ಕೇಂದ್ರ ಲೋಕಸೇವಾ ಆಯೋಗವು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಾದ (Central Police Force Jobs) ಗಡಿ ಭದ್ರತಾ ಪಡೆ (Border Security Force), ಕೇಂದ್ರ ಮೀಸಲು ಪೊಲೀಸ್ ಪಡೆ,
ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ಇಂಡೊ-ಟೆಬೆಟನ್ ಗಡಿ ಪೊಲೀಸ್ ಮತ್ತು ಸಶಸ್ತ್ರ ಸೀಮಾ ಬಲ ಪಡೆಗಳಲ್ಲಿ ಅನೇಕ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ.
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ಲೈನ್ (Central Police Force Jobs) ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.
ಹುದ್ದೆಗಳ ವಿವರ :
ಗಡಿ ಭದ್ರತಾ ಪಡೆ: 186
ಕೇಂದ್ರ ಮೀಸಲು ಪೊಲೀಸ್ ಪಡೆ : 120
ಸಶಸ್ತ್ರ ಸೀಮಾ ಬಲ : 42
ಇಂಡೊ-ಟೆಬೆಟನ್ ಗಡಿ ಪೊಲೀಸ್: 58
ಕೇಂದ್ರ ಕೈಗಾರಿಕಾ ಭದ್ರತಾ ಪಡೆ: 100
ಒಟ್ಟು ಹುದ್ದೆಗಳು : 506
ವಿದ್ಯಾರ್ಹತೆ : ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ / ತತ್ಸಮಾನ ಶೈಕ್ಷಣಿಕ ಅರ್ಹತೆ ಪಡೆದಿರಬೇಕು.
ವಯೋಮಿತಿ : ಕನಿಷ್ಠ 20 ವರ್ಷ ಆಗಿರುವ, ಗರಿಷ್ಠ ವಯಸ್ಸು 25 ವರ್ಷ ಮೀರಿರಬಾರದು. ವರ್ಗವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿದೆ. OBC ವರ್ಗದವರಿಗೆ 3 ವರ್ಷ,
ಇತರೆ ಹಿಂದುಳಿದ ವರ್ಗದವರಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರಲಿದೆ.
ಕರ್ನಾಟಕದಲ್ಲಿ ಪರೀಕ್ಷೆ ನಡೆಯುವ ಸ್ಥಳ : ಬೆಂಗಳೂರು (Bengaluru).
ಅರ್ಜಿ ಸಲ್ಲಿಸುವ ವಿಧಾನ : ಯುಪಿಎಸ್ಸಿ ಒಟಿಆರ್ಪಿ ಪೋರ್ಟಲ್ https://upsconline.nic.in/upsc/OTRP/ ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಅರ್ಜಿ ಶುಲ್ಕ ರೂ.200.
ಆಯ್ಕೆ ವಿಧಾನ : ಲಿಖಿತ ಪರೀಕ್ಷೆ, PST, PET, ವೈದ್ಯಕೀಯ ಪರೀಕ್ಷೆ
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆಗೆ ಆರಂಭಿಕ ದಿನಾಂಕ: 24-04-2024
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 14-05-2024 ರ 18-00 ಗಂಟೆವರೆಗೆ.
ಲಿಖಿತ ಪರೀಕ್ಷೆ ದಿನಾಂಕ : 04-08-2024
ಹೆಚ್ಚಿನ ಮಾಹಿತಿಗಾಗಿ : https://upsc.gov.in/ ಭೇಟಿ ನೀಡಿ.
ಇದನ್ನು ಓದಿ: ಕನ್ನಡಿಗರಿಗೆ ಕುಡಿಯಲು ನೀರಿಲ್ಲವಾದರೂ ಕಾವೇರಿ ನೀರು ಬಿಡುವಂತೆ ಕ್ಯಾತೆ ತೆಗೆದ ತಮಿಳುನಾಡು