ಈಶಾನ್ಯ ರಾಜ್ಯಗಳ ಚುನಾವಣೆ : ಬಿಜೆಪಿ ಪ್ರಾಬಲ್ಯ, ಕಂಗಾಲಾದ ಕೈ-ಕಮ್ಯೂನಿಷ್ಟ

Agartala: ಈಶಾನ್ಯ ಭಾರತದ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಏಣಿಕೆ ಇಂದು ನಡೆಯುತ್ತಿದೆ. ಆರಂಭಿಕ ಟ್ರೆಂಡ್‌ನಲ್ಲಿ ಆಡಳಿತರೂಢ ಪಕ್ಷಗಳೇ ಮುನ್ನಡೆ ಕಾಯ್ದುಕೊಂಡಿವೆ. ಕಳೆದ ಬಾರಿಯಂತೆ ಈ ಬಾರಿಯೂ (bjp in eastern states) ಈಶಾನ್ಯ ರಾಜ್ಯಗಳಾದ ಈಶಾನ್ಯ ರಾಜ್ಯಗಳಾದ ತ್ರಿಪುರಾ(Tripura),

ಮೇಘಾಲಯ(Meghalaya) ಮತ್ತು ನಾಗಾಲ್ಯಾಂಡ್(Nagaland) ಬಿಜೆಪಿ ತನ್ನ ಪ್ರಾಬಲ್ಯವನ್ನು ಸಾಧಿಸಿದ್ದರೆ, ಕಾಂಗ್ರೆಸ್‌ ಮತ್ತು ಕಮ್ಯೂನಿಷ್ಟ ಪಕ್ಷಗಳು ಮತದಾರರ ಮನಗೆಲ್ಲುವಲ್ಲಿ ಸೋತಿವೆ.

ತ್ರಿಪುರಾದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) 24 ಸ್ಥಾನಗಳಲ್ಲಿ, ನಾಗಾಲ್ಯಾಂಡ್‌ನಲ್ಲಿ ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ (ಎನ್‌ಡಿಪಿಪಿ)

17 ರಲ್ಲಿ ಮತ್ತು ಮೇಘಾಲಯದಲ್ಲಿ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) 17 ರಲ್ಲಿ ಮುನ್ನಡೆ ಕಾಯ್ದುಕೊಂಡಿವೆ. ಎಲ್ಲಾ ಮೂರು ರಾಜ್ಯಗಳು 60 ವಿಧಾನಸಭಾ ಸ್ಥಾನಗಳನ್ನು ಹೊಂದಿವೆ.

Narendra Modi

ತ್ರಿಪುರಾದಲ್ಲಿ ಫೆಬ್ರವರಿ 16 ರಂದು ಮತ್ತು ಮೇಘಾಲಯ ಮತ್ತು ನಾಗಾಲ್ಯಾಂಡ್‌ನಲ್ಲಿ ಫೆಬ್ರವರಿ 27 ರಂದು ಮತದಾನ ನಡೆದಿದ್ದು,

ಒಟ್ಟು 6.1 ಮಿಲಿಯನ್(Million) ನೋಂದಾಯಿತ ಮತದಾರರಲ್ಲಿ ಸುಮಾರು 86% ರಷ್ಟು ಜನರು ಮೂರು ರಾಜ್ಯಗಳಲ್ಲಿ ಮತ ಚಲಾಯಿಸಿದ್ದರು.

ತ್ರಿಪುರಾದಲ್ಲಿ ಕಾಂಗ್ರೆಸ್ (Congress)ಮತ್ತು ಅದರ ಮಿತ್ರ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಅಥವಾ ಸಿಪಿಐ (ಎಂ) 18 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ತಿಪುರಾ ಮೋರ್ಚಾ ಕೂಡ 11 ಸ್ಥಾನಗಳಲ್ಲಿ ಮುಂದಿದೆ.

ಇನ್ನು ಟೌನ್ ಬರ್ಡೋವಾಲಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಮಾಣಿಕ್ ಸಹಾ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ಆಶಿಶ್ ಕುಮಾರ್(Ashish Kumar) ಸಹಾ ಅವರಿಗಿಂತ 344 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಕಾಂಗ್ರೆಸ್ ನಾಯಕ ಸುದೀಪ್ ರಾಯ್ ಬರ್ಮನ್ (Sudeep Roy Burman) ಬಿಜೆಪಿಯ ಪಾಪಿಯಾ ದತ್ತಾ ಅವರಿಗಿಂತ 1,670 ಮತಗಳಿಂದ ಮುಂದಿದ್ದಾರೆ.

ಬನಮಾಲಿಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೋಪಾಲ್ ರಾಯ್ ಮುನ್ನಡೆ ಸಾಧಿಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ರಾಜೀಬ್ ಭಟ್ಟಾಚಾರ್ಯ ಅವರು 300ಕ್ಕೂ ಹೆಚ್ಚು ಮತಗಳಿಂದ ಹಿಂದುಳಿದಿದ್ದಾರೆ.

NDDP-BJP

ಖಯೇರ್‌ಪುರದಲ್ಲಿ ಸಿಪಿಐ(ಎಂ)ನ ಪಬಿತ್ರಾ ಕರ್ ಅವರು ಬಿಜೆಪಿಯ ವಿಧಾನಸಭಾ ಸ್ಪೀಕರ್ ರತನ್ ಚಕ್ರವರ್ತಿ(Ratan Chakravarthy) ಅವರಿಗಿಂತ ಸುಮಾರು 3,000 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಜಿತೇಂದ್ರ ಚೌಧರಿ (Jitendra Chowdhury)ಸಬ್ರೂಮ್‌ನಲ್ಲಿ ಬಿಜೆಪಿಯ ಶಂಕರ್ ರಾಯ್ (bjp in eastern states) ವಿರುದ್ಧ 660 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಆಡಳಿತಾರೂಢ ಎನ್‌ಡಿಪಿಪಿ-ಬಿಜೆಪಿ ಮೈತ್ರಿ ನಾಗಾಲ್ಯಾಂಡ್‌ನಲ್ಲಿ ಮುನ್ನಡೆಯುತ್ತಿದೆ. ಆರಂಭಿಕ ಟ್ರೆಂಡ್‌ಗಳ ಪ್ರಕಾರ,

ಎನ್‌ಡಿಪಿಪಿ-ಬಿಜೆಪಿ 25 ಸ್ಥಾನಗಳಲ್ಲಿ ಮುಂದಿದ್ದರೆ, ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್) ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ.

ಎನ್‌ಡಿಪಿಪಿ ಮತ್ತು ಬಿಜೆಪಿ 40:20 ಸೀಟು ಹಂಚಿಕೆ ಆಧಾರದ ಮೇಲೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದವು. NDDP-BJP ಮೈತ್ರಿ ನಾಗಾಲ್ಯಾಂಡ್‌ನಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿವೆ.

ಮೇಘಾಲಯದಲ್ಲಿ ಆಡಳಿತಾರೂಢ ಎನ್‌ಪಿಪಿ 19 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಪ್ರತಿಪಕ್ಷ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಐದರಲ್ಲಿ ಮುಂದಿದೆ. ಎಕ್ಸಿಟ್ ಪೋಲ್‌ಗಳು ಅತಂತ್ರ ವಿಧಾನಸಭೆಯನ್ನು ಭವಿಷ್ಯ ನುಡಿದಿವೆ.

ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ಅವರು ಅಸ್ಸಾಂನ ಬಿಜೆಪಿಯ ಹಿಮಂತ ಬಿಸ್ವಾ ಶರ್ಮಾ ಅವರನ್ನು ಭೇಟಿ ಮಾಡಿದ್ದು, ಚುನಾವಣಾ ನಂತರದ ಮೈತ್ರಿಯ ಊಹಾಪೋಹಗಳಿಗೆ ಉತ್ತೇಜನ ನೀಡಿದ್ದಾರೆ.

ಸಂಗ್ಮಾ ಅವರ ಎನ್‌ಪಿಪಿ ಮತ್ತು ಬಿಜೆಪಿ ಕಳೆದ ಬಾರಿ ಮೈತ್ರಿ ಸರ್ಕಾರವನ್ನು ನಡೆಸಿದ್ದವು. ಆದರೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿರಲಿಲ್ಲ.

Exit mobile version