ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಮಂಡಳಿಯಿಂದ ಸುಬ್ರಹ್ಮಣ್ಯನ್ ಸ್ವಾಮಿ ಔಟ್

ನವದೆಹಲಿ  ಅ.8: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಮಂಡಳಿಯ ಸದಸ್ಯತ್ವದಿಂದ ತಮ್ಮನ್ನು ತೆಗೆದು ಹಾಕಿದ ಬೆನ್ನಲ್ಲೇ ಬಿಜೆಪಿ ಹಿರಿಯ ಮುಖಂಡ, ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯನ್ ಸ್ವಾಮಿ ತನ್ನ ಟ್ವಿಟರ್ ಪ್ರೊಫೈಲ್ ನಲ್ಲಿದ್ದ ಬಿಜೆಪಿ ಎನ್ನುವ ಪದವನ್ನು ತೆಗೆದು ಹಾಕಿದ್ದಾರೆ. ಬಿಜೆಪಿ ನ್ಯಾಷನಲ್ ಎಕ್ಸಿಕ್ಯುಟಿವ್ ಮೆಂಬರ್ ಎಂಬ ಪದವನ್ನೂ ಕೂಡ ತೆಗೆದು ಹಾಕಿದ್ದಾರೆ.

ಟ್ವಿಟರ್ ನಲ್ಲಿ ಕೇವಲ ಸದ್ಯ ರಾಜ್ಯಸಭಾ ಸದಸ್ಯ, ಮಾಜಿ ಕೇಂದ್ರ ಸಚಿವ, ಹಾರ್ವರ್ಡ್​ ಪಿಎಚ್​ಡಿ ಇನ್​ ಎಕನಾಮಿಕ್ಸ್​; ಪ್ರೊಫೆಸರ್​, ಎಂಬ ಮಾಹಿತಿಗಳೊಂದಿಗೆ ‘ನಾನು ಪಡೆದಷ್ಟು ಒಳ್ಳೆಯದನ್ನು ಕೊಡುತ್ತೇನೆ’(I give as good as I get) ಎಂಬ ಒಂದು ಸಾಲು ಇದೆ

 ಪ್ರಧಾನಿ ನರೇಂದ್ರ ಮೋದಿ ಸರಕಾರದ ಆರ್ಥಿಕ ನೀತಿಗಳ ಬಗ್ಗೆ ಟೀಕಿಸುತ್ತಿದ್ದ ಸುಬ್ರಹ್ಮಣ್ಯನ್ ಸ್ವಾಮಿ ಅವರನ್ನು ಎರಡು ದಿನಗಳ ಹಿಂದೆ ರಾಷ್ಟ್ರೀಯ ಕಾರ್ಯಕಾರಿಣಿಯ 80 ಸದಸ್ಯರ ಮಂಡಳಿಯಿಂದ ತೆಗೆದು ಹಾಕಲಾಗಿತ್ತು. ಕೃಷಿ ಕಾಯ್ದೆ ಮತ್ತು ಲಖೀಮ್ ಪುರ್ ಹಿಂಸಾಚಾರದ ಬಗ್ಗೆ ಪ್ರಶ್ನೆ ಎತ್ತಿದ್ದ ವರುಣ್ ಗಾಂಧಿ ಮತ್ತು ಅವರ ತಾಯಿ ಮನೇಕಾ ಗಾಂಧಿ ಅವರನ್ನೂ ಕಾರ್ಯಕಾರಿ ಸದಸ್ಯತ್ತದಿಂದ ತೆಗೆದು ಹಾಕಲಾಗಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಅಮಿತ್ ಶಾ ಅವರನ್ನು ಒಳಗೊಂಡಂತೆ,ಪಕ್ಷದ ಹಿರಿಯರಾದ ಎಲ್ ಕೆ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಸದಸ್ಯರಾಗಿದ್ದಾರೆ. 80 ಸಾಮಾನ್ಯ ಸದಸ್ಯರಲ್ಲದೆ, ಕಾರ್ಯಕಾರಣಿಯಲ್ಲಿ 50 ವಿಶೇಷ ಆಹ್ವಾನಿತರು ಮತ್ತು 179 ಖಾಯಂ ಆಹ್ವಾನಿತರು ಇರುತ್ತಾರೆ. 80 ಸದಸ್ಯರಲ್ಲಿ 37 ಮಂದಿ ಕೇಂದ್ರ ಸಚಿವರು ಮತ್ತು ರಾಜ್ಯದ ಹಲವಾರು ಸಚಿವರು ಸಮಿತಿಯ ಭಾಗವಾಗಿದ್ದಾರೆ.

Exit mobile version