ರಾಹುಲ್ ಗಾಂಧಿ ಮಾತಿಗೆ ಉತ್ತರಿಸಲಾಗದೆ ಚೊಚ್ಚಲ ಭಾಷಣಕ್ಕೆ ಕತ್ತರಿ ಹಾಕಿದ ಬಿಜೆಪಿ ಪಕ್ಷ.

New delhi: ರಾಹುಲ್ ಗಾಂಧಿ (Rahul Gandhi) ಎಂದರೆ ಪಪ್ಪು ಏನೂ ತಿಳಿಯದ ವ್ಯಕ್ತಿ ಎಂದುಕೊಳ್ಳುವವರಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ನೀಡಿದ್ದಾರೆ.ಸಂಸತ್‌ ಕಲಾಪದಲ್ಲಿ ವಿಪಕ್ಷ ನಾಯಕ ರಾಹುಲ್​ ಗಾಂಧಿ ಅಬ್ಬರಿಸಿದ್ದಾರೆ . ಲೋಕಸಭಾ ಸದನದಲ್ಲಿ (Lok Sabha House) . ಆರ್ ಎಸ್ ಎಸ್ (RSS) , ಬಿಜೆಪಿಯನ್ನ ತರಾಟೆಗೆ ತೆಗೆದುಕೊಂಡಿರುವ ರಾಹುಲ್‌ಗಾಂಧಿ ಹಿಂಸೆ, ದ್ವೇಷ (Hate) ಅನ್ನೋರು ಹಿಂದೂಗಳೇ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.ಮುಸ್ಲಿಂ, ಕ್ರೈಸ್ತ, ಜೈನ, ಬೌದ್ಧ ಧರ್ಮವನ್ನೂ ಪ್ರಸ್ತಾಪಿಸಿ ಮಾತನಾಡಿದ ರಾಹುಲ್​ ಗಾಂಧಿ, ಯಾರಿಗೂ ಹೆದರುವ ಮಾತೇ ಇಲ್ಲ ಎಂದು ಗುಡುಗಿದ್ದಾರೆ.

ಕೇಂದ್ರ ಸರ್ಕಾರದ (Central Govt) ವೈಫಲ್ಯಗಳಾದ NEET, ಅಗ್ನಿವೀರ್, ಮಣಿಪುರ ಹಿಂಸಾಚಾರದ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿ, ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಹುಲ್​ ಗಾಂಧಿ ಮಾತನ್ನು ಮೌನವಾಗಿಯೇ ಕೇಳಿಸಿಕೊಳ್ತಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ಗೃಹಸಚಿವ ಅಮಿತ್‌ಷಾ (Amith Sha) ಎದ್ದುನಿಂತು ಮಾತನಾಡುವಂತೆ ಮಾಡಿದ್ದಾರೆ.ಪ್ರಧಾನಮಂತ್ರಿಗಳಿಗೆ (Prime Minister) ದೇವರ ಜೊತೆ ನೇರ ಸಂಪರ್ಕವಿದೆ. ಅದಕ್ಕೆ ದೇವರ ಜೊತೆ ಪ್ರಧಾನಿಗಳು ಮಾತಾಡ್ತಾ ಇರ್ತಾರೆ. ಪರಮಾತ್ಮ ಪ್ರಧಾನಿಯವರ ಆತ್ಮದ ಜೊತೆ ಮಾತಾಡ್ತಾರೆ. ನಾವು-ನಾವೆಲ್ಲಾ ಜೈವಿಕವಾಗಿ ಜನಿಸಿದ ಜೀವಿಗಳು. ಆದರೆ ಪ್ರಧಾನಿ ಮೋದಿ ಅವರು ಜೈವಿಕ ಜೀವಿ (biological organism) ಅಲ್ಲ, ದೇವರ ಮಗ ಅಂದಿದ್ರು ಎಂದು ವ್ಯಂಗ್ಯವಾಗಿ ಅವರ ಮಾತನ್ನು ಅವರಿಗೇ ನೀಡಿದ್ದಾರೆ.

ಆದರೆ ಅವರ ಮಾತಿನಿಂದ ಅಸಮಾಧಾನಗೊಂಡ ಬಿಜೆಪಿ (BJP) ಸದಸ್ಯರು ಅಲ್ಪಸಂಖ್ಯಾತರು, ನೀಟ್ ವಿವಾದ (NEET Controversy) ಮತ್ತು ಅಗ್ನಿಪಥ್ ಯೋಜನೆ (Agnipath Project) ಸೇರಿದಂತೆ ವಿವಿಧ ವಿಷಯಗಳ ಕುರಿತು ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡು ಲೋಕಸಭೆಯಲ್ಲಿ (Lok Sabha) ನಿನ್ನೆ ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಅವರು ಮಾಡಿದ ಚೊಚ್ಚಲ ಭಾಷಣದ ಹಲವು ಭಾಗಗಳನ್ನು ಸ್ಪೀಕರ್ ಆದೇಶ ಮೇರೆಗೆ ಸಂಸತ್ತಿನ ದಾಖಲೆಗಳಿಂದ ತೆಗೆದುಹಾಕಲಾಗಿದೆ.ತೆಗೆದುಹಾಕಲಾದ ಭಾಗಗಳಲ್ಲಿ ಹಿಂದೂಗಳು ಮತ್ತು ಪಿಎಂ ನರೇಂದ್ರ ಮೋದಿ-ಬಿಜೆಪಿ-ಆರ್‌ಎಸ್‌ಎಸ್ (Modi-BJP-RSS) ಇತರರ ಬಗ್ಗೆ ಅವರ ಮಾತುಗಳು ಕೂಡ ಸೇರಿವೆ. ಹಾಗಾಗಿ ತೆಗೆದು ಹಾಕಲಾಗಿದೆ ಎಂದಿದ್ದಾರೆ. ಇನ್ನು ಈ ಕುರಿತಾಗಿ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ, ಮೋದಿಯವರೇ ಜಗತ್ತಿನಲ್ಲಿ ಸತ್ಯವನ್ನು ಹೊರಹಾಕಬಹುದು, ಆದರೆ ವಾಸ್ತವದಲ್ಲಿ ಸತ್ಯವನ್ನು ಹೊರಹಾಕಲು ಸಾಧ್ಯವಿಲ್ಲ, ನಾನು ಹೇಳಬೇಕಾಗಿದ್ದನ್ನು ಹೇಳಿದ್ದೇನೆ, ಅದು ಸತ್ಯ ಎಂದಿದ್ದಾರೆ.

Exit mobile version