Bengaluru : ಇಂಧನ ಇಲಾಖೆಯಲ್ಲಿ 6 ಸಾವಿರ ಕೋಟಿ ವೆಚ್ಚದ ಭೂಗತ ಕೇಬಲ್ ಅಳವಡಿಕೆಯಲ್ಲಿ ಕಾಂಗ್ರೆಸ್ ಸರ್ಕಾರ(Congress Government) ಭ್ರಷ್ಟಾಚಾರವೆಸಗಿರುವ(Corruption) ವಿಚಾರ ತನಿಖಾ ವರದಿಯಲ್ಲಿ ದಾಖಲಾಗಿತ್ತು. ಎಲ್ಲಾ ಕಾಮಗಾರಿ, ಯೋಜನೆಗಳಲ್ಲಿ ಅಕ್ರಮ ಎಸಗಿರುವ ಸಿದ್ದರಾಮಯ್ಯ(Siddaramaiah) ಅವಧಿಯ ಕಾಂಗ್ರೆಸ್ ಸರ್ಕಾರ 100% ಸರ್ಕಾರವಲ್ಲವೇ?

ನಾಗಾರ್ಜುನ ಕಂಪನಿಯಿಂದ 15% ಕಮಿಷನ್ ಪಡೆದು ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ “ಕೈ” ಹಾಕಿದ ಸತ್ಯಸಂಗತಿ ಗೋವಿಂದ ರಾಜ್ ಡೈರಿಯಲ್ಲಿ ಬಯಲಾಗಿದ್ದು, ಮರೆತು ಹೋಯಿತೇ ಭ್ರಷ್ಟರಾಮಯ್ಯ? ಸಿದ್ದರಾಮಯ್ಯ ಅವಧಿಯ ಕಾಂಗ್ರೆಸ್ ಸರ್ಕಾರ 100% ಕಮಿಷನ್ ಸರ್ಕಾರ ಎನ್ನುವುದಕ್ಕೆ ಇನ್ನೆಷ್ಟು ಪುರಾವೆ ಬೇಕು? ಎಂದು ರಾಜ್ಯ ಬಿಜೆಪಿ(State BJP) ಪ್ರಶ್ನಿಸಿದೆ.
ಇದನ್ನೂ ಓದಿ : https://vijayatimes.com/lucky-heroine-sangeetha-sringeri/
ಈ ಕುರಿತು ಸರಣಿ ಟ್ವೀಟ್(Tweet) ಮಾಡಿರುವ ಬಿಜೆಪಿ, ವಿಧಾನಸೌಧದ(Vidhansoudha) ತಮ್ಮ ಕೊಠಡಿಯಲ್ಲಿ 25 ಲಕ್ಷ ಲಂಚ ಪಡೆಯುವಾಗ ಮತ್ತು ಗ್ರಂಥಾಲಯ ಸಹಾಯಕರನ್ನು ಖಾಯಂ ಮಾಡುವುದಾಗಿ ಸುಳ್ಳು ಭರವಸೆ ನೀಡಿ ಸರ್ಕಾರಿ ನಿವಾಸದಲ್ಲೇ ಮೂರು ಕೋಟಿ ಲಂಚ ಸ್ವೀಕರಿಸುವಾಗ ಕಾಂಗ್ರೆಸ್ ಸಚಿವರಿಬ್ಬರು ಸಿಕ್ಕಿಬಿದ್ದಿದ್ದರು.

ಇದೆಲ್ಲವೂ 100% ಕಮಿಷನ್ ಸರ್ಕಾರದ ಭಾಗವಲ್ಲದೆ ಮತ್ತೇನು? ಭ್ರಷ್ಟಾಚಾರವನ್ನೇ ರಾಜಕಾರಣ(Political) ಎಂದುಕೊಂಡಿರುವ ಕೆಪಿಸಿಸಿ(KPCC) ಭ್ರಷ್ಟಾಧ್ಯಕ್ಷ ಅವರನ್ನು ಪಕ್ಕದಲ್ಲಿ ಕೂರಿಸಿ ಬಿಜೆಪಿ ಮೇಲೆ ಭ್ರಷ್ಟಾಚಾರ ಆರೋಪ ಮಾಡುವ ಪರಮ ಭ್ರಷ್ಟ ಸಿದ್ದರಾಮಯ್ಯ ಅವರೇ,
https://youtu.be/8J5dV92RbgI COVER STORY PROMO ಲೋನ್ ಮಾಫಿಯಾ !
100% ಕಮಿಷನ್ ಸರ್ಕಾರ ನಡೆಸಲು, ತಮ್ಮ ಪಕ್ಷದ ಆಸ್ತಿಯನ್ನು ನುಂಗಿನೀರು ಕುಡಿದ ನಕಲಿ ಗಾಂಧಿಪರಿವಾರ ನಿಮಗೆ ಪ್ರೇರಣೆಯೇ? ಎಂದು ಪ್ರಶ್ನಿಸಿದೆ. ಇನ್ನು ಬೆಟರ್ ಬೆಂಗಳೂರು ಅಂತ ಕಾಂಗ್ರೆಸ್ ಮಾಡಿಕೊಂಡಿರುವ ಕ್ರಿಯಾ ಸಮಿತಿಯ ಸದಸ್ಯರ ಚರಿತ್ರೆಯೇ ಭಯಾನಕವಾಗಿದೆ.

ಶಾಸಕ ರಾಮಲಿಂಗಾ ರೆಡ್ಡಿ, ಕೆ.ಜೆ.ಜಾರ್ಜ್, ಹ್ಯಾರಿಸ್ ಇವರೆಲ್ಲ ಸೇರಿ ಬೆಂಗಳೂರನ್ನು(Bengaluru) ಬೆಟರ್ ಮಾಡೋದು ಹೇಗೆ ಅಂತ ಯೋಜನೆ ಮಾಡಿ ಕೊಡ್ತಾರಂತೆ. ಇದು ಬೆಕ್ಕು ಮೀನು ಪಾಲು ಮಾಡಿಕೊಟ್ಟಂತೆಯೇ ಸರಿ ಎಂದು ವಾಗ್ದಾಳಿ ನಡೆಸಿದೆ.