ಬಿಎಂಟಿಸಿ ಬಸ್ ಚಾಲಕರ ನಿರ್ಲಕ್ಷ್ಯ: ಬೆಂಗಳೂರಿನಲ್ಲಿ ಅಪಘಾತ, ಸಾವಿನ ಸಂಖ್ಯೆ ಹೆಚ್ಚಳ

Bengaluru : ಬೆಂಗಳೂರು ನಗರದಲ್ಲಿ ಬಿಎಂಟಿಸಿ(BMTC Negligence Accidents increases) ಬಸ್ ಚಾಲಕರ ನಿರ್ಲಕ್ಷ್ಯದಿಂದ ಅಪಘಾತ ಪ್ರಕರಣಗಳು ಹೆಚ್ಚಾಗಿದ್ದು, ಕಳೆದ ಮೂರು ವರ್ಷಕ್ಕೆ

(3years) ಹೋಲಿಸಿದರೆ ಅಪಘಾತಗಳು ಎರಡು ಪಟ್ಟು ಹೆಚ್ಚಾಗಿರುವ ಬಗ್ಗೆ ವರದಿಯಾಗಿದೆ. ಸಾವಿನ ಸಂಖ್ಯೆಯೂ ಹೆಚ್ಚಳವಾಗಿದ್ದು, ಹಾಗಾಗಿ ಬಿಎಂಟಿಸಿ ಮತ್ತು ಕೆಎಸ್​ಆರ್​ಟಿಸಿಗೆ ಸಂಚಾರಿ

ಇಲಾಖೆಯಿಂದ ಕ್ರಮ (BMTC Negligence Accidents increases) ಕೈಗೊಳ್ಳಲು ಮುಂದಾಗಿದೆ.

ಕಳೆದ ಒಂದು ವರ್ಷದಲ್ಲಿ(1 Year) ಬಿಎಂಟಿಸಿಯಿಂದ 34 ಜನರು ಸಾನ್ನಪ್ಪಿದ್ದರೆ, 97 ಜನರು ಅಪಘಾತಕ್ಕೊಳಗಾಗಿದ್ದಾರೆ. ಕೆಎಸ್​ಆರ್​ಟಿಸಿ(KSRTC) ಅಪಘಾತದಿಂದ ಹತ್ತು ಮಂದಿ ಸಾವನ್ನಪ್ಪಿದ್ದರೆ,

28 ಜನರು ಅಪಘಾತಕ್ಕೊಳಗಾಗಿರುವುದಾಗಿ ವರದಿ ಆಗಿದ್ದು, ಸಂಚಾರಿ ಇಲಾಖೆಯ ತನಿಖೆಯಲ್ಲಿ ಚಾಲಕರ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ಚಾಲನೆ ಬೆಳಕಿಗೆ ಬಂದಿದೆ.

ಎರಡೂ ಸಾರಿಗೆ ಇಲಾಖೆಗೆ ದಂಡ ಕಟ್ಟಲು ಪತ್ರ ಬರೆದಿದ್ದ ಬೆನ್ನಲ್ಲೇ ಕೋಟ್ಯಾಂತರ ದಂಡ ಪಾವತಿ ಸಂಚಾರಿ ನಿಯಮ ಉಲ್ಲಂಘಿಸಿರುವುದರಲ್ಲಿ ಕೆಎಸ್​ಆರ್​ಟಿಸಿಗಿಂತ ಬಿಎಂಟಿಸಿಯೇ ಹೆಚ್ಚು. ಇನ್ನು

ಬಿಎಂಟಿಸಿಯು 3917 ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದು, ಕೆಎಸ್​ಆರ್​ಟಿಸಿ 3347 ಸಂಚಾರಿ ನಿಯಮ ಉಲ್ಲಂಘಿಸಿದೆ.

ಹಾಗಾಗಿ ಒಂದು ಕೋಟಿ ನಾಲ್ಕು ಲಕ್ಷದ ಹತ್ತು ಸಾವಿರ ರೂ. ದಂಡವನ್ನು ಬಿಎಂಟಿಸಿ ಕಟ್ಟಿದೆ. ಕೆಎಸ್​ಆರ್​ಟಿಸಿ 14 ಲಕ್ಷ ರೂ ದಂಡ ಪಾವತಿಸಿದ್ದು, ಸಂಚಾರಿ ನಿಯಮಗಳನ್ನ ಉಲ್ಲಂಘಿಸಿ ಅಪಘಾತಗಳನ್ನ

ಹೆಚ್ಚು ಮಾಡುವರ ವಿರುದ್ದ ಕ್ರಮಕ್ಕೆ ಸೂಚನೆ ಹೊರಡಿಸಲಾಗಿದೆ.

ಬಿ.ಎಂ.ಟಿ.ಸಿ ಹೊಸ ಸಿಸ್ಟಮ್ ಜಾರಿ
ಬಿಎಂಟಿಸಿ ಬಸ್​​ಗಳಲ್ಲಿ ಮಹಿಳಾ ಪ್ರಯಾಣಿಕರ ಆತಂಕ ಹೋಗಲಾಡಿಸಲು ಪ್ಯಾನಿಕ್​ ಬಟನ್​, ಎಸ್ಓಎಸ್ ಸಿಸ್ಟಮ್ ಜಾರಿಗೆ ತಂದಿದ್ದು, ಕಿರುಕುಳದ ಸಂದರ್ಭದಲ್ಲಿ ಸೀಟ್​ ಪಕ್ಕದ ಪ್ಯಾನಿಕ್​ ಬಟನ್ ಪ್ರೆಸ್​

ಮಾಡಿದರೆ ಬಸ್ ಕ್ಯಾಮರಾ ಆನ್ ಆಗುತ್ತೆ. ಕಂಟ್ರೋಲ್ ರೂಮ್‍ಗೆ ಮೆಸೇಜ್ ಹೋಗುತ್ತೆ. ಬಸ್ ಮಾಹಿತಿ, ಸ್ಥಳದ ಎಲ್ಲವೂ ಮಾಹಿತಿ ಲಭ್ಯವಾಗುತ್ತೆ. ಆ ಕೂಡಲೇ ಮಹಿಳಾ ಪಿಂಕ್​ ಸಾರಥಿ ಪಡೆ ಆಗಮಿಸುತ್ತೆ.

ಇದನ್ನು ಓದಿ: ಡಿಸೆಂಬರ್ 13ರೊಳಗೆ ಭಾರತದ ಸಂಸತ್ತಿನ ಮೇಲೆ ದಾಳಿ ನಡೆಸ್ತೇವೆ : ಖಲಿಸ್ತಾನ ಉಗ್ರ ಪನ್ನು ಬೆದರಿಕೆ

Exit mobile version