳಗಾವಿ ಗಡಿ ವಿವಾದದ ವಿರುದ್ಧ ಮರಾಠ ಪರ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮಹಾರಾಷ್ಟ್ರದ ಔರಂಗಾಬಾದ್ ಬಳಿ ಮರಾಠಿಯಲ್ಲಿ ಕರ್ನಾಟಕ ಬಸ್‌ಗೆ ಬಣ್ಣ ಬಳಿದಿದ್ದಾರೆ.

ನವೆಂಬರ್ 24, ಗುರುವಾರದಂದು ಕರ್ನಾಟಕ ಸಿಎಂ ಬಸವರಾಜ್ ಬೊಮ್ಮಾಯಿ (Basavaraj Bommai) ಮತ್ತು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನಡುವೆ ವಾಗ್ಯುದ್ಧ ನಡೆದಿದ್ದು, ಎರಡು ರಾಜ್ಯಗಳ ನಡುವಿನ ಗಡಿ ವಿವಾದ ಮತ್ತೊಮ್ಮೆ ಭುಗಿಲೆದ್ದಿದೆ.

ಇದನ್ನೂ ಓದಿ : https://vijayatimes.com/jds-will-take-over/

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕೆಲವು ಗ್ರಾಮಗಳು ಕರ್ನಾಟಕದೊಂದಿಗೆ ವಿಲೀನಗೊಳ್ಳಲು ನಿರ್ಣಯವನ್ನು ಅಂಗೀಕರಿಸಿದವು ಎಂದು ಸಿಎಂ ಬೊಮ್ಮಾಯಿ ಹೇಳಿದಾಗ ಈ ವಿವಾದ ಪ್ರಾರಂಭವಾಯಿತು.

ಇದನ್ನೂ ಓದಿ : https://vijayatimes.com/sc-proceeds-rti-online/

ಆದಾಗ್ಯೂ, ಇತ್ತೀಚೆಗೆ ಯಾವುದೇ ಗ್ರಾಮವು ಕರ್ನಾಟಕದೊಂದಿಗೆ ವಿಲೀನಗೊಳ್ಳಲು ಪ್ರಯತ್ನಿಸಿಲ್ಲ ಮತ್ತು ಯಾವುದೇ ಗಡಿ ಗ್ರಾಮವು ಎಲ್ಲಿಯೂ ಹೋಗುವ ಪ್ರಶ್ನೆಯೇ ಇಲ್ಲ ಎಂದು ದೇವೇಂದ್ರ ಫಡ್ನವಿಸ್ ತಿರುಗೇಟು ನೀಡಿದ್ದಾರೆ.
Exit mobile version