vijaya times advertisements
Visit Channel

ರಾಹುಲ್‌ ಗಾಂಧಿ ಅವರ ಭಾರತ ಐಕ್ಯತಾ ಯಾತ್ರೆಗೆ ಕನ್ನಡದ ಮಣ್ಣಿಗೆ ನೆಲ ಮುಗಿಲಾದಿಯಾಗಿ ಅಭೂತಪೂರ್ವವಾಗಿ ಸ್ವಾಗತಿಸಲಾಯ್ತು : ಕಾಂಗ್ರೆಸ್‌

BJP

ಜಗತ್ತಿನ ರಾಜಕೀಯ (Political) ಇತಿಹಾಸದಲ್ಲೇ ಪ್ರಥಮ ಎನ್ನುವಂತಹ ಪಾದಯಾತ್ರೆಯಾಗಿರುವ ರಾಹುಲ್‌ ಗಾಂಧಿ (Rahul Gandhi),

ಅವರ ಭಾರತ ಐಕ್ಯತಾ ಯಾತ್ರೆಗೆ ಕನ್ನಡದ ಮಣ್ಣಿಗೆ ನೆಲ ಮುಗಿಲಾದಿಯಾಗಿ ಅಭೂತಪೂರ್ವವಾಗಿ ಸ್ವಾಗತಿಸಲಾಯ್ತು.

congress

ಕರ್ನಾಟಕದಲ್ಲಿ ಅಭೂತಪೂರ್ವವಾಗಿ ಆರಂಭಗೊಂಡ ಭಾರತ ಐಕ್ಯತಾ ಯಾತ್ರೆಯು 2ನೇ ದಿನ ಗುಂಡ್ಲುಪೇಟೆಯ ತೊಂಡವಾಡಿ ಗೇಟ್ನಿಂದ ಆರಂಭಗೊಂಡು ಚಿಕ್ಕಯ್ಯನ ಛತ್ರ ಗೇಟ್ನಲ್ಲಿ ವಾಸ್ತವ್ಯ ಹೂಡಲಿದೆ.

ಮಾದಪ್ಪಸ್ವಾಮಿಯ ಪುಣ್ಯ ನಾಡಿನಲ್ಲಿ ಯಾತ್ರೆಯಲ್ಲಿನ ಪ್ರತಿಯೊಬ್ಬರ ದನಿಯೂ ಉಘೇ ಉಘೇ ಎನ್ನುತ್ತವೆ, ಭಾರತಾಂಬೆಗೂ, ಮಾದಪ್ಪನಿಗೂ ಎಂದು ರಾಜ್ಯ ಕಾಂಗ್ರೆಸ್‌ (State Congress) ರಾಹುಲ್‌ ಗಾಂಧಿ (Rahul Gandhi) ಅವರ ಭಾರತ್‌ ಜೋಡೋ ಯಾತ್ರೆಯನ್ನು ಶ್ಲಾಘಿಸಿದೆ.

ಇದನ್ನೂ ಓದಿ : https://vijayatimes.com/hazrat-kamar-ali-darvesh-dargah-pune/

ಕಾಂಗ್ರೆಸ್‌ನ ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಬಿಜೆಪಿ(BJP Tweets over bharat jodo yatra), ತಮಿಳುನಾಡು, ಕೇರಳದಲ್ಲಿ ತೋರಿದ ಹಿಂದೂ ದ್ವೇಷವನ್ನು ರಾಹುಲ್‌ ಗಾಂಧಿ ಕರ್ನಾಟಕದಲ್ಲೂ ಬಿಡಲಿಲ್ಲ.

ಮತಾಂಧರ ಮೂಲಕ ಡಿಜೆ ಹಳ್ಳಿಯ ಹಿಂದೂಗಳ ಮನೆಗೆ ಬೆಂಕಿ ಹಚ್ಚಲು ಪ್ರಚೋದನೆ ನೀಡಿದ ಸಂಪತ್ ರಾಜ್ ಯಾತ್ರೆಯಲ್ಲಿ ರಾಹುಲ್ ಜೊತೆ ಹೆಜ್ಜೆ ಹಾಕಿದ್ದಾನೆ.

BJP Tweets over bharat jodo yatra

ಕಾಂಗ್ರೆಸ್ಸಿಗರೇ, ಯಾತ್ರೆಯ ಹೆಸರನ್ನು ಹಿಂದೂ ವಿರೋಧಿ ಯಾತ್ರೆ ಎಂದು ಬದಲಾಯಿಸಿಕೊಳ್ಳುವಿರಾ? ಎಂದು ಪ್ರಶ್ನಿಸಿದೆ. ಕೇರಳದಲ್ಲೂ(Kerala) ಹಿಂದೂ ದ್ವೇಷವನ್ನು ರಾಹುಲ್‌ ಗಾಂಧಿ ಮುಂದುವರೆಸಿದರು.

ನಡುಬೀದಿಯಲ್ಲಿ ಗೋವಿನ ತಲೆ ಕಡಿದ ಯುವ ಕಾಂಗ್ರೆಸ್ ಮುಖಂಡನೊಂದಿಗೆ ಪಾದಯಾತ್ರೆ ಮಾಡುವ ಮೂಲಕ ರಾಹುಲ್ ಗಾಂಧಿ (BJP Tweets over bharat jodo yatra) ಬಹುಸಂಖ್ಯಾತ ಹಿಂದೂಗಳನ್ನು ಅಪಮಾನಿಸಿದ್ದಾರೆ. https://youtu.be/cpUuk5DF_tE

ಹಿಂದೂಗಳ ಪೂಜನೀಯ ಗೋವಿನ ಹತ್ಯೆಗೆ ರಾಹುಲ್ ಗಾಂಧಿ ಅವರ ಸಮ್ಮತಿಯಿದೆಯೇ? ಹಿಂದೂಗಳ ವಿರುದ್ಧ ದ್ವೇಷ ಭಾಷಣ ಮಾಡುವ ತಮಿಳುನಾಡಿನ ಜಾರ್ಜ್ ಎಂಬ ಪಾದ್ರಿಯನ್ನು ರಾಹುಲ್ ಭೇಟಿಯಾಗುತ್ತಾರೆ. ಭೇಟಿಯ ವೇಳೆ “ಜೀಸಸ್ ಮಾತ್ರ ನಿಜವಾದ ದೇವರು” ಎಂಬ ಪಾದ್ರಿಯ ಹೇಳಿಕೆಗೆ ತಲೆಯಾಡಿಸುತ್ತಾರೆ.

ಇದನ್ನೂ ಓದಿ : https://vijayatimes.com/pitbull-deadly-attack-in-punjab/

ಚುನಾವಣೆ ವೇಳೆ ಟೆಂಪಲ್ ರನ್ ಮಾಡುವ ರಾಹುಲ್ಗೆ ಯಾತ್ರೆಯ ವೇಳೆ ಹಿಂದೂ ದೇವರು ನೆನಪಾಗಿಲ್ಲವೇಕೆ? ರಾಹುಲ್ ಗಾಂಧಿ ಯಾತ್ರೆ ಹಿಂದೂ ವಿರೋಧಿ ಯಾತ್ರೆಯಾಗಿ ಬದಲಾಗುತ್ತಿದೆ.

ತಮಿಳುನಾಡಿನಿಂದ ಆರಂಭಗೊಂಡ ಯಾತ್ರೆ ಹೆಜ್ಜೆ ಹೆಜ್ಜೆಗೂ ಹಿಂದೂಗಳನ್ನು ಅವಮಾನಿಸುತ್ತಿದೆ. ಹಿಂದೂ ಸಮಾಜವನ್ನು ಕೆಣಕಿ ನಿಮ್ಮ ಮತಬ್ಯಾಂಕ್ ಗಟ್ಟಿಗೊಳಿಸುವ ಹುನ್ನಾರವೇ ಇದು? ಎಂದು ಟೀಕಿಸಿದೆ.
  • ಮಹೇಶ್.ಪಿ.ಎಚ್

Latest News

ರಾಜ್ಯ

ಬೆಳಗಾವಿ ಗಡಿ ವಿವಾದ : ಭದ್ರತೆಯ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಬಸ್ ಸಂಚಾರ ಸ್ಥಗಿತಗೊಳಿಸಿದ ಮಹಾರಾಷ್ಟ್ರ!

ಬೆಳಗಾವಿ ಗಡಿ ವಿವಾದದ ಕುರಿತು ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಬಿರುಕು ಶೀಘ್ರದಲ್ಲೇ ಶಮನಗೊಳ್ಳುವ ಲಕ್ಷಣ ಕಂಡುಬರುತ್ತಿಲ್ಲ ಎಂಬುದನ್ನು ಉಲ್ಲೇಖಿಸಿದೆ.

ಮನರಂಜನೆ

ನೆಟ್ ಫ್ಲಿಕ್ಸ್ ನಲ್ಲಿ ಕಾಂತಾರ ಹಿಂದಿ, ಇಂಗ್ಲೀಷ್ ಭಾಷೆಯಲ್ಲಿ ಲಭ್ಯವಾಗಲಿದೆ : ರಿಷಬ್ ಶೆಟ್ಟಿ

ಕಾಂತಾರ ಓಟಿಟಿಯಲ್ಲಿ ಮೊದಲ ಬಾರಿಗೆ ಬಿಡುಗಡೆಯಾದ ವೇಳೆ ಕಾಂತಾರ ಚಿತ್ರದ ಅಸಲಿ ವರಾಹ ರೂಪಂ ಹಾಡು ತೆಗೆದು ಹಾಕಲಾಗಿತ್ತು.

ಪ್ರಮುಖ ಸುದ್ದಿ

ದೆಹಲಿ ಮಹಾನಗರ ಪಾಲಿಕೆ ಚುನಾವಣೆ: ಜಯದ ಹಾದಿಯಲ್ಲಿ ಆಪ್

ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲೋ ಪ್ರಕಾರ ಬಿಜೆಪಿ 69 ರಿಂದ 91 ವಾರ್ಡ್ ಗಳಲ್ಲಿ ಗೆಲುವು ಸಾಧ್ಯತೆ ಹಾಗೂ ಕಾಂಗ್ರೆಸ್ 3 ರಿಂದ 7 ವಾರ್ಡ್ ಗಳಲ್ಲಿ ಗೆಲ್ಲುತ್ತದೆ ಎಂದು ಸಮೀಕ್ಷೆ ತಿಳಿಸಿದೆ

ಪ್ರಮುಖ ಸುದ್ದಿ

ಬೆಳಗಾವಿಯಲ್ಲಿ ಕಲ್ಲು ತೂರಾಟ ; ಪುಣೆಯಲ್ಲಿ ಕರ್ನಾಟಕ ಬಸ್‌ಗಳಿಗೆ ಮಸಿ ಬಳಿದ ಶಿವಸೇನಾ!

ಕರ್ನಾಟಕ-ಮಹಾರಾಷ್ಟ್ರ ಮುಖ್ಯಮಂತ್ರಿಗಳ ನಡುವಿನ ವಾಗ್ಸಮರ ಗಡಿ ಭಾಗದಲ್ಲಿ ಘರ್ಷಣಗೆ ಪ್ರಮುಖವಾಗಿದೆ. ಎಂ.ಇ.ಎಸ್ (M.E.S) ಪುಂಡರ ಹಾವಳಿ ಹೆಚ್ಚಾಗಿದ್ದು, ಕರ್ನಾಟಕ ರಾಜ್ಯದ ಬಸ್‌ಗಳನ್ನು ಅಡಗಟ್ಟಿ ಮಸಿ ಹಚ್ಚಿ ಆಕ್ರೋಶ ಹೊರಹಾಕಿದ್ದರು