ಪಿಕ್ ಪಾಕೆಟ್ ಕಾಂಗ್ರೆಸ್ ಎಂಬ ಜಾಹೀರಾತಿನ ಮೂಲಕ ಬಿಜೆಪಿಯಿಂದ ಜನರ ಗಮನ ಸೆಳೆವ ಯತ್ನ

Bengaluru: ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಗೆ (BJP vs Congress – Politics) ಮೂರು ದಿನಗಳು ಮಾತ್ರ ಬಾಕಿ ಉಳಿದಿರುವಂತೆ ರಾಜಕೀಯ ಪಕ್ಷಗಳ ನಡುವೆ ಜಾಹೀರಾತು, ಪ್ರಕಟಣೆಗಳ

ಸರಣಿ ಮುಂದುವರಿದಿದೆ. ಈ ಹಿಂದೆ ಮೋದಿ ಸರ್ಕಾರ ‘ಚೊಂಬು’ ಎಂದು ಬಿಂಬಿಸಿದ್ದ ಕಾಂಗ್ರೆಸ್ ಸರ್ಕಾರದ ವಿರುದ್ದ ಇದೀಗ ರಾಜ್ಯ ಬಿಜೆಪಿ ಇದೀಗ `ಪಿಕ್ ಪಾಕೆಟ್ ಕಾಂಗ್ರೆಸ್’ (Pick Pocket Congress)

ಎಂಬ ಮತ್ತೊಂದು ಜಾಹೀರಾತು ಪ್ರಕಟಿಸಿ (BJP vs Congress – Politics) ಮತದಾರರ ಗಮನ ಸೆಳೆಯುವ ಪ್ರಯತ್ನ ಮುಂದುವರೆಸಿದೆ.

ಕಾಂಗ್ರೆಸ್ (Congress) ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಆದ ದರ ಹೆಚ್ಚಳದ ವಿಚಾರ ಪ್ರಸ್ತಾಪಿಸಿ ಕಾಂಗ್ರೆಸ್ ಜನರ ಒಳಿತಿಗಾಗಿ ಏನೂ ಮಾಡಿಲ್ಲ ಬದಲಾಗಿ ಜೇಬಿಗೆ ಕೈ ಹಾಕಿದೆ ಎಂದು ಬಿಜೆಪಿ

ಆರೋಪಿಸಿದೆ. ಪ್ಯಾಂಟಿನ ಜೇಬಿನಿಂದ ನೋಟನ್ನು ಕದಿಯುತ್ತಿರುವ ಚಿತ್ರದೊಂದನ್ನು ಪ್ರಕಟಿಸಿ`ಕಾಂಗ್ರೆಸ್ ಕೊಟ್ಟಿದ್ದಕ್ಕಿಂತ ದೋಚಿದ್ದೇ ಜಾಸ್ತಿ’ ಕಾಂಗ್ರೆಸ್ ಡೇಂಜರ್ ಎಂದು ಬಿಜೆಪಿ (BJP) ತನ್ನ

ಪೋಸ್ಟರ್ ನಲ್ಲಿ ಪ್ರಕಟಿಸಿ ಕಾಂಗ್ರೆಸ್ ಸರ್ಕಾರದ ವಿರುದ್ದ ರಣ ಕಹಳೆ ಮೊಳಗಿಸಿದೆ.

ಇನ್ನು ಈ ಕುರಿತಾಗಿ ವಿದ್ಯುತ್ ದರ ಹೆಚ್ಚಳ,ಆಸ್ತಿ ತೆರಿಗೆ ಹೆಚ್ಚಳ,ವಿವಿಧ ಕಂದಾಯ ಪತ್ರ 100 ಪಟ್ಟು ಹೆಚ್ಚಳ,ಕೃಷಿ ಸಮ್ಮಾನ್ ನಿಧಿ ವಾರ್ಷಿಕ 4000 ರೂಪಾಯಿ ಕಡಿತ,ಹಾಲಿನ ದರ ಏರಿಕೆ,ರೈತರ ವಿದ್ಯಾನಿಧಿ ಸ್ಥಗಿತ,

ಮದ್ಯ, ಅಬಕಾರಿ ದುಬಾರಿ, ಭಾಗ್ಯಲಕ್ಷ್ಮೀ ಯೋಜನೆ (Bhagyalakshmi Scheme) ರದ್ದು, ಸ್ಟ್ಯಾಂಪ್ ಡ್ಯೂಟಿ ಗಗನಕ್ಕೆ ಏರಿದೆ. ಮಹಿಳಾ ಸ್ವಸಹಾಯ ಸಂಘಕ್ಕೆ ನೀಡುತ್ತಿದ್ದು 5 ಲಕ್ಷ ರೂಪಾಯಿ ರದ್ದು.ರೈತರ

ಪಂಪ್ ಸೆಟ್ ಸಂಪರ್ಕ ಶುಲ್ಕ 1.5 ಲಕ್ಷಕ್ಕೆ ಏರಿಕೆ ಹೀಗೆ ಕಾಂಗ್ರೆಸ್ ಹತ್ತು ಹಲವು ಕಡೆಗಳಲ್ಲಿ ಬೆಲೆ ಏರಿಕೆ ಮಾಡಿ ಸಾಮಾನ್ಯ ಜನರ ಜೋಬು ಸುಟ್ಟಿದೆ ಎಂದು ರಾಜ್ಯ ಬಿಜೆಪಿ ವಿವಿಧ ಬಗೆಯ ಆರೋಪಗಳನ್ನು ಹೊರಿಸಿದೆ.

ಇದನ್ನು ಓದಿ: ಚುನಾವಣಾ ಬಾಂಡ್ ಮೂಲಕ ಹಣ ಸಂದಾಯ ಮಾಡಿದವರಿಗೆ ಸರ್ಕಾರಿ ಟೆಂಡರ್:ಡಾ ಪರಕಾಲ ಪ್ರಭಾಕರ್

Exit mobile version