ಈ ತಪ್ಪುಗಳನ್ನು ಮಾಡಿದರೆ ಮಹಿಳೆಯರನ್ನು ಕಾಡಲಿದೆ ಅಪಾಯಕಾರಿ ಕ್ಯಾನ್ಸರ್‌!

ಕೆಲ ಕ್ಯಾನ್ಸರ್‌ಗಳು ನಮಗೆ ಗೊತ್ತಿಲ್ಲದೆ ದೇಹವನ್ನು ಆವರಿಸಿಕೊಂಡು ಬಿಡುತ್ತವೆ. ನಮಗೆ ಗೊತ್ತಾಗುವಾಗ ಸಮಯ ಮೀರಿರುತ್ತೆ. ಚಿಕಿತ್ಸೆಯೂ ಮಾಡಲಾಗದೆ ಯಾತನಾಮಯ ಸಾವಿಗೇ ಕಾಯಬೇಕಾಗುತ್ತೆ. ಅಂಥಾ ಮಾರಣಾಂತಿಕ ಕಾಯಿಲೆ ತಡೆಗಟ್ಟುವುದು ಹೇಗೆ?

ಕ್ಯಾನ್ಸರ್ ಅಂದ ತಕ್ಷಣ ಮನಸ್ಸೊಳಗೆ ಭಯ ಹುಟ್ಟುತ್ತೆ. ಯಾಕಂದ್ರೆ ಕ್ಯಾನ್ಸರ್ ಮಾರಣಾಂತಿಕ ಕಾಯಿಲೆ. ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್‌ ನಾನಾ ರೂಪಗಳಲ್ಲಿ ಜನರನ್ನು ಕಾಡುತ್ತಿದೆ. ಪ್ರತಿ ಅಂಗಾಂಗಗಳಿಗೆ ತಗುಲಿ ಜೀವನ ಪರ್ಯಂತ  ನರಳುವಂತೆ ಮಾಡುತ್ತೆ. ಅದರಲ್ಲೂ ಕೆಲವು ಕ್ಯಾನ್ಸರ್‌ ರೋಗಗಳು ಮನಷ್ಯನ ದೇಹದೊಳಗೆ ಸದ್ದಿಲ್ಲದೆ ಬೆಳೆದು ಕೊನೆಯ ಹಂತವರೆಗೂ ಯಾವುದೇ ಲಕ್ಷಣಗಳನ್ನು ತೋರಿಸಿದೆ, ತೀರ ಉಲ್ಬಣ ಸ್ಥಿತಿಯಲ್ಲಿ ಮನುಷ್ಯನನ್ನು ಪೀಡಿಸುತ್ತೆ. ಅಷ್ಟೊತ್ತಿಗೆ ಕ್ಯಾನ್ಸರ್‌ ದೇಹ ಪೂರ್ತಿ ಆವರಿಸಿ ಅದು ಗುಣವಾಗದ ಸ್ಥಿತಿಯನ್ನು ತಲುಪಿರುತ್ತೆ. ಇದು ಅತ್ಯಂತ ಅಪಾಯಕಾರಿ ಎನಿಸಿದೆ ಅಲ್ಲದೆ ಇಂಥಾ ಕ್ಯಾನ್ಸರ್‌ಗೆ ತುತ್ತಾಗುವವರು ಬದುಕಿ ಉಳಿಯುವುದೇ ಕಷ್ಟ.

ಅಂಥಾ ಅಪಾಯಕಾರಿ ಕ್ಯಾನ್ಸರ್‌ ಪೈಕಿ ಮಹಿಳೆಯರನ್ನು ಕಾಡುವ ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್‌ ಪ್ರಮುಖವಾದವುಗಳು. ಈ ಕ್ಯಾನ್ಸರ್‌ ಮಹಿಳೆಯರಿಗೆ ಕೊನೆಯ ಹಂತದಲ್ಲಿ ಗೊತ್ತಾಗಿ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಅತ್ಯಂತ ತ್ರಾಸದಾಯಕ ಹಾಗೂ ನೋವಿನಿಂದ ಕೂಡಿರುವ ಈ ಕಾಯಿಲೆ ಇತ್ತೀಚಿನ ದಿನಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸ್ತ್ರೀಯರನ್ನು ಕಾಡುತ್ತಿದೆ. ಹಾಗಾದ್ರೆ ಸ್ತನದ ಕ್ಯಾನ್ಸರ್‌ ಬರಲು ಕಾರಣ ಏನು? ಅದನ್ನು ತಡೆಗಟ್ಟುವುದು ಹೇಗೆ? ಸ್ತನ ಕ್ಯಾನ್ಶರ್‌ಗೆ ಕಾರಣವಾಗುವ ಕೆಲವು ತಪ್ಪುಗಳನ್ನು ತಪ್ಪಿಸುವುದು ಹೇಗೆ ಎಂದು ತಿಳಿಯೋಣ. ಸ್ತನ ಕ್ಯಾನ್ಸರ್ ತಡೆಗಟ್ಟಲು ನೀವು ಮಾಡಬಾರದ ತಪ್ಪುಗಳು

ಆಹಾರದ ನಿರ್ಲಕ್ಷ್ಯ

ಸಮತೋಲಿತ ಮತ್ತು ಆರೋಗ್ಯಕರ ಆಹಾರವನ್ನುತಿನ್ನುವುದು ಅತ್ಯಗತ್ಯ ಇದು ಸ್ತನ ಕ್ಯಾನ್ಸರ್ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಅನಿಯಮಿತ ಸಕ್ಕರೆ, ಸಂಸ್ಕರಿಸಿದ ಊಟ ಮತ್ತು ಕೆಂಪು ಮಾಂಸದ ಸೇವನೆ ಕಡಿಮೆ ಮಾಡಿ.  ಬದಲಾಗಿ, ನೀವು ಹಣ್ಣುಗಳು, ತರಕಾರಿಗಳು, ಕೊಬ್ಬಿನಾಮ್ಲಗಳು ಮತ್ತು ತೆಳು ಮಾಂಸವನ್ನು ಸೇವಿಸಬೇಕು.

ವ್ಯಾಯಾಮ ಮಾಡದಿರುವುದು

ದೇಹದ ಆರೋಗ್ಯ ಕಾಪಾಡಲು ವ್ಯಾಯಾಮ ಮುಖ್ಯ. ದೈಹಿಕವಾಗಿ ಉತ್ಸಾಹವಿಲ್ಲದಿದ್ದರೆ, ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ಗೆ ಕಾರಣ ಆಗಬಹುದು,ಹಾಗೂ ತೂಕ ಹೆಚ್ಚಾಗುವುದು ಕೂಡ ಒಂದು ಕಾರಣ. ವಾರಕ್ಕೆ ನೂರೈವತ್ತು ನಿಮಿಷಗಳ ಕಾಲ ವ್ಯಾಯಾಮ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು.

ಆಲ್ಕೋಹಾಲ್ ಸೇವನೆ ಮಾಡುವುದು

ಆಲ್ಕೋಹಾಲ್ ಸೇವಿಸುವ   ಹೆಚ್ಛಿನ ಮಹಿಳೆಯರಲ್ಲಿ ಸ್ತನ ದ ಕ್ಯಾನ್ಸರ್ ಅಪಾಯ ಹೆಚ್ಚಿರುತ್ತವೆ. ಆಲ್ಕೋಹಾಲ್ ಅನ್ನು ಮಿತವಾಗಿ ಸೇವಿಸಿದರೆ ಒಳ್ಳೆಯದು. ಧೂಮಪಾನ ಮತ್ತು ಮದ್ಯದ ಜೊತೆಗೆ ತಂಬಾಕು ಸೇವನೆಗೆ ಸಂಪೂರ್ಣವಾಗಿ ಫುಲ್‌ ಸ್ಟಾಪ್‌ ಹಾಕಬೇಕು.

ಗರ್ಭನಿರೋಧಕಗಳ ಆಯ್ಕೆಯಲ್ಲಿ  ನಿರ್ಲಕ್ಷ್ಯ

ಕೆಲವು ಹಾರ್ಮೋನುಗಳು ಮತ್ತು ಗರ್ಭನಿರೋಧಕ ಚಿಕಿತ್ಸೆಯಿಂದಾಗಿ  ಮಹಿಳೆಯರಲ್ಲಿ ಸ್ತನದ  ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಗರ್ಭನಿರೋಧಕ ಮಾತ್ರೆಗಳು ದೇಹದಲ್ಲಿ ಹಲವು ಬದಲಾವಣೆಗಳನ್ನು ಮಾಡುತ್ತವೆ. ಆದ್ದರಿಂದ ನೀವು ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸುತ್ತಿದ್ದರೆ ನೀವು ಮಾತ್ರೆಗಳನ್ನು ಮರೆತು ಬೇರೆ ಆಯ್ಕೆಯನ್ನು ಹುಡುಕಬೇಕು. ಸ್ತನದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಬೇರೆ ಯಾವ ಪರಿಹಾರವನ್ನು ಮಾಡಬಹುದು ಎಂದು ನಿಮ್ಮ ವೈದ್ಯರನ್ನು ಕೇಳಿ.

ಬೊಜ್ಜು ಅಥವಾ ಅಧಿಕ ತೂಕ

ನೀವು ಅಧಿಕ ತೂಕ ಹೊಂದಿದ್ದರೆ, ಅದು ವಾಸ್ತವಿಕವಾಗಿ ನಿಮ್ಮಲ್ಲಿ ಸ್ತನದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಆರೋಗ್ಯಕರ ತೂಕವನ್ನು ಕಾಯ್ದುಕೊಳ್ಳುವುದು ಅತ್ಯಗತ್ಯ. ಋತುಬಂಧವಾದ ಮಹಿಳೆಯರಲ್ಲಿ ಅತಿಯಾದ ತೂಕದಿಂದಾಗಿ ಸ್ತನ ಕ್ಯಾನ್ಸರ್ ಅಪಾಯವು ಹೆಚ್ಚುತ್ತೆ.

Exit mobile version