ಜೂನ್ 21ರಿಂದ ರಸ್ತೆಗಿಳಿಯಲಿರುವ ಬಿಎಮ್‌ಟಿಸಿ ಬಸ್‌ಗಳು: ಷರತ್ತುಗಳನ್ನು ಅನ್ವಯ

ಬೆಂಗಳೂರು,ಜೂ.19: ರಾಜ್ಯದಲ್ಲಿ ಕೊರೊನಾ 2ನೇ ಅಲೆ ತಗ್ಗುತ್ತಿರುವ ಹಿನ್ನೆಲೆಯಲ್ಲಿ ಹಂತ ಹಂತವಾಗಿ ಲಾಕ್‌ಡೌನ್‌ ಸಡಿಲಿಸಿ ಅನ್‌ಲಾಕ್‌ ಮಾಡಲಾಗುತ್ತಿದೆ. ಜೂನ್‌ 21 ಅಂದರೆ ಸೋಮವಾರದಿಂದ ಅನ್‌ಲಾಕ್‌ 2.O ಜಾರಿಯಾಗಲಿದ್ದು, ಸಾರ್ವಜನಿಕ ಸಾರಿಗೆಗೆ ಅನುಮತಿ ನೀಡಲಾಗಿದೆ. ಈ ಹಿನ್ನೆಲೆ ಬೆಂಗಳೂರಿನ ಬಸ್ ಪ್ರಯಾಣಿಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಜೂನ್ 21ರಿಂದ BMTC ಬಸ್ ಸಂಚಾರ ಹಿನ್ನೆಲೆ ಬಿಎಂಟಿಸಿ  ಎಂಡಿ ಶಿಖಾ ಮಾಹಿತಿ ನೀಡಿದರು. ಬಸ್‌ ಚಾಲಕರು ರೆಡಿ ಇದ್ದಾರೆ. ಸರ್ಕಾರದ ಅಧಿಕೃತ ಘೋಷಣೆಗಾಗಿ ಕಾಯುತ್ತಿದಾರೆ.

ಸರ್ಕಾರದ ಅನುಮತಿ ಮೇರೆಗೆ ಮೊದಲ ಶಿಫ್ಟ್ ನಲ್ಲಿ 1,000 ಬಸ್ ಗಳು, ಎರಡನೇ ಶಿಫ್ಟ್‌ನಲ್ಲಿ 800 – 1000 ಬಸ್ ಗಳು ರಸ್ತೆಗಿಳಿಯಲು ಸಿದ್ಧವಿದೆ. ಸದ್ಯ 90% ಸಾರಿಗೆ ಸಿಬ್ಬಂದಿಗಳಿಗೆ ವ್ಯಾಕ್ಸಿನೇಷನ್‌ ಆಗಿದೆ. ಪ್ರಯಾಣಿಕರೂ ಪ್ರೊಟೋಕಾಲ್ ಪಾಲಿಸಬೇಕು. ಸಾಮಾಜಿಕ ಅಂತರಕ್ಕಾಗಿ ಶೇ 50% ಪ್ರಯಾಣಿಕರಿಗೆ ವ್ಯವಸ್ಥೆ ಮಾಡಲಾಗಿದೆ. ಬಸ್‌ನಲ್ಲಿ ಪ್ರಯಾಣಿಸುವವರಿಗೆ ಮಾಸ್ಕ್ ಕಡ್ಡಾಯ ಎಂದು ಎಚ್ಚರಿಸಿದರು.

ಗೂಗಲ್ ಪೇ, ಫೋನ್ ಪೇ ಮೂಲಕವೂ ಟಿಕೆಟ್ ಪಡೆದುಕೊಳ್ಳುವ ವ್ಯವಸ್ಥೆ ಮಾಡುತ್ತೇವೆ. ಆರಂಭದಲ್ಲಿ 2000 ಬಸ್ ಗಳು ಅಪರೇಟ್ ಮಾಡುತ್ತೇವೆ. ಅದಾದ ಬಳಿಕ ಜನ ದಟ್ಟಣೆ ನೋಡ್ಕೊಂಡು ಹೆಚ್ಚುವರಿ ಬಸ್‌ಗಳನ್ನು ರಸ್ತೆಗೆ ಇಳಿಸಲಾಗುವುದು ಎಂದು ಬಿಎಂಟಿಸಿ  ಎಂಡಿ ಶಿಖಾ ತಿಳಿಸಿದರು.

ಸಾವ೯ಜನಿಕರು ಮತ್ತು ಬಿಎಮ್‌ಟಿಸಿ ಚಾಲಕರು ಅನುಸರಿಸಲೇಬೇಕಾದ ಷರತ್ತುಗಳು ಈ ಕೆಳಗಿನಂತಿವೆ.

•ಶೇಕಡಾ 50ರಷ್ಟು ಬಸ್ಸುಗಳನ್ನ ಮಾತ್ರ ರಸ್ತೆಗಿಳಿಸಲು ಅನುಮತಿ.

•ಬಸ್ಸುಗಳಲ್ಲಿ ಶೇಕಡಾ 50ರಷ್ಟು ಪ್ರಯಾಣಿಕರ ಸಂಚಾರಕ್ಕೆ ಅನುಮತಿ.

•ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ.

•ಬಸ್ಸುಗಳಲ್ಲಿ ಒಂದು ಆಸನ ಬಿಟ್ಟು ಒಂದು ಆಸನದಲ್ಲಿ ಕುಳಿತು ಪ್ರಯಾಣಿಸಲು ಅವಕಾಶ.

•ನಿಂತುಕೊಂಡು ಪ್ರಯಾಣಿಸೋದಕ್ಕೆ ಅವಕಾಶ ಇಲ್ಲ.

•ಬಸ್ ನಿಲ್ದಾಣಗಳಲ್ಲಿ ಜನಸಂದಣಿ ಆಗದಂತೆ ನೋಡಿಕೊಳ್ಳುವ ಜವಬ್ದಾರಿ ಪೊಲೀಸ್ ಇಲಾಖೆ ಮತ್ತು ಬಿಎಂಟಿಸಿ ಅಧಿಕಾರಿಗಳಿಗೆ.

•ಮೆಜೆಸ್ಟಿಕ್, ಟರ್ಮಿನಲ್ಸ್, ಪ್ರಮುಖ ಬಸ್ ನಿಲ್ದಾಣಗಳಲ್ಲಿ ಕೋವಿಡ್ ಟೆಸ್ಟ್ ಕಡ್ಡಾಯ.

•ನೈಟ್ ಕರ್ಫ್ಯೂ ಆರಂಭಕ್ಕೂ ಮುನ್ನ 7 ಗಂಟೆ ಒಳಗೆ ಬಸ್ ಸಂಚಾರ ನಿಲ್ಲಿಸಬೇಕು.

Exit mobile version