Bengaluru: ಕರ್ನಾಟಕ ಹೈಕೋರ್ಟ್ (Blore enemy is BBMP – Kar HC) ಬಿಬಿಎಂಪಿಗೆ ತೀವ್ರ ತರಾಟೆ ತೆಗೆದುಕೊಂಡಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮ ಹೋರ್ಡಿಂಗ್ಗಳ
ಮೇಲೆ ನಿಗಾ ಇರಿಸಲು ವಿಫಲವಾದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಬೆಂಗಳೂರಿನ ಮೊದಲ ಶತ್ರು ಬಿಬಿಎಂಪಿಯೇ ಎಂದು ಅಸಮಾಧಾನ ವ್ಯಕ್ತ ಪಡಿಸಿದೆ.
ಒಂದು ವೇಳೆ ಮಹಾನಗರ ಪಾಲಿಕೆಯು ಕ್ರಮ ತೆಗೆದುಕೊಳ್ಳಲು ವಿಫಲವಾದಲ್ಲಿ ನಗರದಲ್ಲಿ ಅಳವಡಿಸಿರುವ ಪ್ರತಿ ಅಕ್ರಮ ಹೋರ್ಡಿಂಗ್ಗೆ 50 ಸಾವಿರ ರೂ. ದಂಡ ವಿಧಿಸುವುದಾಗಿ ಈ ಹಿಂದೆಯೇ ಹೈಕೋರ್ಟ್
ಎಚ್ಚರಿಕೆ ನೀಡಿತ್ತು. ಆದರೆ, ನಗರದಾದ್ಯಂತ ಅಕ್ರಮ ಫ್ಲೆಕ್ಸ್ (Flex) ಹಾಗೂ ಬ್ಯಾನರ್ ತೆರವಿಗೆ ಬಿಬಿಎಂಪಿ ನಿರ್ಲಕ್ಷ್ಯ ವಹಿಸಿರುವುದಕ್ಕೆ ಹೈಕೋರ್ಟ್ ತೀವ್ರ ಬೇಸರ ವ್ಯಕ್ತಪಡಿಸಿದೆ.
ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ (Prasanna B Varale) ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠವು ನಗರದಲ್ಲಿನ ಎಲ್ಲ ಹೋರ್ಡಿಂಗ್ಸ್ ಮತ್ತು
ಫ್ಲೆಕ್ಸ್ಗಳ ಸಮೀಕ್ಷೆ ನಡೆಸಿ ನವೆಂಬರ್ (November) 28ರ ಮೊದಲು ವರದಿ ಸಲ್ಲಿಸುವಂತೆ ಆದೇಶಿಸಿದ್ದು, ಪಾಲಿಕೆಯ ನಿಷ್ಕ್ರಿಯತೆಯಿಂದ ನಗರವು ಕೋಟ್ಯಂತರ ರೂಪಾಯಿ ನಷ್ಟವನ್ನು ಎದುರಿಸುತ್ತಿದೆ.
ಬಿಬಿಎಂಪಿಯು (BBMP), ಜಾಹೀರಾತು ಹೋರ್ಡಿಂಗ್ಗಳಿಂದ ಬರಬೇಕಿದ್ದ ಹೆಚ್ಚುವರಿ ತೆರಿಗೆಯನ್ನು ಸಾರ್ವಜನಿಕರ ಮೇಲೆ ಹೇರುತ್ತಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದ್ದು, ಬಿಬಿಎಂಪಿಯನ್ನು ತರಾಟೆಗೆ
ತೆಗೆದುಕೊಂಡಿದೆ. ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್, ಬೆಂಗಳೂರಿನ (Blore enemy is BBMP – Kar HC) ಮೊದಲ ಶತ್ರು ಬಿಬಿಎಂಪಿ ಎಂದು ಕಿಡಿಕಾರಿದೆ.
ಅಕ್ರಮ ಹೋರ್ಡಿಂಗ್ಗಳನ್ನು (Hoardings) ತೆರವುಗೊಳಿಸುವಲ್ಲಿ ಬಿಬಿಎಂಪಿ ವಿಫಲವಾಗಿದೆ. ಆದರೆ, ಜನರಿಗೆ ಸೌಲಭ್ಯಗಳನ್ನು ನೀಡಲು ಹಣದ ಕೊರತೆ ಇದೆ ಎಂದು ಬಿಬಿಎಂಪಿ ಹೇಳುತ್ತದೆ ಎಂದು ಕೋರ್ಟ್
ಅತೃಪ್ತಿ ವ್ಯಕ್ತಪಡಿಸಿದ್ದು, ಎಷ್ಟು ಹೋರ್ಡಿಂಗ್ಗಳಿಗೆ ಅನುಮತಿ ನೀಡಲಾಗಿದೆ ಹಾಗೂ ಅದರಿಂದ ಎಷ್ಟು ಆದಾಯ ಸಂಗ್ರಹವಾಗಿದೆ ಮತ್ತು ಅಕ್ರಮ ಫ್ಲೆಕ್ಸ್ಗಳ ವಿರುದ್ಧ ಕೈಗೊಂಡ ಕ್ರಮಗಳೇನು ಎಂಬುದನ್ನು ತಿಳಿಯಲು
ಹೈಕೋರ್ಟ್ (High court) ಪಾಲಿಕೆಗೆ ನಗರದಾದ್ಯಂತ ಸಮೀಕ್ಷೆ ನಡೆಸುವಂತೆ ಆದೇಶಿಸಿದ್ದು, ಬಿಬಿಎಂಪಿಗೆ ನವೆಂಬರ್ 28ರೊಳಗೆ ವರದಿ ಸಲ್ಲಿಸುವಂತೆ ನ್ಯಾಯಾಲಯವು ಆದೇಶ ಹೊರಡಿಸಿದೆ.
ಇದನ್ನು ಓದಿ: ಬೆಂಗಳೂರಿನ ಮೊದಲ ಶತ್ರು ಬಿಬಿಎಂಪಿ ಎಂದು ಪಾಲಿಕೆ ವಿರುದ್ಧ ತೀವ್ರ ಅಸಮಾಧಾನ: ಕರ್ನಾಟಕ ಹೈಕೋರ್ಟ್
- ಭವ್ಯಶ್ರೀ ಆರ್.ಜೆ