ಬಿಜೆಪಿ, ಆರ್ ಎಸ್ ಎಸ್ ಕನ್ನಡ ವಿರೋಧಿಗಳು; ವಾಟಾಳ್ ನಾಗರಾಜ್

ಬೆಂಗಳೂರು, ಡಿ. 05: ಪೊಲೀಸರು ಮಫ್ತಿಯಲ್ಲಿ ತೆರಳಿ ಸುಮಾರು 30 ಸಾವಿರಕ್ಕೂ ಅಧಿಕ ಕನ್ನಡ ಪರ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೋಸಗಾರ. ನಾನು ಕುಟುಂಬಸ್ಥರನ್ನು ಕಳೆದುಕೊಂಡಾಗ ಅಷ್ಟು ನೋವಾಗಿರಲಿಲ್ಲ.ಆದರೆ, ಯಡಿಯೂರಪ್ಪ ಅವರು ಮಾಡಿದ ಮೋಸದಿಂದ ಅತೀವ ನೋವಾಗಿದೆ. ಅವರು ಈ ಕಾಲದ ಹಿಟ್ಲರ್ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದರು.

ಬಂದ್‌ಗೆ ಅನುಮತಿ ಕೇಳಿಲ್ಲ ಎಂಬ ಪೊಲೀಸ್ ಆಯುಕ್ತರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ನಗರ ಪೊಲೀಸ್ ಆಯುಕ್ತರಿಗೆ ನಾವೇಕೆ ಅನುಮತಿ ಕೇಳಬೇಕು, ಅವರು ಪರ ಭಾಷಿಕರು. ಅವರಿಗೆ ಕನ್ನಡ ಬರುವುದಿಲ್ಲ. ಮೊದಲು ಅವರನ್ನು ವರ್ಗಾವಣೆ ಮಾಡಬೇಕು ಎಂದರು. ಕರ್ನಾಟಕ ಬಂದ್ ಮಾಡುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಬುಧವಾರ ಜೈಲ್ ಭರೋ ಚಳುವಳಿಗಾಗಿ ಸಭೆ ಕರೆಯಲಾಗಿದೆ ಎಂದರು.

ಬಿಜೆಪಿ, ಆರ್ ಎಸ್ ಎಸ್ ಕನ್ನಡ ವಿರೋಧಿಗಳಾಗಿವೆ. ಪೊಲೀಸರು 30 ಸಾವಿರ ಕನ್ನಡ ಪರ ಹೋರಾಟಗಾರರನ್ನು ಬಂಧಿಸಿದ್ದಾರೆ. ಮುಖ್ಯಮಂತ್ರಿಗಳು ರಾಜೀನಾಮೆ ‌ನೀಡಬೇಕು. ಪರಭಾಷಿಗರು ನಗರ ಪೊಲೀಸ್ ಆಯುಕ್ತರಾಗಬಾರದು. ಹೀಗಾಗಿ ಕಮಲ್ ಪಂತ್ ಅವರನ್ನು ವರ್ಗಾವಣೆ ಮಾಡಬೇಕು ಎಂದು ವಾಟಾಳ್ ನಾಗರಾಜ್ ಅವರು ಕಿಡಿಕಾರಿದರು.

ಈ ನಡುವೆ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿತ್ತಿದಾಗ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, ಸಾ.ರಾ. ಗೋವಿಂದ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಸೇರಿದಂತೆ ಹಲವಾರು ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಾಟಾಳ್ ನಾಗರಾಜ್ ವಶಕ್ಕೆ ಪಡೆಯುವ ಮುನ್ನ ಹಿರಿಯ ಅಧಿಕಾರಿಗಳ ಅನುಮತಿ ಕೇಳಿದ ಪೊಲೀಸರು, ಡಿಸಿಪಿ ಅನುಚೇತ್ ಒಪ್ಪಿಗೆ ನೀಡುತ್ತಿದ್ದಂತೆ ವಾಟಾಳ್​ರನ್ನ ಬಂಧಿಸಿದ್ದಾರೆ. ಪೊಲೀಸ್ ಬಸ್​ ಮೂಲಕ ವಾಟಾಳ್ ಅವರನ್ನು ಮೈಸೂರು ರಸ್ತೆಯ ಸಿಆರ್ ಹೆಡ್ ಕ್ವಾರ್ಟರಸ್​​ಗೆ ತಲುಪಿದ್ದಾರೆಂದು ವರದಿಗಳು ತಿಳಿಸಿವೆ.

Exit mobile version