ತೈಲಬೆಲೆ ಹೆಚ್ಚಿರುವ 10 ರಾಜ್ಯಗಳ ಪೈಕಿ 8ರಲ್ಲಿ ವಿಪಕ್ಷಗಳು ಆಡಳಿತ ನಡೆಸುತ್ತಿವೆ : ಬಿಜೆಪಿ!

oil price

ದೇಶದಲ್ಲಿ ತೈಲಬೆಲೆ(Oil Price) ಅಧಿಕವಾಗಿರುವುದರಿಂದ ವಿಪಕ್ಷಗಳು ನರೇಂದ್ರ ಮೋದಿ(Narendra Modi) ನೇತೃತ್ವದ ಕೇಂದ್ರ ಸರ್ಕಾರದ(Central Government) ವಿರುದ್ದ ಸತತ ವಾಗ್ದಾಳಿ ನಡೆಸುತ್ತಿವೆ.

ಕೇಂದ್ರ ಸರ್ಕಾರ ಇಂಧನದ ಮೇಲೆ ಅಧಿಕ ತೆರಿಗೆ ವಿಧಿಸುತ್ತಿದೆ, ಹೀಗಾಗಿ ತೈಲಬೆಲೆ ಏರಿಕೆಯಾಗಿದೆ. ಕೂಡಲೇ ಕೇಂದ್ರ ಸರ್ಕಾರ ತೈಲಬೆಲೆ ಇಳಿಸಲು ಕೇಂದ್ರ ಅಬಕಾರಿ ಸುಂಕವನ್ನು ಕಡಿಮೆ ಮಾಡಬೇಕೆಂದು ಆಗ್ರಹಿಸಿದ್ದವು. ವಿಪಕ್ಷಗಳ ಟೀಕೆಗಳಿಗೆ ಬಿಜೆಪಿ ಇದೀಗ ಉತ್ತರ ನೀಡಿದೆ. ದೇಶದಲ್ಲಿ ತೈಲಬೆಲೆ ಹೆಚ್ಚಾಗಲು ಕೇಂದ್ರ ಸರ್ಕಾರ ಮಾತ್ರ ಕಾರಣವಲ್ಲ. ರಾಜ್ಯಗಳ ಕೂಡಾ ವ್ಯಾಟ್ (ಮೌಲ್ಯವರ್ಧಿತ ತೆರಿಗೆ) ವಿಧಿಸುತ್ತಿವೆ. ಹೀಗಾಗಿ ತೈಲಬೆಲೆ ಏರಿಕೆ ಕಂಡಿದೆ ಎಂದು ಬಿಜೆಪಿ ವಾದಿಸಿದೆ. ತೈಲಬೆಲೆ ಅಧಿಕವಾಗಿರುವ 10 ರಾಜ್ಯಗಳ ಪಟ್ಟಿ ಮಾಡಿರುವ ಬಿಜೆಪಿ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ.

ತೈಲಬೆಲೆ ಅಧಿಕವಾಗಿರುವ 10 ರಾಜ್ಯಗಳ ಪೈಕಿ 8 ರಾಜ್ಯಗಳಲ್ಲಿ ವಿಪಕ್ಷಗಳು ಆಡಳಿತ ನಡೆಸುತ್ತಿವೆ. ಭಾರತದಂತ ಆರ್ಥಿಕತೆಗೆ ಹೋಲಿಸಿದರೆ ಅವರ ವೆಚ್ಚಗಳು ತುಲನಾತ್ಮಕವಾಗಿ ಕಡಿಮೆ. ಭಾರತ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವ ರಾಷ್ಟ್ರವಾಗಿರುವುದರಿಂದ ತೈಲೆಬೆಲೆಗಳಲ್ಲಿ ಸದಾ ಋಣಾತ್ಮಕ ಪರಿಣಾಮ ಇರುತ್ತದೆ ಎಂದು ಹೇಳುವ ಮೂಲಕ ಬಿಜೆಪಿ ವಿಪಕ್ಷಗಳ ಆರೋಪವನ್ನು ತಳ್ಳಿಹಾಕಿದೆ. ಆಂಧ್ರಪ್ರದೇಶ (121.40 ರೂ.) ಮಹಾರಾಷ್ಟ್ರ (120.51 ರೂ.) ತೆಲಂಗಾಣ (119.49) ಈ ಮೂರು ರಾಜ್ಯಗಳು ಅತ್ಯಧಿಕ ಪೆಟ್ರೋಲ್ ಬೆಲೆ ಹೊಂದಿರುವ ರಾಜ್ಯಗಳಾಗಿವೆ.

ಅದೇ ರೀತಿ ಆಂಧ್ರಪ್ರದೇಶ (107) ತೆಲಂಗಾಣ (105.49) ಮಹಾರಾಷ್ಟ್ರ (104.77) ಅತ್ಯಧಿಕ ಡಿಸೇಲ್ ಬೆಲೆ ಹೊಂದಿರುವ ರಾಜ್ಯಗಳಾಗಿವೆ. ಈ ಯಾವ ರಾಜ್ಯದಲ್ಲೂ ಬಿಜೆಪಿ ಆಡಳಿತ ನಡೆಸುತ್ತಿಲ್ಲ. ಇನ್ನು ಡಿಎಂಕೆ ಆಡಳಿತವಿರುವ ತಮಿಳುನಾಡು, ಟಿಎಂಸಿ ಆಡಳಿತವಿರುವ ಪಶ್ಚಿಮ ಬಂಗಾಳ, ಸಿಪಿಎಂ ಆಡಳಿತವಿರುವ ಕೇರಳ, ಜಾರ್ಖಂಡ್ ಮುಕ್ತಿ ಮೋರ್ಚಾ ಆಡಳಿತವಿರುವ ಜಾರ್ಖಂಡ್‍ನಲ್ಲಿ ಕೇಂದ್ರ ಸರ್ಕಾರ ಈ ಹಿಂದೆ ಅಬಕಾರಿ ಸುಂಕ ಕಡಿತಗೊಳಿಸಿದಾಗ ತಮ್ಮ ಪಾಲಿನ ವ್ಯಾಟ್ ಅನ್ನು ಕಡಿತಗೊಳಿಸಲಿಲ್ಲ. ಹೀಗಾಗಿ ಈ ರಾಜ್ಯಗಳಲ್ಲಿ ಕೂಡಾ ತೈಲಬೆಲೆ ಅಧಿಕವಾಗಿದೆ ಎಂದು ಬಿಜೆಪಿ ಹೇಳಿದೆ.

Exit mobile version