Belagavi: ನಿನ್ನೆ (ಡಿ.4) ಬೆಳಗಾವಿಯಲ್ಲಿ (BJP-Congress fight – BGM) ನಡೆದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆಪ್ತ, ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ
ಪೃಥ್ವಿ ಸಿಂಗ್ (Prutvi Singh) ಮೇಲಿನ ಚಾಕು ಇರಿತ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಬಿಜೆಪಿ-ಕಾಂಗ್ರೆಸ್ (Congress) ನಡುವೆ ಕಿತ್ತಾಟಕ್ಕೆ ಕಾರಣವಾಗಿದೆ.
ಬೆಳಗಾವಿಯ ಜಯನಗರದ ನಿವಾಸದ ಬಳಿ ನಿನ್ನೆ ಸಂಜೆ 4 ಗಂಟೆಯ ಹೊತ್ತಿಗೆ ಪೃಥ್ವಿ ಸಿಂಗ್ ಮೇಲೆ ದಾಳಿ ನಡೆಸಿದ್ದು, ಘಟನೆಯಲ್ಲಿ ಪೃಥ್ವಿ ಸಿಂಗ್ ಅವರ ಕೈ ಹಾಗೂ ಬೆನ್ನಿನ ಭಾಗಕ್ಕೆ ತೀವ್ರವಾಗಿ
ಗಾಯಗಳಾಗಿವೆ. ಕೂಡಲೇ ಅವರನ್ನು ಕೆಎಲ್ಇ ಆಸ್ಪತ್ರೆಗೆ (KLE Hospital) ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ..
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರ ಸಹೋದರ, ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಅವರ ಗನ್ಮ್ಯಾನ್ ಮತ್ತು ಆಪ್ತರು ಪೃಥ್ವಿ ಸಿಂಗ್ ಮೇಲೆ ಹಲ್ಲೆ
ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಇದಕ್ಕೆ ಪುಷ್ಠಿ ನೀಡುವಂತೆ ಚನ್ನರಾಜ್ ಆಪ್ತರು ಪೃಥ್ವಿ ಸಿಂಗ್ ಜೊತೆ ಮಾತನಾಡುತ್ತಿರುವ ಸಿಸಿಟಿವಿ ದೃಶ್ಯಗಳು ಲಭ್ಯವಾಗಿದ್ದು, ಸೂಕ್ತ ತನಿಖೆಗೆ ಬಿಜೆಪಿ
(BJP) ಮುಖಂಡರು (BJP-Congress fight – BGM) ಆಗ್ರಹಿಸಿದ್ದಾರೆ.
ಪೃಥ್ವಿ ಸಿಂಗ್ ಬೋಗಸ್ ಎಂದ ಲಕ್ಷ್ಮೀ ಹೆಬ್ಬಾಳ್ಕರ್
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಅವರು ತನ್ನ ತಮ್ಮನ ಆಪ್ತರು ಹಲ್ಲೆ ನಡೆಸಿದ ಆರೋಪ ಕೇಳಿ ಬರುತ್ತಿದ್ದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಪೃಥ್ವಿ ಸಿಂಗ್ ಮೋಸ್ಟ್
ಬೋಗಸ್. ಆತನ ಹೆಸರು ಬರೆದಿಟ್ಟು ಹುಡುಗರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣದಲ್ಲಿ ನಮ್ಮ ಹೆಸರು ಕೇಳಿ ಬಂದಿರುವುದರಿಂದ ಸೂಕ್ತ ತನಿಖೆಯಾಗಲಿ. ಪೃಥ್ವಿ ಸಿಂಗ್ನನ್ನೂ ವಿಚಾರಣೆ
ಮಾಡಬೇಕು 24 ಗಂಟೆಯೊಳಗೆ ಘಟನೆಯ ಸತ್ಯಾಸತ್ಯತೆ ಗೊತ್ತಾಗಬೇಕು ಎಂದಿದ್ದಾರೆ. ಈ ಘಟನೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಚನ್ನರಾಜ್ ಹಟ್ಟಿಹೊಳಿ ಹೇಳಿದ್ದೇನು?
ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ (Channaraj Hattiholi) ಅವರ ಆಪ್ತರು ಪೃಥ್ವಿ ಸಿಂಗ್ ಮೇಲೆ ದಾಳಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಇಂದು (ಡಿ.5) ಮಾಧ್ಯಮಗಳಿಗೆ
ಪ್ರತಿಕ್ರಿಯೆ ನೀಡಿದ ಚನ್ನರಾಜ್, ಪೃಥ್ವಿ ಸಿಂಗ್ ಮೇಲೆ ಹಲ್ಲೆ ನಡೆದಾಗ ನಾನು ಅಲ್ಲೇ ಕಾರಿನಲ್ಲಿ ಇದ್ದೇ ಎಂದು ಹೇಳಲಾಗ್ತಿದೆ. ನಾನು ಕಾರಿನಲ್ಲಿ ಇರಲಿಲ್ಲ. ಪೃಥ್ವಿ ಸಿಂಗ್ ಮನೆಯ ದಾರಿಯಾಗಿ ನನ್ನ ಕಾರು
ಬಂದಿರುವುದು ದೊಡ್ಡ ವಿಷವೇನಲ್ಲ. ನನ್ನ ಮನೆಗೆ ಬರುವ ದಾರಿಯಲ್ಲಿ ಪೃಥ್ವಿ ಸಿಂಗ್ ಮನೆಯಿದೆ. ನಾನೂ ಕೂಡ ಪ್ರಕರಣ ಸೂಕ್ತ ತನಿಖೆಗೆ ಆಗ್ರಹಿಸುತ್ತೇನೆ ಎಂದಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿದ ವಿಜಯೇಂದ್ರ :
ಪೃಥ್ವಿ ಸಿಂಗ್ ಮೇಲೆ ಚಾಕು ಇರಿದ ವಿಷಯ ತಿಳಿದ ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ನಿನ್ನೆ ರಾತ್ರಿ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ವಿಧಾನಮಂಡಲದ ಚಳಿಗಾಲದ ಅಧಿವೇಶನ ಪ್ರಯುಕ್ತ ವಿಜಯೇಂದ್ರ ಬೆಳಗಾವಿಯಲ್ಲೇ ಇದ್ದಾರೆ.
ಇದನ್ನು ಓದಿ: ಮಿಚಾಂಗ್ ಚಂಡಮಾರುತ ಹಿನ್ನೆಲೆ ಚೆನ್ನೈನಲ್ಲಿ ಹಲವು ರೈಲುಗಳ ಸಂಚಾರ ರದ್ದು
- ಭವ್ಯಶ್ರೀ ಆರ್ ಜೆ