ಬೊಮ್ಮಾಯಿ ಸರ್ಕಾರದ ಘಟಾನುಘಟಿ ನಾಯಕರಿಗೆ ಸೋಲು : 14 ಸಚಿವರನ್ನು ಮನೆಗೆ ಕಳಿಸಿದ ಮತದಾರ;

Karnataka : ಕರ್ನಾಟಕ ವಿಧಾನಸಭಾ ಚುನಾವಣಾ (Karnataka assembly election) ಫಲಿತಾಂಶ ಹೊರಬೀಳುತ್ತಿದ್ದು, ಬಿಜೆಪಿ ವಿರುದ್ಧ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿದೆ. ಬಿಜೆಪಿಗೆ (BJP) ಭಾರಿ ಹಿನ್ನಡೆಯಾಗಿದ್ದು, ಅವರ 14 ಸಚಿವರು ಸೋಲಿನತ್ತ ಮುಖ ಮಾಡಿದ್ದಾರೆ. ಅದರಲ್ಲೂ ಕಾಂಗ್ರೆಸ್ ಅಲೆಯಿಂದ ನಲುಗಿ ಹೋಗಿರುವ ಘಟಾನುಘಟಿ ಸಚಿವರಿಗೆ ಇದರಿಂದ ಮುಖಭಂಗವಾಗಿದೆ.

ಇದು ಬಿಜೆಪಿಗೆ ನಿರಾಶಾದಾಯಕ ಫಲಿತಾಂಶವಾಗಿದೆ, ಏಕೆಂದರೆ ಅವರ ಸ್ಥಾಪಿತ ಮತ್ತು ಪ್ರಭಾವಿ ಸಚಿವರು ಕಾಂಗ್ರೆಸ್ (Congress) ಪಕ್ಷದಲ್ಲಿ ರಾಜಕೀಯ ಹೊಸಬರಿಂದ ಸೋಲಿಸಲ್ಪಟ್ಟರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ನೇತೃತ್ವದ ಸರ್ಕಾರದಲ್ಲಿ ಪ್ರಮುಖ ಸ್ಥಾನಗಳನ್ನು ಹೊಂದಿರುವ ಹಲವಾರು ಪ್ರಮುಖ ಮಂತ್ರಿಗಳ ಸೋಲಿನಿಂದ ತೋರಿಸಲ್ಪಟ್ಟಂತೆ ಇತ್ತೀಚಿನ ಚುನಾವಣೆಗಳ ಫಲಿತಾಂಶವು ಬಿಜೆಪಿಗೆ ವಿರೋಧದ ಸ್ಪಷ್ಟ ಪ್ರವೃತ್ತಿಯನ್ನು ಸೂಚಿಸುತ್ತದೆ.

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸತತ ರ್ಯಾಲಿ ಮತ್ತು ರೋಡ್ ಶೋ ನಡೆಸಿದರೂ ಬಿಜೆಪಿ ಅಭ್ಯರ್ಥಿಗಳಿಗೆ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಎರಡು ಪ್ರತ್ಯೇಕ ಕ್ಷೇತ್ರಗಳಲ್ಲಿ ಸಚಿವ ವಿ ಸೋಮಣ್ಣ (V.Somanna) ಗೆಲುವು ಸಾಧಿಸಲು ವಿಫಲರಾಗಿದ್ದರೆ, ಕನಕಪುರದಲ್ಲಿ ಆರ್ ಅಶೋಕ್ ಗಮನಾರ್ಹ ಸೋಲು ಅನುಭವಿಸಿದ್ದಾರೆ.

ಇದನ್ನೂ ಓದಿ : https://vijayatimes.com/yeddyurappa-demand-for-congress/

ಯಾರು ಯಾರಿಗೆ ಗೆಲುವು?

ಬಿಜೆಪಿ ಸರ್ಕಾರದ (BJP Govt) ಸಚಿವ ಸಂಪುಟದಲ್ಲಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಆರಗ ಜ್ಞಾನೇಂದ್ರ, ಶಶಿಕಲಾ ಜೊಲ್ಲೆ, ಪ್ರಭು ಚವ್ಹಾಣ್‌, ಸುನೀಲ್‌ ಕುಮಾರ್‌, ಶಿವರಾಮ್‌ ಹೆಬ್ಬಾರ್‌, ಭೈರತಿ ಬಸವರಾಜ್‌, ಎಸ್‌ಟಿ ಸೋಮಶೇಖರ್‌, ಮುನಿರತ್ನ, ಕೆ ಗೋಪಾಲಯ್ಯ ಮಾತ್ರ ಗೆಲುವು ಸಾಧಿಸಿದ್ದಾರೆ. ಆಡಳಿತ ವಿರೋಧಿ ಅಲೆ ಈ ಮೂಲಕ ವ್ಯಾಪಕವಾಗಿರುವುದು ಕಂಡುಬಂದಿದೆ. ಈ ಬಾರಿ ಸಚಿವ ಎಸ್‌ ಅಂಗಾರಗೆ ಟಿಕೆಟ್‌ ನೀಡಿದ್ದಿಲ್ಲ. ವಿಜಯನಗರದಿಂದ ಸ್ಪರ್ಧಿಸಿರುವ ಆನಂದ್‌ ಸಿಂಗ್‌ ಪುತ್ರ ಸಿದ್ದಾರ್ಥ್‌ ಸಿಂಗ್‌ ಸೋಲು ಅನುಭವಿಸಿದ್ದಾರೆ.

ಯಾವೆಲ್ಲಾ ಸಚಿವರು ಪರಾಭವಗೊಂಡಿದ್ದಾರೆ?

ವಿ ಸೋಮಣ್ಣ – ಚಾಮರಾಜನಗರ, ವರುಣಾ
ಆರ್‌ ಅಶೋಕ್‌ – ಕನಕಪುರ (kanakapura)
ಮುರುಗೇಶ್ ನಿರಾಣಿ – ಬೀಳಗಿ
ಗೋವಿಂದ ಕಾರಜೋಳ – ಮುಧೋಳ (Mudhola)
ಡಾ ಕೆ ಸುಧಾಕರ್‌ – ಚಿಕ್ಕಬಳ್ಳಾಪುರ
ಮಾಧುಸ್ವಾಮಿ – ಚಿಕ್ಕನಾಯಕನಹಳ್ಳಿ

ಇದನ್ನೂ ಓದಿ : https://vijayatimes.com/chikkaballapur-assembly-election-results/


ಬಿಸಿ ನಾಗೇಶ್‌ – ತಿಪಟೂರು
ಬಿಸಿ ಪಾಟೀಲ್‌ – ಹಿರೇಕೆರೂರು
ಸಿಸಿ ಪಾಟೀಲ್‌ – ನರಗುಂದ
ಶ್ರೀರಾಮುಲು – ಬಳ್ಳಾರಿ ಗ್ರಾಮಾಂತರ
ಎಂಟಿಬಿ ನಾಗರಾಜ್‌ – ಹೊಸಕೋಟೆ
ಕೆಸಿ ನಾರಾಯಣಗೌಡ – ಕೆಆರ್‌ ಪೇಟೆ (KR Pete)
ಹಾಲಪ್ಪ ಆಚಾರ್‌ – ಯಲಬುರ್ಗಾ
ಶಂಕರ್‌ ಪಾಟೀಲ್‌ ಮುನೇನಕೊಪ್ಪ

Exit mobile version