ಈಗ ಪಾಕಿಸ್ಥಾನಿ ಬೆಂಬಲಿಗ ನಾಯಕನಿಗೆ ರಾಜ್ಯಸಭೆಯ ಸದಸ್ಯನ ಪಟ್ಟ: ಬಿಜೆಪಿ ಕಿಡಿ

ಕಾಂಗ್ರೆಸ್ಸಿನ (Congress) ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ (Naseer Hussain) ಪರ ಕಿಡಿಗೇಡಿ ಬೆಂಬಲಿಗರು (BJP Lashed out Against Congress) ಪಾಕಿಸ್ಥಾನ್

ಜಿಂದಾಬಾದ್ ಎಂದು ಸ್ಪಷ್ಟವಾಗಿ ಕೂಗಿದ್ದರೂ, ಕಾಂಗ್ರೆಸ್ ಇದನ್ನೂ ಸಮರ್ಥನೆ ಮಾಡುವ ಕೆಳಮಟ್ಟಕ್ಕೆ ಇಳಿದಿದೆ ಎಂದರೆ ಭಾರತ ವಿರೋಧಿ ಮನಸ್ಥಿತಿ ಎಷ್ಟಿದೆ ಎಂಬುದು ಸ್ಪಷ್ಟವಾಗುತ್ತಿದೆ.

ವಿಡಿಯೋ ಸಾಕ್ಷ್ಯವಿದ್ದರೂ, ವರದಿಗಾರರು ಸ್ಥಳದಲ್ಲಿ ಎರಡು ಬಾರಿ ಪಾಕಿಸ್ಥಾನ್ ಜಿಂದಾಬಾದ್ ಘೋಷಣೆಯನ್ನು ಪ್ರತ್ಯಕ್ಷವಾಗಿ ಕೇಳಿಸಿಕೊಂಡು ಕಂಡಿದ್ದರೂ ಕಾಂಗ್ರೆಸ್ಸಿಗರು ಹಾಗೂ ಅವರ

ಕೃಪಾಪೋಷಿತ ಮಾಧ್ಯಮಗಳು ತಿರುಚುವ (BJP Lashed out Against Congress) ಕೆಲಸ ಮಾಡುತ್ತಿದ್ದಾರೆ.

ಮಜಾವಾದಿ ಸಿದ್ದರಾಮಯ್ಯ (Siddaramaiah) ಸರ್ಕಾರ, ಇಂತಹ ದೇಶ ದ್ರೋಹಿಗಳ ವಿರುದ್ಧ ಕೂಡಲೇ ಕ್ರಮಕೈಗೊಳ್ಳಬೇಕು. ಇವರಿಗೂ ಕ್ಲೀನ್ ಚೀಟ್ (Clean Cheet) ಕೊಡಲು

ಮುಂದಾದರೆ, ತಕ್ಕ ಶಾಸ್ತಿ ಅನುಭವಿಸುವುದು ಗ್ಯಾರಂಟಿ!ಪಾಕಿಸ್ಥಾನಿ ಸಹಾನುಭೂತಿಗೆ ರಾಜಾತಿಥ್ಯ ನೀಡಿದ್ದಾಯಿತು – ಈಗ ಪಾಕಿಸ್ಥಾನಿ ಬೆಂಬಲಿಗ ನಾಯಕನಿಗೆ ರಾಜ್ಯಸಭೆಯ

ಸದಸ್ಯನ ಪಟ್ಟ. ಇದು ಕಾಂಗ್ರೆಸ್ ಕರ್ನಾಟಕವನ್ನು ಭಾರತ ವಿರೋಧಿ ಕೇಂದ್ರವನ್ನಾಗಿಸಿರುವ ಪರಿಎಂದು ಬಿಜೆಪಿ (BJP) ವಾಗ್ದಾಳಿ ನಡೆಸಿದೆ.

ಇನ್ನೊಂದೆಡೆ ಈ ಕುರಿತು ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿರುವ ಸಂಸದ ತೇಜಸ್ವಿ ಸೂರ್ಯ (Tejaswi Surya), ಭಯೋತ್ಪಾದಕರಿಗೆ ಬ್ರದರ್ಸ್, ಅಮಾಯಕರು ಎಂಬ ಪಟ್ಟ

ಕಟ್ಟಿದ ಕಾಂಗ್ರೆಸ್ನ ತುಷ್ಟೀಕರಣದ ರಾಜಕೀಯದ ಫಲಿತಾಂಶ ಪದೇ ಪದೇ ಕರ್ನಾಟಕದಲ್ಲಿ ಕಾಣ ಸಿಗುತ್ತಿದೆ. ಓಲೈಕೆ ರಾಜಕಾರಣದ ಪಿತಾಮಹ ಸಿಎಂ ಸಿದ್ದರಾಮಯ್ಯ ಅವರು ಹಾಗೂ

ಕಾಂಗ್ರೆಸ್ನ ಇತರ ನಾಯಕರು ಪಾಕಿಸ್ಥಾನಿ ಸಹಾನುಭೂತಿಗಳಿಗೆ ಕೆಲವೇ ಸಮಯದಲ್ಲಿ ಕ್ಲೀನ್ ಚಿಟ್ ನೀಡಲು ಸದಾ “ಸಿದ್ದ”ವಾಗಿರುತ್ತಾರೆ.

ಈ ಪ್ರಕರಣದ ಸಮಗ್ರ ತನಿಖೆಯಾಗಬೇಕು ಎಂದು ನಾವು ಒತ್ತಾಯಿಸುತ್ತೇವೆ. ಕಾಂಗ್ರೆಸ್ನ ದೇಶ ವಿರೋಧಿ ಕಾರ್ಯಾಚರಣೆಗೆ ಕರ್ನಾಟಕ ಪ್ರಯೋಗ ಶಾಲೆಯಾಗಲು ನಾವೆಂದಿಗೂ

ಬಿಡುವುದಿಲ್ಲ. ಕಾಂಗ್ರೆಸ್ ನ ಮನಸ್ಥಿತಿ ಮತ್ತೆ ಮತ್ತೆ ಅನಾವರಣಗೊಳ್ಳುತ್ತಿದೆ… ಸಂವಿಧಾನವನ್ನು ರಕ್ಷಿಸುವ ವಿಧಾನಸೌಧದ ಎದುರೇ ಪಾಕಿಸ್ತಾನಕ್ಕೆ ಜಿಂದಾಬಾದ್ (Zindabad for

Pakistan) ಘೋಷಣೆ ಕೂಗುತ್ತಾರೆ ಎಂದರೆ ಕರ್ನಾಟಕದಲ್ಲಿ ಪರಿಸ್ಥಿತಿ ಎತ್ತ ಹೋಗುತ್ತಿದೆ. ಕಾಂಗ್ರೆಸ್ನ ಸೈಯದ್ ನಾಸೀರ್ ಹುಸೇನ್ ರಾಜ್ಯಸಭೆಗೆ ಆಯ್ಕೆಯಾದ ಗೆಲುವಿನ

ಸಂಭ್ರಮದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರಿಂದ ನಾಸೀರ್ ಹುಸೇನ್ ಪಕ್ಕದಲ್ಲೇ ಇರುವಾಗಲೇ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಲಾಗಿದೆ.

“ಸ್ವಯಂ” ಸಂವಿಧಾನ ತಜ್ಞ ಎಂದು ಕರೆದುಕೊಳ್ಳುವ ಮಾನ್ಯ ಮುಖ್ಯಮಂತ್ರಿಗಳೇ ಯಾವಾಗ ಇಂಥವರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೀರಾ? ಇಂದು ವಿಧಾನಸೌಧದ

(Vidhanasoudha) ಹೊರಾಂಗಣದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಾರೆ ನಾಳೆ ವಿಧಾನಸೌಧದ ಒಳಗೇ ಆಗಬಹುದೇನೋ ಎಂದು ಟೀಕಿಸಿದ್ದಾರೆ.

ಇದನ್ನು ಓದಿ: ಈಗ ಪಾಕಿಸ್ಥಾನಿ ಬೆಂಬಲಿಗ ನಾಯಕನಿಗೆ ರಾಜ್ಯಸಭೆಯ ಸದಸ್ಯನ ಪಟ್ಟ: ಬಿಜೆಪಿ ಕಿಡಿ

Exit mobile version