ಬೆಂಗಳೂರು ಬಂದ್ : ನಾಳೆ ಸೆ. 26 ರಂದು ಬೆಂಗಳೂರು ಸ್ತಬ್ದವಾಗಲಿದ್ದು, ಏನಿರುತ್ತೆ? ಏನಿರಲ್ಲ?

Bengaluru: ಕಾವೇರಿ ನೀರಿನ ವಿವಾದದ ಹಿನ್ನಲೆಯಲ್ಲಿ ವಿವಿಧ ಸಂಘಟನೆಗಳು ಕರೆ ಕೊಟ್ಟು ಬೆಂಗಳೂರು ಬಂದ್ಗೆ (Blore Bandh on Sep 26th) ಅಡ್ಡಿ ಇಲ್ಲ. ಆದರೆ ಬಿಜೆಪಿ,‌ ಜೆಡಿಎಸ್ ಈ

ವಿಚಾರವಾಗಿ ರಾಜಕೀಯ ಮಾಡುತ್ತಿದೆ (Blore Bandh on Sep 26th) ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ತಮಿಳುನಾಡಿಗೆ (Tamilnadu) ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಕರ್ನಾಟಕದಲ್ಲಿ ಹೋರಾಟಗಳು ತೀವ್ರ ಸ್ವರೂಪಕ್ಕೆ ತಿರುಗಿದೆ. ಈಗಾಗಲೇ ಮಂಡ್ಯ (Mandya) ಮದ್ದೂರು ಬಂದ್ ಸಕ್ಸಸ್ ಆಗಿದ್ದು,

ನಾಳೆ(ಸೆಪ್ಟೆಂಬರ್ 26) ರಾಜಧಾನಿ ಬೆಂಗಳೂರು ಬಂದ್​ಗೆ ಕರೆ ನೀಡಲಾಗಿದೆ. ಈ ಮಧ್ಯೆ ಸೆಪ್ಟೆಂಬರ್ 29 ರಂದು ಅಖಂಡ ಕರ್ನಾಟಕ ಬಂದ್ (Karnataka Bandh) ಮಾಡಲು ತೀರ್ಮಾನಿಸಲಾಗಿದೆ.

ಭಾನುವಾರ ವಾಟಾಳ್ ನಾಗರಾಜ್ (Vatal Nagaraj) ಹಾಗೂ ಕರವೇ ಪ್ರವೀಣ್ ಶೆಟ್ಟಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್​ (Mysore Bank circle)

ನಲ್ಲಿ ಕಪ್ಪು ಬಟ್ಟೆ ಪ್ರದರ್ಶನ ಮಾಡಿ ಕರಾಳ ದಿನ ಅಂತಾ ಆಕ್ರೋಶ ಹೊರಹಾಕಲಾಯಿತು. ಇದೇ ಪ್ರತಿಭಟನೆ ವೇಳೆಯೇ ವಾಟಾಳ್ ನಾಗರಾಜ್, ಶುಕ್ರವಾರ ಅಖಂಡ ಕರ್ನಾಟಕ ಬಂದ್ ಮಾಡಲು

ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

ಸೆಪ್ಟೆಂಬರ್ 29ಕ್ಕೆ ಕರೆ ನೀಡಲಾಗಿರುವ ಅಖಂಡ ಕರ್ನಾಟಕ ಬಂದ್ ಸಂಬಂಧ ಇಂದು(ಸೆ.25) ವಾಟಾಳ್ ನಾಗರಾಜ್ ಮತ್ತು ಕನ್ನಡ ಸಂಘಟನೆಗಳು ಮತ್ತೊಂದು ಸುತ್ತಿನ ಸಭೆ ನಡೆಸಿದವು.

ಈ ಸಭೆಯಲ್ಲಿ ಹೋರಾಟದ ರೂಪುರೇಷೆಗಳನ್ನು ನಿರ್ಧಾರ ಮಾಡಲಾಗಿದೆ.

ಇನ್ನು ಮಂಗಳವಾರ ನಡೆಯುವ ಬೆಂಗಳೂರು ಬಂದ್ ವಿಚಾರವಾಗಿ ರವಿವಾರ ಪ್ರತಿಕ್ರಿಯೆ ನೀಡಿದ್ದ ವಾಟಾಳ್ ನಾಗಾರಾಜ್, ”ಅವರಿಗೆ ಬಂದ್ ಮಾಡಿ ಅಂತಾನೂ ಹೇಳಲ್ಲ, ಬಿಡಿ ಅಂತಾನೂ ಹೇಳಲ್ಲ.

ಒಟ್ಟಿನಲ್ಲಿ ಶುಕ್ರವಾರ ಕರ್ನಾಟಕ ಬಂದ್ ಮಾಡಲಾಗುವುದು ಎಂದು ಅವರು ತಿಳಿಸಿದರು.

ಸುಪ್ರೀಂ ಕೋರ್ಟ್‌ (Supreme Court) ಆದೇಶದಂತೆ ತಮಿಳುನಾಡಿಗೆ ಪ್ರತಿದಿನ 5,000 ಕ್ಯೂಸೆಕ್ಸ್‌ ನೀರು ಹರಿಸುವುದನ್ನು ಖಂಡಿಸಿ ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಸೇರಿದಂತೆ

ಹಲವು ಸಂಘ ಸಂಸ್ಥೆಗಳು ಮಂಗಳವಾರದಂದು ಬೆಂಗಳೂರು ಬಂದ್‌ಗೆ ಕರೆ ನೀಡಿವೆ. ನಾಳೆ ನಗರದ ಹಲವು ಕಾರ್ಯಕ್ರಮಗಳು ಸ್ಥಗಿತಗೊಳ್ಳುವ ನಿರೀಕ್ಷೆಯಿದೆ. ರಾಜ್ಯಾದ್ಯಂತ 175 ಕ್ಕೂ ಹೆಚ್ಚು ಗುಂಪುಗಳು

ಬಂದ್‌ಗೆ ಬೆಂಬಲ ನೀಡಿದ್ದು, ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸುವ ರೈತ ಸಂಘಟನೆಗಳನ್ನು ಬೆಂಬಲಿಸುವುದಾಗಿ ಹೇಳಿಕೊಂಡಿವೆ.

ಯಾವ ಸೇವೆ ಇರತ್ತೆ, ಯಾವುದು ಇರಲ್ಲ…

ಯಾವ ಯಾವ ಸೇವೆ/ಸೌಲಭ್ಯ ಇರಲಿದೆ..

ಲಭ್ಯವಿಲ್ಲದಿರುವ ಸೇವೆಗಳು:

ಇದನ್ನು ಓದಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೊಂದಲ ಸೃಷ್ಟಿಸಿದ ಡ್ರೋನ್ ಹಾರಾಟ: ತನಿಖೆ ಶುರು

ಮೇಘಾ ಮನೋಹರ ಕಂಪು

Exit mobile version