ಎದೆಹಾಲು ನೀಡುವ ತಾಯಂದಿರು ಈ ಆಹಾರಗಳಿಂದ ದೂರವಿರಿ

ತಾಯಂದಿರು ನೀಡುವ ಎದೆಹಾಲು ಮಕ್ಕಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಹಾಲುಣಿಸುವ ತಾಯಿ ಏನು ತಿನ್ನುತ್ತಿದ್ದಾಳೆ ಎಂಬುದು ಮಗುವಿಗೆ ಬಹಳ ಮುಖ್ಯ. ನವಜಾತ ಶಿಶುವಿನಲ್ಲಾಗುವ ಬದಲಾವಣೆಗಳಿಗೆಲ್ಲಾ ನೀವು ನೀಡುವ ಎದೆಹಾಲು ಕೂಡ ಒಂದು ಕಾರಣವಾಗಿರುವದರಿಂದ ನೀವು ಸೇವಿಸುವ ಆಹಾರದ ಮೇಲೂ ನಿಗಾ ವಹಿಸುವುದು ಉತ್ತಮ. ಆದ್ದರಿಂದ ಸ್ತನ್ಯಪಾನ ಮಾಡುವಾಗ ಏನು ತಿನ್ನಬಾರದು ಎಂಬ ಪಟ್ಟಿಯನ್ನು ಇಲ್ಲಿ ನೀಡಿದ್ದೇವೆ.

ಎದೆಹಾಲು ಉಣಿಸುವ ತಾಯಿ ದೂರವಿಡಬೇಕಾದ ಆಹಾರಗಳನ್ನು ಈ ಕೆಳಗೆ ನೀಡಲಾಗಿದೆ:

ಕೋಸು:
ಹಿಂದಿನ ದಿನ ರಾತ್ರಿ ಊಟದಲ್ಲಿ ನೀವು ಕೋಸುಗಡ್ಡೆ ತಿಂದಿದ್ದರೆ, ಮರುದಿನ ನಿಮ್ಮ ಮಗುವಿಗೆ ಗ್ಯಾಸ್ ಸಮಸ್ಯೆಗಳಾಗುವುದು ಕಂಡುಬರುವುದು. ಇತರ ಗ್ಯಾಸ್ಸಿ ಆಹಾರಗಳಾದ ಈರುಳ್ಳಿ, ಎಲೆಕೋಸು, ಬ್ರೊಕೊಲಿ, ಹೂಕೋಸು ಮತ್ತು ಸೌತೆಕಾಯಿ ಮೊದಲಾದವುಗಳನ್ನು ಸ್ತನ್ಯಪಾನ ಮಾಡುವಾಗ ತಪ್ಪಿಸಬಹುದು.

ಪುದೀನಾ:
ಇದನ್ನು ಅತಿ ಹೆಚ್ಚು ಪ್ರಮಾಣದಲ್ಲಿ ತೆಗೆದುಕೊಂಡಾಗ ಅದು ಎದೆ ಹಾಲಿನ ಉತ್ಪಾದನೆಯನ್ನು ಕಡಿಮೆ ಮಾಡಬಹುದು. ತಾಯಂದಿರು ಹಾಲು ಉತ್ಪಾದನೆಯನ್ನು ನಿಲ್ಲಿಸಲು, ಹೆಚ್ಚಾಗಿ ಪುದೀನಾ ತಯಾರಿಸಿದ ಚಹಾವನ್ನು ಕುಡಿಯುತ್ತಾರೆ. ಆದರೆ ಎದೆಹಾಲು ಅವಶ್ಯವಿರುವ ಸಮಯದಲ್ಲಿ ಇದನ್ನು ಸೇವಿಸುವುದರಿಂದ ಎದೆಹಾಲು ಕಡಿಮೆಯಾಗಲು ಕಾರಣವಾಗಬಹುದು.

ಕಡಲೆಕಾಯಿ:
ನಿಮ್ಮ ಮಗುವಿಗೆ ಹಾಲುಣಿಸುವವರೆಗೆ, ಕಡಲೆಕಾಯಿಯನ್ನು ತಪ್ಪಿಸಿ, ವಿಶೇಷವಾಗಿ ನಿಮ್ಮ ಕುಟುಂಬವು ಕಡಲೆಕಾಯಿಗೆ ಅಲರ್ಜಿಯ ವೈದ್ಯಕೀಯ ಇತಿಹಾಸವನ್ನು ಹೊಂದಿದ್ದರೆ. ಕಡಲೆಕಾಯಿಯ ಅಲರ್ಜಿಯ ಪ್ರೋಟೀನ್ಗಳು ಎದೆ ಹಾಲಿನ ಮೂಲಕ ಮಗುವನ್ನು ತಲುಪಬಹುದು. ಇದರಿಂದ ಮಗು ಉಬ್ಬಸ ಅಥವಾ ದದ್ದುಗಳಿಂದ ಬಳಲಬಹುದು.

ಬೆಳ್ಳುಳ್ಳಿ:
ಬೆಳ್ಳುಳ್ಳಿಯ ವಾಸನೆಯು ಎದೆ ಹಾಲಿನ ವಾಸನೆಯ ಮೇಲೆ ಪರಿಣಾಮ ಬೀರುತ್ತದೆ. ಕೆಲವು ಮಕ್ಕಳು ಅದನ್ನು ದ್ವೇಷಿಸುತ್ತಾರೆ ಮತ್ತು ಕೆಲವರು ಅದನ್ನು ಇಷ್ಟಪಡುತ್ತಾರೆ. ಆದ್ದರಿಂದ, ಮಗುವಿನ ಆರೈಕೆ ಮಾಡುವಾಗ ನಿಮ್ಮ ಮಗುವಿಗೆ ಅನಾನುಕೂಲವಾಗಿದ್ದರೆ ಅದನ್ನು ಸೇವಿಸಬೇಡಿ.

ಆಲ್ಕೋಹಾಲ್
ಎದೆ ಹಾಲಿನ ಮೂಲಕ, ಆಲ್ಕೋಹಾಲ್ ತಾಯಿಯಿಂದ ಮಗುವನ್ನು ಸೇರುವುದು. ಇದು ನರಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಕನಿಷ್ಠ ಎರಡು ವರ್ಷಗಳಾದರೂ ನೀವು ಆಲ್ಕೊಹಾಲ್ ಅನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು. ಸೇವಿಸಿದ ಹಾಲಿನಲ್ಲಿ ಅಲ್ಕೋಹಾಲ್ ಸಾಂದ್ರತೆಯನ್ನು ಕಡಿಮೆ ಮಾಡಲು ತಾಯಿ ಆಲ್ಕೊಹಾಲ್ ಸೇವನೆಯ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಸಮಯದ ನಂತರ ಮಗುವಿಗೆ ಹಾಲುಣಿಸಬಹುದು.

ಜೋಳ:
ಕೆಲವು ಮಕ್ಕಳು ಜೋಳದ ಅಲರ್ಜಿ ಹೊಂದಿರುವುದು ಸಾಮಾನ್ಯವಾಗಿದೆ. ಇದು ಶಿಶುಗಳಲ್ಲಿ ದದ್ದುಗಳು ಮತ್ತು ಅಸ್ವಸ್ಥತೆಯನ್ನು ಉಂಟುಮಾಡಬಹುದು. ನಿಮ್ಮ ಮಗುವಿನಲ್ಲಿ ಅಲರ್ಜಿಯ ಪ್ರತಿಕ್ರಿಯೆಗಳನ್ನು ಗಮನಿಸಿದರೆ ನಿಮ್ಮ ಆಹಾರದಿಂದ ಜೋಳವನ್ನು ತೆಗೆದುಹಾಕಿ.

ಚಾಕೊಲೇಟ್:
ಚಾಕೊಲೇಟ್ ನಲ್ಲಿ ಥಿಯೋಬ್ರೊಮೈನ್ ಸಮೃದ್ಧವಾಗಿದ್ದು, ಇದನ್ನು ಸೇವಿಸಿದಾಗ, ಕೆಫೀನ್ ನಂತೆಯೇ ಪರಿಣಾಮ ಬೀರುತ್ತದೆ. ನೀವು ಚಾಕೊಲೇಟ್ ತಿನ್ನುವುದು ಎದೆಹಾಲು ಉಣಿಸುವಾಗ ಅದರ ಪ್ರಮಾಣವನ್ನು ಕಡಿಮೆ ಮಾಡಬೇಕು. ಚಾಕೊಲೇಟ್ ಸೇವನೆಯಿಂದಾಗಿ ನಿಮ್ಮ ಮಗು ತುಂಬಾ ನಿದ್ದೆಯಿಲ್ಲದೇ ಒದ್ದಾಡುತ್ತಿದೆ ಎಂದು ನಿಮಗೆ ಅನಿಸಿದರೆ, ಅದರಿಂದ ದೂರವಿರುವುದು ಉತ್ತಮ. ನಿಮ್ಮ ಮಗುವಿನ ನಡವಳಿಕೆಯನ್ನು ಗಮನಿಸಿದ ನಂತರ ನೀವು ಎಷ್ಟು ಚಾಕೊಲೇಟ್ ತಿನ್ನಬಹುದು ಎಂದು ತಿಳಿಯಬಹುದು.

ಕಾಫಿ:
ಕಾಫಿಯಲ್ಲಿ ಸಾಕಷ್ಟು ಕೆಫೀನ್ ಇದ್ದು, ಎದೆಹಾಲಿನ ಮೂಲಕ ನಿಮ್ಮ ಮಗುವನ್ನು ಸೇರಬಹುದು. ಆದರೆ ಶಿಶುವಿಗೆ ಕೆಫೀನ್ ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಅವರು ನಿದ್ರಾಹೀನತೆ, ಕಿರಿಕಿರಿ ಮತ್ತು ಅಳಲು ಕಾರಣವಾಗುತ್ತದೆ. ಕೆಫೀನ್ ಹೆಚ್ಚಿನ ಪ್ರಮಾಣದಲ್ಲಿರುವಾಗ, ಇದು ಹಾಲಿನಲ್ಲಿ ಕಬ್ಬಿಣದ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಇದರಿಂದ ಮಗುವಿನಲ್ಲಿ ಹಿಮೋಗ್ಲೋಬಿನ್ ಮಟ್ಟ ಕಡಿಮೆಯಾಗುತ್ತದೆ. ಆದ್ದರಿಂದ ಉತ್ತಮ ಪರಿಹಾರವೆಂದರೆ ದಿನಕ್ಕೆ ಕೇವಲ 2-3 ಕಪ್ ಕಾಫಿ ಮಾತ್ರ ಸೇವಿಸಿ.

ಸಿಟ್ರಸ್ ಹಣ್ಣುಗಳು:
ಸಿಟ್ರಸ್ ಹಣ್ಣುಗಳು ವಿಟಮಿನ್ ಸಿ ಯಉತ್ತಮ ಮೂಲವಾಗಿದದೆ, ಆದರೆ ಇದರ ಆಮ್ಲೀಯ ಅಂಶಗಳಿಂದಾಗಿ ಮಗುವಿನ ಹೊಟ್ಟೆಯ ಮೇಲೆ ಪರಿಣಾಮ ಬೀರುವುದು. ಅವರ ಜಠರಗರುಳು ಇನ್ನು ಅಭಿವೃದ್ಧಿ ಹೊಂದುತ್ತಿರುವುದರಿಂದ, ಈ ಆಮ್ಲ ಘಟಕಗಳನ್ನು ಎದುರಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಹಾಗಂತ ಸಿಟ್ರಸ್ ಹಣ್ಣುಗಳನ್ನು ನಿಮ್ಮ ಆಹಾರದಿಂದ ಸಂಪೂರ್ಣವಾಗಿ ತೆಗೆದುಹಾಕಬೇಕಾಗಿಲ್ಲ. ಪ್ರತಿದಿನ ಒಂದು ಕಪ್ ದ್ರಾಕ್ಷಿ ಅಥವಾ ಕಿತ್ತಳೆಯನ್ನು ತಿನ್ನುವುದು ಉತ್ತಮ.

Exit mobile version