ರಾಜ್ಯ ಕಾಂಗ್ರೆಸ್‍ನ್ನು ಪೇಚಿಗೆ ಸಿಲುಕಿಸಿದ ಬಿಜೆಪಿಯ ಆ 4 ಅಸ್ತ್ರಗಳು!

bjp

ಬಸವರಾಜ್ ಬೊಮ್ಮಾಯಿ(Basavaraj Bommai) ನೇತೃತ್ವದ ರಾಜ್ಯ(State) ಬಿಜೆಪಿ(BJP) ಸರ್ಕಾರ(Government) ಪ್ರಯೋಗಿಸುತ್ತಿರುವ ಅಸ್ತ್ರಗಳಿಂದ ರಾಜ್ಯ ಕಾಂಗ್ರೆಸ್(Congress) ಪೇಚಿಗೆ ಸಿಲುಕಿದೆ.

ಮುಂದಿನ ವರ್ಷದ ಮೇನಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯುತ್ತದೆ. ಆದರೆ ಕೆಲ ರಾಜಕೀಯ ತಜ್ಞರ ಪ್ರಕಾರ ಇದೇ ವರ್ಷದ ಡಿಸೆಂಬರ್‍ನಲ್ಲಿ ಅವಧಿಪೂರ್ವ ಚುನಾವಣೆ ನಡೆದರು ಅಚ್ಚರಿ ಇಲ್ಲ.

ರಾಜ್ಯದಲ್ಲಿ ಬಿಜೆಪಿ ಚುನಾವಣೆಗೆ ಭರ್ಜರಿ ತಯಾರಿ ನಡೆಸಿದೆ. ಮುಂಬರುವ ಚುನಾವಣೆಗೆ ತಳಪಾಯ ಎಂಬಂತೆ ಒಂದೊಂದೆ ಅಸ್ತ್ರಗಳನ್ನು ಪ್ರಯೋಗಿಸುತ್ತಿದೆ. ಆದರೆ ಕಾಂಗ್ರೆಸ್ ಮಾತ್ರ ಬಿಜೆಪಿಯ ಯಾವ ಅಸ್ತ್ರಕ್ಕೂ ತಕ್ಕ ಉತ್ತರ ನೀಡಲು ಸಾಧ್ಯವಾಗದೇ ಪರದಾಡುತ್ತಿದೆ.

ಹಾಗಾದರೆ ರಾಜ್ಯ ಬಿಜೆಪಿ ಸದ್ಯ ಪ್ರಯೋಗಿಸಿರುವ ಆ ನಾಲ್ಕು ಅಸ್ತ್ರಗಳ ವಿವರ ಇಲ್ಲಿದೆ ನೋಡಿ. ಹಿಜಾಬ್ ಮತ್ತು ಹೈಕೋರ್ಟ್ ತೀರ್ಪು
ಹಿಜಾಬ್ ವಿವಾದವನ್ನು ಸೃಷ್ಟಿಸಿ, ಲಾಭ ಪಡೆಯಲು ಕೆಲ ಮತೀಯ ಸಂಘಟನೆಗಳು ತಂತ್ರ ಹೆಣೆದಿದ್ದವು. ಆದರೆ ಅದರ ನೇರ ಲಾಭ ಬಿಜೆಪಿ ಪಕ್ಷಕ್ಕಾಗಿದೆ. ಪ್ರಾರಂಭದಿಂದಲೂ ಬಿಜೆಪಿ ಶಾಲಾ-ಕಾಲೇಜಿನಲ್ಲಿ ಹಿಜಾಬ್ ಧರಿಸುವುದನ್ನು ವಿರೋಧಿಸಿತು. ಬಿಜೆಪಿಯನ್ನು ವಿರೋಧಿಸಲು ಕಾಂಗ್ರೆಸ್ ಹಿಜಾಬ್ ಪರ ಬ್ಯಾಟ್ ಬೀಸಿತು. ಆದರೆ ಹೈಕೋರ್ಟ್ ತೀರ್ಪು ಬಿಜೆಪಿ ಸರ್ಕಾರದ ಪರ ಬಂದ ನಂತರ ಕಾಂಗ್ರೆಸ್ ಪೇಚಿಗೆ ಸಿಲುಕಿತು. ನೇರವಾಗಿ ಹಿಜಾಬ್ ಅನ್ನು ಬೆಂಬಲಿಸಲು ತೀರ್ಪು ಬಂದ ನಂತರ ಸಾಧ್ಯವಾಗಲಿಲ್ಲ.

ಆಗ ಮುಸ್ಲಿಂ ಸಮುದಾಯ ಕೂಡಾ ಕಾಂಗ್ರೆಸ್ ನಾಯಕರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಶಾಲಾ ಪಠ್ಯದಲ್ಲಿ ಭಗವದ್ಗೀತೆ
ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆಯನ್ನು ಅಳವಡಿಸಲು ರಾಜ್ಯ ಬಿಜೆಪಿ ಸರ್ಕಾರ ಮುಂದಾಗಿದೆ. ರಾಜ್ಯ ಸರ್ಕಾರ ಈ ನಡೆಗೆ ಕಾಂಗ್ರೆಸ್ ವಿರೋಧಿಸಿತು. ಆದರೆ ಸ್ಪಷ್ಟ ನಿಲುವಿಗೆ ಬರಲು ಸಾಧ್ಯವಾಗಿಲ್ಲ. ಕಾಂಗ್ರೆಸ್‍ನ ನಾಯಕರಾದ ಡಿಕೆಶಿ ಮತ್ತು ಸಿದ್ದು ನಡುವೆ ಈ ವಿಚಾರದಲ್ಲಿ ಭಿನ್ನಾಭಿಪ್ರಾಯವಿದೆ ಎನ್ನಲಾಗಿದೆ. ಹೀಗಾಗಿ ಇದರ ಲಾಭವನ್ನು ಬಿಜೆಪಿ ಪಡೆಯುತ್ತಿದೆ.

ಕಾಶ್ಮೀರ್ ಫೈಲ್ಸ್ :

‘ಕಾಶ್ಮೀರ್ ಫೈಲ್ಸ್’ ಚಿತ್ರದಿಂದ ಬಿಜೆಪಿ ಭರ್ಜರಿ ಲಾಭ ಪಡೆದುಕೊಂಡಿತು. ಆದರೆ ಚಿತ್ರವನ್ನು ವಿರೋಧಿಸಿ ಕಾಂಗ್ರೆಸ್ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದೆ ಎಂದು ಕೆಲ ಕಾಂಗ್ರೆಸ್ ನಾಯಕರೇ ಅಭಿಪ್ರಾಯಪಟ್ಟಿದ್ದಾರೆ. ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಕಾಂಗ್ರೆಸ್ ದೇಶಾದ್ಯಂತ ವಿರೋಧಿಸಿತು. ಆದರೆ ಬಿಜೆಪಿ ಚಿತ್ರದ ಪರವಾಗಿ ಉಚಿತ ಪ್ರದರ್ಶನ ಏರ್ಪಡಿಸಿತು. ರಾಜ್ಯ ವಿಧಾನಸಭೆಯ ಮೂಲಕವೂ ಎಲ್ಲ ಶಾಸಕರಿಗೆ ವಿಶೇಷ ಪ್ರದರ್ಶನ ನಡೆಯಿತು. ತನ್ನ ಈ ತಂತ್ರದ ಮೂಲಕ ತಾನು ಹಿಂದೂಗಳ ಪರ ಎಂದು ಬಿಜೆಪಿ ಸಾಬೀತುಪಡಿಸಿತು. ಚಿತ್ರವನ್ನು ವಿರೋಧಿಸಿ ಕಾಂಗ್ರೆಸ್‍ನ ಹಿಂದೂ ವಿರೋಧಿ ಹಣೆಪಟ್ಟಿ ಮತ್ತಷ್ಟು ಗಟ್ಟಿಯಾಯಿತು.
ಮದರಸಾಗಳು ಶಿಕ್ಷಣ ಇಲಾಖೆ ವ್ಯಾಪ್ತಿಗೆ :
ಮುಸ್ಲಿಂ ಮಕ್ಕಳು ಮದರಸಾಗಳಲ್ಲಿ ಓದುತ್ತಿರುವುದರಿಂದ ಆಧುನಿಕ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಮದರಸಾಗಳನ್ನು ಶಿಕ್ಷಣ ಇಲಾಖೆ ವ್ಯಾಪ್ತಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ. ಬಿಜೆಪಿಯ ಈ ಹೊಸ ಅಸ್ತ್ರಕ್ಕೆ ಕಾಂಗ್ರೆಸ್ ಬಳಿ ಉತ್ತರವಿಲ್ಲ. ಎಂದಿನಂತೆ ವಿರೋಧಿಸಿದರೆ, ಮೂಲಭೂತವಾದವನ್ನು ಒಪ್ಪಿದಂತಾಗುತ್ತದೆ, ಬೆಂಬಲ ನೀಡಿದರೆ, ಅಲ್ಪಸಂಖ್ಯಾತ ಮತಗಳು ಕೈ ತಪ್ಪುತ್ತವೆ.
ಹೀಗಾಗಿ ಕಾಂಗ್ರೆಸ್ ನಾಯಕರು ದ್ವಂದ್ವ ನಿಲುವು ತಾಳುತ್ತಾ, ಬಿಜೆಪಿಗೆ ಲಾಭ ಮಾಡಿಕೊಡುತ್ತಿದ್ದಾರೆ. ಒಟ್ಟಾರೆಯಾಗಿ ಬಿಜೆಪಿಯ ರಾಜಕೀಯ ಅಸ್ತ್ರಗಳನ್ನು ಎದುರಿಸಲು ಕಾಂಗ್ರೆಸ್ ಸರಿಯಾದ ಸಿದ್ದತೆ ಮಾಡಿಕೊಂಡಿಲ್ಲ. ಚುನಾವಣೆಗೆ ಕೌಂಟ್‍ಡೌನ್ ಶುರುವಾಗಿದೆ. ಹೀಗಾಗಿ ಬಿಜೆಪಿ ಈ ವಿವಾದಗಳ ಮೂಲಕ ಸಂಘಟನೆ ಬಲಪಡಿಸಿಕೊಳ್ಳುತ್ತಿದೆ.
Exit mobile version