ಇನ್ಮುಂದೆ ರೈಲ್ವೆ ಟಿಕೆಟ್ ಅನ್ನು ಕನ್ನಡದಲ್ಲಿಯೇ ಬುಕ್ ಮಾಡಿಕೊಳ್ಳಬಹುದು

New Delhi : ನೈಋತ್ಯ ರೈಲ್ವೆ ಇಲಾಖೆಯು ಕನ್ನಡ ಭಾಷೆಯಲ್ಲಿ ಆನ್‌ಲೈನ್‌ ರೈಲು ಟಿಕೆಟ್ ಬುಕಿಂಗ್(book railway tickets Kannada) ಅಪ್ಲಿಕೇಶನ್ ಅನ್ನು ಇದೀಗ ನೂತನವಾಗಿ ಪ್ರಾರಂಭಿಸಿದೆ.


ನೈಋತ್ಯ ರೈಲ್ವೆಯು ಕನ್ನಡದಲ್ಲಿ ಅನ್ ರಿಸರ್ವ್‌ಡ್‌ ಟಿಕೆಟಿಂಗ್ ಸಿಸ್ಟಮ್ (UTS) ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದ್ದು, ಕನ್ನಡಿಗರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದೆ.

ಬಳಕೆದಾರರು ಈಗ ಕನ್ನಡ ಭಾಷೆಯ ಸಹಾಯದಿಂದ ತಮ್ಮ ಟಿಕೆಟ್‌ಗಳನ್ನು ಬುಕ್ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದೆ.

ರಾಜ್ಯದ ಸ್ಥಳೀಯ ಭಾಷೆಯಲ್ಲಿ ಸರ್ಕಾರಿ ಅಪ್ಲಿಕೇಶನ್‌ಗಳನ್ನು(book railway tickets Kannada) ಒದಗಿಸುವುದು ಕರ್ನಾಟಕದ ಜನರ ಬಹುಕಾಲದ ಬೇಡಿಕೆಯಾಗಿದೆ.

SWR ನ ವಿಭಾಗೀಯ ರೈಲ್ವೇ ಮ್ಯಾನೇಜರ್‍‌ನ ಅಧಿಕೃತ ಟ್ವಿಟರ್(Twitter) ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಲಾಗಿದ್ದು,

ರೈಲ್ವೇ ಇಲಾಖೆಯು 18 01. 23 ರಂದು ಕನ್ನಡ ಭಾಷೆಯಲ್ಲಿ ಮಾರ್ಪಾಡುಗಳೊಂದಿಗೆ ಕಾಯ್ದಿರಿಸದ ರೈಲು ಟಿಕೆಟ್ಗಳನ್ನು ಖರೀದಿಸಲು UTS ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ.

ಇದನ್ನೂ ಓದಿ: https://vijayatimes.com/siddaramaiah-criticized-about-modi/

ಅಪ್ಲಿಕೇಶನ್ ಈಗಾಗಲೇ iOS ಮತ್ತು ಆಪಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿದೆ. ರೈಲು ನಿಲ್ದಾಣಗಳಲ್ಲಿನ ಟಿಕೆಟ್ ಕೌಂಟರ್ಗಳ(IRCTC) ಬಳಿ ಪ್ರಯಾಣಿಕರ ದಟ್ಟಣೆಯನ್ನು ತಪ್ಪಿಸಲು ಆನ್‌ಲೈನ್‌ ಬುಕಿಂಗ್ ಸೌಲಭ್ಯವನ್ನು ಪಡೆದುಕೊಳ್ಳುವಂತೆ ರೈಲ್ವೇ ಇಲಾಖೆ ಬಳಕೆದಾರರನ್ನು ಕೋರಿದೆ.

ನೈರುತ್ಯ ರೈಲ್ವೆಯಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು, ಟಿಕೆಟ್‌ಗಳ ವಿವರಗಳನ್ನು ಕನ್ನಡ ಭಾಷೆಯಲ್ಲಿ ಮುದ್ರಿಸುವಂತೆ ಕನ್ನಡ ಪರ ಹೋರಾಟಗಾರರು ಈ ಹಿಂದೆ ಒತ್ತಾಯಿಸುತ್ತಿದ್ದರು.

ಇಂದು ಆ ಒತ್ತಾಯಕ್ಕೆ ಜಯ ಸಿಕ್ಕಿದೆ ಎಂದು ಅನೇಕರು ಸಂತಸ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ರಾಜ್ಯವು ಭಾರತೀಯ ರೈಲ್ವೆಗೆ ಬಹಳ ಮುಖ್ಯವಾದ ರಾಜ್ಯವಾಗಿದೆ. ಏಕೆಂದರೆ ಇದು ಶಿಕ್ಷಣ,

ಪ್ರವಾಸೋದ್ಯಮ ಮತ್ತು ವ್ಯಾಪಾರಕ್ಕಾಗಿ ದೇಶದಾದ್ಯಂತ ಅನೇಕ ಜನರನ್ನು ಸೆಳೆದು, ಉತ್ತಮ ಸಂಪರ್ಕವನ್ನು ನೀಡಿದೆ!

ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲು(Vande bharat train) ಕರ್ನಾಟಕದ ಮೈಸೂರು ಮತ್ತು ಚೆನ್ನೈ ನಡುವೆ ಉದ್ಘಾಟನೆಗೊಂಡಿದ್ದು,

ಅದು ಬೆಂಗಳೂರಿನ(Bengaluru) ಮೂಲಕ ಪ್ರಯಾಣಿಸಲಿದೆ. ಸದ್ಯದ ವರದಿಗಳ ಪ್ರಕಾರ, ಹುಬ್ಬಳ್ಳಿ ಮತ್ತು ಬೆಂಗಳೂರು ನಡುವೆ ಮತ್ತೊಂದು ವಂದೇ ಭಾರತ್ ರೈಲನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರ ಯೋಜಿಸಿದ್ದು,

ಈ ಬಗ್ಗೆ ಈ ಹಿಂದೆಯೇ ಘೋಷಣೆ ಮಾಡಿತ್ತು. ಆದ್ರೆ ಈ ಕುರಿತು ಅಧಿಕೃತ ಘೋಷಣೆಗಾಗಿ ನಿರೀಕ್ಷಿಸಲಾಗುತ್ತಿದೆ.

Exit mobile version