ದೇಶದ ಶ್ರೀಮಂತ NGO ಆರ್‍ಎಸ್‍ಎಸ್‍ಗೆ ಹಣ ಎಲ್ಲಿಂದ ಬರುತ್ತೆ? : ಬಿ.ಕೆ ಹರಿಪ್ರಸಾದ್!

BK Hariprasad

ಆರ್‍ಎಸ್‍ಎಸ್(RSS) ದೇಶದ ಅತ್ಯಂತ ಶ್ರೀಮಂತ ಎನ್‍ಜಿಒ(NGO) ಆಗಿದೆ. ಹಾಗಿದ್ದರೆ ಆರ್‍ಎಸ್‍ಎಸ್ ಸಂಘಟನೆಗೆ ಹಣ ಎಲ್ಲಿಂದ ಬರುತ್ತೆ? ಎಂಬ ಪ್ರಶ್ನೆಗೆ ಉತ್ತರ ಹುಡುಕಿದ್ರೆ, ಭ್ರಷ್ಟಾಚಾರಕ್ಕೆ ಆರ್‍ಎಸ್‍ಎಸ್ ಕುಮ್ಮಕ್ಕು ಇದೆ.

ಭ್ರಷ್ಟಾಚಾರದ(Corruption) ಹಣದಿಂದಲೇ ಆರ್‍ಎಸ್‍ಎಸ್ ಶ್ರೀಮಂತ ಎನ್‍ಜಿಒ ಆಗಿದೆ ಎಂದು ವಿಧಾನಪರಿಷತ್(VidhanParishath) ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್(BK Hariprasad) ಆರ್‍ಎಸ್‍ಎಸ್ ವಿರುದ್ದ ವಾಗ್ದಾಳಿ ನಡೆಸಿದರು. ಮಲ್ಲೇಶ್ವರಂನಲ್ಲಿ(Malleshwaram) ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಸಚಿವರ ಬಳಿಯೂ ಆರ್‍ಎಸ್‍ಎಸ್ ಸಂಘಟನೆಯ ಒಎಸ್‍ಡಿ ಇದ್ದಾರೆ. ಸಚಿವರ ಬಳಿ ಭ್ರಷ್ಟಾಚಾರದಲ್ಲಿ ಬಂದ ಹಣವನ್ನು ಕಲೆಕ್ಷನ್ ಮಾಡುವುದೇ ಇವರ ಪೂರ್ಣಾವಧಿ ಕಾರ್ಯವಾಗಿದೆ.

ಹೀಗೆ ಆರ್‍ಎಸ್‍ಎಸ್ ಸಂಘಟನೆ ಸಾಮಾಜಿಕ ಸಂಘಟನೆ ಎಂದು ಹೇಳಿಕೊಂಡು ರಾಜಕೀಯದಲ್ಲಿ ಸಕ್ರಿಯವಾಗಿದ್ದು, ಪರೋಕ್ಷವಾಗಿ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದರು. ಇನ್ನು ಮಲ್ಲೇಶ್ವರಂನಲ್ಲಿ ಅಶ್ವತ್ಥ್ ನಾರಾಯಣ್‍ರನ್ನು ‘ಗುಳುಂ ನಾರಾಯಣ್’ ಎಂದೇ ಕರೆಯುತ್ತಾರೆ. ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಬಹುತೇಕ ಕಾಮಗಾರಿಗಳನ್ನು ಅಶ್ವತ್ಥ್ ನಾರಾಯಣ್ ಸಂಬಂಧಿಗಳೇ ಮಾಡುತ್ತಿದ್ದಾರೆ. ಪ್ರತಿಯೊಂದು ಕಾಮಗಾರಿಯಲ್ಲಿಯೂ ಅಶ್ವತ್ಥ್ ನಾರಾಯಣ್‍ಗೆ ಕಮಿಷನ್ ಹೋಗುತ್ತದೆ.

ಈಗ ಪಿಎಸ್‍ಐ ನೇಮಕಾತಿಯಲ್ಲೂ ಸಚಿವರ ಸಹೋದರನ ಹೆಸರು ಕೇಳಿಬಂದಿದೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕೆಂದು ಆಗ್ರಹಿಸಿದರು. ಇನ್ನು ಕೇಂದ್ರ ಗೃಹಸಚಿವ ಅಮಿತ್ ಶಾ ಆಗಮನದಿಂದ ರಾಜ್ಯಕ್ಕೆ ನಯಾಪೈಸೆ ಉಪಯೋಗವಿಲ್ಲ. ರಾಜ್ಯ ಬಿಜೆಪಿ ಸರ್ಕಾರದ 40% ಕಮಿಷನ್ ಮತ್ತು ಪಿಎಸ್‍ಐ ಅಕ್ರಮದಲ್ಲಿ ತೆಗೆದುಕೊಂಡ ಕಮಿಷನ್ ಪಾಲು ತೆಗೆದುಕೊಳ್ಳಲು ಅಮಿತ್ ಶಾ ರಾಜ್ಯಕ್ಕೆ ಬಂದಿದ್ದಾರೆ. ಇನ್ನು ರಾಜ್ಯದಲ್ಲಿ ಗೃಹ ಸಚಿವರ ಮೇಲೆಯೇ ಮೊದಲು ತನಿಖೆಯಾಗಬೇಕು.

ಸ್ವ-ಇಲಾಖೆ ಮೇಲೆ ಗಂಭೀರ ಆರೋಪ ಬಂದಿದ್ದರು, ಗೃಹ ಸಚಿವ ಅರಗ ಜ್ಞಾನೇಂದ್ರ ಮಾತ್ರ ಸುಮ್ಮನೆ ಕುಳಿತಿದ್ದಾರೆ. ಪಿಎಸ್‍ಐ ನೇಮಕಾತಿ ಅಕ್ರಮ ಕುರಿತು ತನಿಖೆಯಾಗುವರೆಗೂ ಗೃಹ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

Exit mobile version