ಛತ್ತೀಸಗಡ್, ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಬಿಜೆಪಿ ಮುನ್ನಡೆ: ರಾಜ್ಯ ಬಿಜೆಪಿ ನಾಯಕರು ಹೇಳಿದ್ದೇನು?

Bengaluru: ರಾಜಸ್ಥಾನ, ಛತ್ತೀಸಗಡ್​, ಮಧ್ಯಪ್ರದೇಶ (Rajasthan, Chhattisgarh, Madhya Pradesh)ದಲ್ಲಿ ಬಿಜೆಪಿ ಮುನ್ನಡೆ (BJP lead in CG RJ MP) ಸಾಧಿಸಿದ್ದು, ವಿಧಾನಸಭೆ ಚುನಾವಣೆ

ಪಲಿತಾಂಶ ಪ್ರಕಟವಾಗುತ್ತಿದೆ. ತೆಲಂಗಾಣದಲ್ಲಿ ಕಾಂಗ್ರೆಸ್​ ಮುನ್ನಡೆಯಲ್ಲಿದ್ದು, ಈ ವಿಚಾರವಾಗಿ ಕರ್ನಾಟಕದ ಬಿಜೆಪಿ (BJP) ನಾಯಕರು ಮಾತನಾಡಿದ್ದಾರೆ.

ದೇಶದಲ್ಲಿ ಬಿಜೆಪಿಯ ಪರ ವಾತಾವರಣ ಇದೆ. ನರೇಂದ್ರ ಮೋದಿ (Narendra Modi) ಅವರು ಮತ್ತೆ ಪ್ರಧಾನಿ ಆಗಬೇಕೆಂದು ಜನ ಬಯಸಿದ್ದಾರೆ. ಸುನಾಮಿ ರೀತಿ ಭಾರತೀಯ ಜನತಾ ಪಾರ್ಟಿಯ

ಅಲೆ ಎದ್ದಿದೆ. ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ಬಹುಮತ ಪಡೆಯುತ್ತೆ ಎಂದು ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ (BY Vijayendra) ಹೇಳಿದರು.

ದೇಶದ ಜನರು ದೇಶದ ರಕ್ಷಣೆಯ ಗ್ಯಾರಂಟಿ ಬಯಸುತ್ತಿದ್ದಾರೆ. ಅಧಿಕಾರವನ್ನು ಕಬಳಿಸುವ ಗ್ಯಾರಂಟಿಯನ್ನು ಜನರು ಬಯಸುತ್ತಿಲ್ಲ. ಗ್ಯಾರಂಟಿ ಆಮಿಷವೊಡ್ಡಿ ರಾಜ್ಯದಲ್ಲಿ ಕಾಂಗ್ರೆಸ್ (Congress)

ಅಧಿಕಾರಕ್ಕೆ ಬಂದಿದೆ. ಇದರಿಂದ ರಾಜ್ಯದ ಜನರು ಪಶ್ಚಾತ್ತಾಪ ಪಡುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ. ಜೆಡಿಎಸ್ (JDS)​, ಬಿಜೆಪಿ ಒಟ್ಟಾಗಿ ಹೋರಾಡಿ 28

ಕ್ಷೇತ್ರವನ್ನೂ ಗೆಲ್ಲುತ್ತೇವೆ ಎಂದು ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ (BJP lead in CG RJ MP) ಮಾತನಾಡಿದರು

ಸನಾತನ ಧರ್ಮ, ಜಾತಿ ರಾಜಕೀಯ ಇಟ್ಟುಕೊಂಡು ಚುನಾವಣೆ ಮಾಡಿದರು. ಅಪಪ್ರಚಾರದ ಮೂಲಕ ಗೆಲ್ಲಬಹುದೆಂದು ನಿಲುವು ತೆಗೆದುಕೊಂಡಿದ್ದರು. ಆದರೆ ಛತ್ತೀಸ್​ಗಢ, ರಾಜಸ್ಥಾನ, ಮಧ್ಯಪ್ರದೇಶ

ಜನ ತಿರಸ್ಕಾರ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು.

ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಲೋಕಸಭಾ ಚುನಾವಣೆಯ ದಿಕ್ಸೂಚಿ. ಈ ಫಲಿತಾಂಶ ಸೆಮಿಫೈನಲ್ ಅಂತಾ ಒತ್ತಿ ಒತ್ತಿ ಸಿದ್ದರಾಮಯ್ಯ (Siddaramaiah) ಹೇಳುತ್ತಿದ್ದರು. ನಾಲ್ಕು ರಾಜ್ಯಗಳ

ಚುನಾವಣಾ ಫಲಿತಾಂಶ ಹಲವು ವಿಷಯಗಳಿಗೆ ಗ್ರಾಸವಾಗಿದೆ. ಕಾಂಗ್ರೆಸ್​ನವರು ಮೋದಿ ಅವರನ್ನು ಟಾರ್ಗೆಟ್ ಮಾಡಿ ಚುನಾವಣೆ ಮಾಡಿದರು.

ತೆಲಂಗಾಣದಲ್ಲಿ ಕರ್ನಾಟಕಕ್ಕಿಂತ (Karnataka) ಹೆಚ್ಚು ಗ್ಯಾರಂಟಿ ಭರವಸೆ ನೀಡಿದ್ದು, ಈ ಮೂಲಕ ತೆಲಂಗಾಣದಲ್ಲಿ ಮೋಸ ಮಾಡುವ ಪ್ರಯತ್ನ ಮಾಡಿದ್ದಾರೆ. ಗ್ಯಾರಂಟಿ ವಿಷಯದಲ್ಲಿ ಹೇಳಿದ್ದೆ ಒಂದು,

ಮಾಡಿದ್ದೇ ಬೇರೆ ಅಂತ ಜನರಿಗೆ ಗೊತ್ತಾಗಿದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್​ಗಢದಲ್ಲಿ ಅವರ ಆಟ ನಡೆಯಲಿಲ್ಲ. ತೆಲಂಗಾಣದಲ್ಲಿ(Telangana) ಲೋಕಸಭಾ ಚುನಾವಣೆ ಕಾಂಗ್ರೆಸ್ ವರ್ಸಸ್ ಬಿಜೆಪಿ ಇದೆ.

ಇಂಡಿಯಾ ಮೈತ್ರಿಕೂಟ ಲೋಕಸಭಾ ಚುನಾವಣೆ ವೇಳೆಗೆ ಕುಸಿಯಲಿದೆ ಎಂದು ಭವಿಷ್ಯ ನುಡಿದರು.

ಬಿಜೆಪಿ ಗೆಲುವಿಗೆ ಮೋದಿ, ಅಮಿತ್ ಷಾ (Amit Shah), ನಡ್ಡಾ ಕಾರಣ. ಕಾಂಗ್ರೆಸ್​ನಲ್ಲಿ ದೇಶ ಆಳುವ ನಾಯಕ ಇಲ್ಲ ಎಂಬುದು ಮತ್ತೆ ಮತ್ತೆ ಸ್ಪಷ್ಟವಾಗುತ್ತಿದೆ. ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರ ಗೆಲ್ಲುತ್ತೇವೆ.

ಅಧಿವೇಶನ ಮುಗಿದ ಮೇಲೆ ನಾನು ರಾಜ್ಯದಲ್ಲಿ ಪ್ರವಾಸ ಮಾಡುತ್ತೇನೆ. ವಿಜಯೇಂದ್ರ (Vijayendra) ರಾಜ್ಯಾಧ್ಯಕ್ಷರಾದ ಮೇಲೆ ಎಲ್ಲಾ ಕಡೆ ನಂಬಿಕೆ, ವಿಶ್ವಾಸ ಬಂದಿದೆ. ಎಸ್​ಸಿ, ಎಸ್​ಟಿ, ಓಬಿಸಿ

(SC, ST, OBC) ವರ್ಗವನ್ನು ಜೊತೆಗೆ ಒಯ್ಯುವ ಮೂಲಕ ಪಕ್ಷ ಬಲಪಡಿಸುತ್ತೇವೆ. ಬಿಜೆಪಿ ರಾಜ್ಯದಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲು ಈ ಫಲಿತಾಂಶ ಉಪಕಾರಿಯಾಗಿದೆ ಎಂದರು.

ಇದನ್ನು ಓದಿ: ಸರಿಯೋ ತಪ್ಪೋ ನೀವು ಪರಿಹಾರವನ್ನೇ ಘೋಷಿಸಿಲ್ಲ ಎಂದು ಹೇಳಿರುವುದು ಸಹ ಸತ್ಯ ; ಸಿಎಂ ಸಿದ್ದುಗೆ ತೇಜಸ್ವಿ ಸೂರ್ಯ ತಿರುಗೇಟು

Exit mobile version