2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಗಾಗಿ(Loksabha Election) ಬಿಜೆಪಿ(BJP) ಈಗಾಗಲೇ ತಯಾರಿ ಪ್ರಾರಂಭಿಸಿದೆ. ತಯಾರಿಯ ಮೊದಲ ಭಾಗವಾಗಿ ಕೆಲ ಹಾಲಿ ಸಂಸದರಿಗೆ ಕೊಕ್ ನೀಡಲು ಬಿಜೆಪಿ ಮುಂದಾಗಿದೆ.

ಈ ಕುರಿತು ದೆಹಲಿ(Delhi) ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. 75 ವರ್ಷ ದಾಟಿದ ಮತ್ತು ಪಕ್ಷದಲ್ಲಿ ಸಕ್ರಿಯವಾಗಿಲ್ಲದ ಕೆಲ ಸಂಸದರಿಗೆ ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡದಿರಲು ಬಿಜೆಪಿ ವರಿಷ್ಠರು ತೀರ್ಮಾನಿಸಿದ್ದಾರೆ. ಹೀಗಾಗಿ ರಾಜ್ಯ 9 ಹಾಲಿ ಸಂಸದರು ಟಿಕೆಟ್ ಕಳೆದುಕೊಳ್ಳಲಿದ್ದಾರೆ.
- ಶ್ರೀನಿವಾಸ್ ಪ್ರಸಾದ್ (ಚಾಮರಾಜನಗರ)
- ರಮೇಶ್ ಜಿಗಜಿಣಗಿ (ವಿಜಯಪುರ)
- ಮಂಗಳಾ ಅಂಗಡಿ (ಬೆಳಗಾವಿ)
- ಪಿ.ಸಿ ಗದ್ದಿಗೌಡರ್ (ಬಾಗಲಕೋಟ್)
- ಶಿವಕುಮಾರ್ ಉದಾಸಿ (ಹಾವೇರಿ)
- ಜಿ.ಎಸ್ ಬಸವರಾಜ್ (ತುಮಕೂರು)
- ಬಿ.ಎನ್ ಬಚ್ಚೇಗೌಡ (ಚಿಕ್ಕಬಳ್ಳಾಪುರ)
- ಡಿ.ವಿ ಸದಾನಂದಗೌಡ (ಬೆಂಗಳೂರು ಉತ್ತರ)
- ಜಿ.ಎಂ ಸಿದ್ದೇಶ್ (ದಾವಣಗೆರೆ)
ಈ 9 ಹಾಲಿ ಸಂಸದರಿಗೆ ಈ ಕುರಿತು ಈಗಾಗಲೇ ಮಾಹಿತಿ ನೀಡಲಾಗಿದೆ. ಪಕ್ಷದ ವಿರುದ್ದ ಬಂಡಾಯ ಚಟುವಟಿಕೆ ನಡೆಸದೇ, ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಿ ಎಂಬ ಸೂಚನೆಯನ್ನು ನೀಡಲಾಗಿದೆ. ಮುಂಬರುವ ದಿನಗಳಲ್ಲಿ ನಿಮಗೆ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂಬ ಭರವಸೆಯನ್ನು ನೀಡಲಾಗಿದೆ. ಇನ್ನೊಂದೆಡೆ ಈ 9 ಲೋಕಸಭಾ ಕ್ಷೇತ್ರಗಳಲ್ಲಿ ಯುವ ಮುಖಗಳಿಗೆ ಮಣೆ ಹಾಕಲು ನಿರ್ಧರಿಸಲಾಗಿದೆ.

ಹೀಗಾಗಿ ಹೊಸ ಮುಖಗಳಿಗಾಗಿ ಈಗಾಗಲೇ ಹುಡುಕಾಟ ನಡೆದಿದೆ. ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿಲ್ಲದ ಡಿ.ವಿ ಸದಾನಂದಗೌಡರನ್ನು ಚುನಾವಣಾ ರಾಜಕೀಯದಿಂದ ದೂರವಿರಿಸಲು ಬಿಜೆಪಿ ವರಿಷ್ಠರು ಮುಂದಾಗಿದ್ದಾರೆ. ಪಕ್ಷದ ಜವಾಬ್ದಾರಿ ನೀಡುವ ಕುರಿತು ಚರ್ಚೆ ನಡೆದಿದೆ.