ಹಿಂದೂ ಧರ್ಮದ ವಿರುದ್ಧ ದೇವಸ್ಥಾನದಲ್ಲಿ ಮದುವೆಯಾಗಲು ಬಿಡುವುದಿಲ್ಲ : ಬಿಜೆಪಿ ನಾಯಕಿ!

BJP

ಗುಜರಾತ್(Gujarat) ರಾಜ್ಯದ ಯುವತಿ ಕ್ಷಮಾ ಬಿಂದು(Kshama Bindu) ತನ್ನನ್ನು ತಾನೇ ವಿವಾಹವಾಗಲು ಹೊರಟ ಸುದ್ದಿ ಇಡೀ ದೇಶಾದ್ಯಂತ ವ್ಯಾಪಕವಾಗಿ ಹರಿಡಿದ ಬೆನ್ನಲ್ಲೇ ಬಿಜೆಪಿ ನಾಯಕಿ(BJP Leader),

ಬಿಜೆಪಿ ನಗರ ಘಟಕದ ಉಪ ಮುಖ್ಯಸ್ಥೆ ಸುನೀತಾ ಶುಕ್ಲಾ(Sunitha Shukla) ಅವರು ಜೂನ್ 11 ರಂದು ವಡೋದರದ 24 ವರ್ಷದ ಕ್ಷಮಾ ಬಿಂದು ತನ್ನನ್ನು ತಾನು ಸ್ವಯಂ ಪ್ರೇರಿತವಾಗಿ ಮದುವೆಯಾಗುವ ನಿರ್ಧಾರ ಮಾಡಿರುವುದನ್ನು ತೀವ್ರವಾಗಿ ಖಂಡಿಸಿ, ಪ್ರತಿಕ್ರಿಯಿಸಿದ್ದಾರೆ. ಈ ರೀತಿ ಮದುವೆಯಾಗುವುದರಿಂದ ಹಿಂದೂ ಜನಸಂಖ್ಯೆಯು ಕಡಿಮೆಯಾಗುತ್ತದೆ ಮತ್ತು ಅವಳು ದೇವಸ್ಥಾನದಲ್ಲಿ ಮದುವೆಯಾಗುತ್ತಿದ್ದರೆ, ನಾವು ಅವಳನ್ನು ಹಾಗೆ ಮಾಡಲು ಬಿಡುವುದಿಲ್ಲ ಎಂದು ಸುನೀತಾ ಶುಕ್ಲಾ ಹೇಳಿಕೆ ನೀಡಿದ್ದಾರೆ.

ಇಂತಹ ವಿವಾಹಗಳು ಹಿಂದೂ ಧರ್ಮಕ್ಕೆ ವಿರುದ್ಧವಾಗಿವೆ. ಕ್ಷಮಾ ಬಿಂದು ಮಾನಸಿಕ ಅಸ್ವಸ್ಥೆಯಾಗಿದ್ದಾಳೆ ಎಂದು ಸುನೀತಾ ಶುಕ್ಲಾ ಆರೋಪಿಸದ್ದಾರೆ. ಹಿಂದೂ ಸಂಸ್ಕೃತಿಯಲ್ಲಿ ಎಲ್ಲಿಯೂ ಹುಡುಗ ಹುಡುಗನನ್ನು ಮದುವೆಯಾಗಬಹುದು ಅಥವಾ ಹುಡುಗಿ ಹುಡುಗಿಯನ್ನು ಮದುವೆಯಾಗಬಹುದು ಎಂದು ಬರೆಯಲಾಗಿಲ್ಲ. “ನಾನು ಆಕೆ ನಿರ್ಧರಿಸುವ ಸ್ಥಳದ ಆಯ್ಕೆಯನ್ನು ವಿರೋಧಿಸುತ್ತೇನೆ, ಆಕೆಯನ್ನು ಯಾವುದೇ ದೇವಸ್ಥಾನದಲ್ಲಿ ಮದುವೆಯಾಗಲು ಅನುಮತಿ ನೀಡುವುದಿಲ್ಲ. ಇಂತಹ ವಿವಾಹಗಳು ಹಿಂದೂ ಧರ್ಮಕ್ಕೆ ವಿರುದ್ಧವಾಗಿವೆ.

ಇದರಿಂದ ಹಿಂದೂಗಳ ಜನಸಂಖ್ಯೆ ಕೂಡ ಕಡಿಮೆಯಾಗುತ್ತದೆ. ಧರ್ಮಕ್ಕೆ ವಿರುದ್ಧವಾಗಿ ಏನಾದರೂ ನಡೆದರೆ, ಯಾವುದೇ ಕಾನೂನು ಜಾರಿಯಾಗುವುದಿಲ್ಲ ಎಂದು ಸುನೀತಾ ಶುಕ್ಲ ಹೇಳಿದ್ದಾರೆ. ಕ್ಷಮಾ ಅವರು ಸಮಾಜಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ ಮತ್ತು ಪ್ರಸ್ತುತ ಖಾಸಗಿ ಕಂಪನಿಯೊಂದರಲ್ಲಿ ಹಿರಿಯ ನೇಮಕಾತಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಕೆಯ ತಂದೆ-ತಾಯಿ ಇಬ್ಬರೂ ಇಂಜಿನಿಯರ್‌ಗಳು. ಆಕೆಯ ತಂದೆ ದಕ್ಷಿಣ ಆಫ್ರಿಕಾದಲ್ಲಿದ್ದಾರೆ ಮತ್ತು ತಾಯಿ ಅಹಮದಾಬಾದ್‌ನಲ್ಲಿದ್ದಾರೆ.

ಹೆಚ್ಚಿನ ಹುಡುಗಿಯರು ಕುದುರೆಯ ಮೇಲೆ ಬಂದು ತಮ್ಮೊಂದಿಗೆ ಕರೆದುಕೊಂಡು ಹೋಗುವ ವರನ ಕನಸು ಕಾಣುತ್ತಿದ್ದರೆ, ಕ್ಷಮಾ ತನ್ನ ವರನನ್ನು ತನ್ನೊಳಗೆ ಕಂಡುಕೊಂಡಿದ್ದಾಳೆ ಎಂಬುದು ವಿಚಿತ್ರ ಎಂದೇ ಹೇಳಬಹುದು. ಆಕೆಯ ಹೇಳಿಕೆ ಅನುಸಾರ, ಆಕೆ ತನ್ನನ್ನು ತಾನು ತುಂಬಾ ಇಷ್ಟಪಡುತ್ತಾಳೆ, ಅವಳು ಬೇರೆಯವರನ್ನು ಮದುವೆಯಾಗಲು ಬಯಸುವುದಿಲ್ಲ. ಅನ್ಯ ಹುಡುಗಿಯರು ಅವರು ಯಾರನ್ನು ಹೆಚ್ಚು ಪ್ರೀತಿಸುತ್ತಾರೆ ಅವರನ್ನು ಮದುವೆಯಾಗಲು ಬಯಸುತ್ತಾರೆ.

ಆದ್ರೆ, ನಾನು ನನ್ನನ್ನು ಹೆಚ್ಚು ಪ್ರೀತಿಸುತ್ತೇನೆ, ಹೀಗಾಗಿ ನನ್ನನ್ನು ನಾನೇ ಮದುವೆಯಾಗಲು ಬಯಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

Exit mobile version