22ರಲ್ಲಿ ಕಳ್ಳತನ 80ರಲ್ಲಿ ಜೈಲು: 58 ವರ್ಷಗಳ ಬಳಿಕ ಬೀದರ್‌ನಲ್ಲಿ ಎಮ್ಮೆ ಕಳ್ಳನ ಬಂಧನ

ಎಮ್ಮೆ ಕಳ್ಳತನ ಮಾಡಿದ ಆರೋಪಿಯನ್ನು 58 ವರ್ಷಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ. ಹೌದು, 1965ರಲ್ಲಿ ನಡೆದ ಎಮ್ಮೆ ಕಳ್ಳತನ (Buffalo theft case) ಪ್ರಕರಣದ ಆರೋಪಿಯನ್ನು 2023ರಲ್ಲಿ

ಬಂಧಿಸಲಾಗಿದೆ. ಆರೋಪಿಯನ್ನು ಬಂಧಿಸಲು ಇಷ್ಟು ವರ್ಷ ಬೇಕಾ ಎಂಬ ಪ್ರಶ್ನೆಯ ಜೊತೆಯಲ್ಲೇ ಕಾನೂನಿನ ಕೈಗಳಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದನ್ನೂ ಸಾಬೀತುಪಡಿಸಿದಂತಾಗಿದೆ.

ಈತ 58 ವರ್ಷಗಳಿಂದ ಪೊಲೀಸರ ಕೈಗೂ ಸಿಗದೇ, ನ್ಯಾಯಾಲಯಕ್ಕೂ ಹಾಜರಾಗದೇ ತಲೆಮರೆಸಿಕೊಂಡಿದ್ದ ಈ ಆರೋಪಿಯ ಹೆಸರು ಲಾಂಗ್ ಪೆಂಡಿಂಗ್ ರಿಪೋರ್ಟ್‌ಗೆ (Long Pending Report)

ಸೇರಿಸಲಾಗಿತ್ತು. ಪ್ರಕರಣ ದಾಖಲಾಗಿ ಜಾಮೀನು ದೊರೆತ ಬಳಿಕ ಆರೋಪಿಯು ಕೋರ್ಟ್‌ಗೆ (Court) ಹಾಜರಾಗದೇ ತಲೆ ಮರೆಸಿಕೊಂಡಿದ್ದು, ಸಮನ್ಸ್ ನೋಟಿಸ್, ವಾರೆಂಟ್ ನೀಡಿದ್ದರೂ ಕ್ಯಾರೆ

ಎಂದಿರಲಿಲ್ಲ. ಹಾಗಾಗಿ, ಈ ಪ್ರಕರಣವನ್ನು ಮಹೆಕರ್ (Buffalo theft case) ಠಾಣೆಯ ಪೊಲೀಸರು ನಿಶ್ಚಲ ಕಡತಕ್ಕೆ ಸೇರಿಸಿದ್ದರು.

ಬೀದ‌ರ್‌ (Bidar) ಎಸ್‌ಪಿ ಚನ್ನಬಸವಣ್ಣ ಎಸ್‌ಎಲ್ ಅವರು ಇಂತಹ ಎಲ್‌ಪಿಆರ್ ಪ್ರಕರಣಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿದ್ದು, ಸಮನ್ಸ್, ವಾರಂಟ್ (Warrent) ಜಾರಿ ಮಾಡಿದ್ದರೂ

ಬಾರದೇ ತಲೆ ಮರೆಸಿಕೊಂಡಿದ್ದರು. ಈ ಪೈಕಿ ಮೊದಲ ಆರೋಪಿ ಕಿಶನ್ ಚಂದರ್ 2006 ಏಪ್ರಿಲ್ 11ರಂದು ಮೃತಪಟ್ಟಿದ್ದರಿಂದ ಆತನ ವಿರುದ್ಧದ ಪ್ರಕರಣ ರದ್ದಾಯಿತು. ಮೆಹಕರ್‌ ಪೊಲೀಸ್‌ ಠಾಣೆಯ

ಪಿಎಸ್‌ಐ ಶಿವಕುಮಾರ (PSI Shivakumar), ಚಂದ್ರಶೇಖರ, ಎಎಸ್‌ಐ ಅಂಬಾದಾಸ ಅವರ ತಂಡವು ತನಿಖೆ ನಡೆಸಿ ಆರೋಪಿಯನ್ನು ಮಹಾರಾಷ್ಟ್ರದ ಲಾತೂರಿನ ಟಾಕಳಗಾಂವ್‌ನಲ್ಲಿ ಬಂಧಿಸಿದ್ದಾರೆ.

ಪ್ರಕರಣ:
ಮೆಹಕರ್‌ನಲ್ಲಿ 1965ರ ಏಪ್ರಿಲ್ (April) 25ರಂದು 2 ಎಮ್ಮೆ 1 ಕರು ಕಳ್ಳತನವಾದ ಕುರಿತು ಮುರಳೀಧರರಾವ್ ಮಾಣಿಕರಾವ್ ಕುಲಕರ್ಣಿ ಎನ್ನುವವರು ಮೆಹಕರ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು

. ಮಹಾರಾಷ್ಟ್ರದ (Maharashtra) ಉದಗೀರ್ ಮೂಲದ ಕಿಶನ್ ಚಂದರ್ (30) ಹಾಗೂ ಗಣಪತಿ ವಿಠಲ ವಾಗೋರೆ (20) ಎನ್ನುವವರು ಕಳ್ಳತನ ಮಾಡಿದ್ದರು. ಇವರನ್ನು 1965ರಲ್ಲೇ ಬಂಧಿಸಲಾಗಿತ್ತು.

ಆದರೆ, ಜಾಮೀನು ಪಡೆದ ಬಳಿಕ ಈ ಆರೋಪಿಗಳು ಕೋರ್ಟ್‌ಗೆ ಬಾರದೇ ತಲೆ ಮರೆಸಿಕೊಂದು ಓಡಾಡುತ್ತಿದ್ದರು.

ಆರೋಪಿಗೆ 8೦ ವರ್ಷ ವಯಸ್ಸು
ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಆರೋಪಿ ಗಣಪತಿ ವಿಠಲ್ ವಾಗೋರೆ ಕಳ್ಳತನ ಮಾಡುವಾಗ 22 ವರ್ಷ ವಯಸ್ಸಾಗಿದ್ದು, ಈಗ ಈ ಆರೋಪಿಗೆ

80 ವರ್ಷ ವಯಸ್ಸಾಗಿದೆ ಎಂದು ತಿಳಿಸಲಾಗಿದೆ.

ಸುಮಾರು ವರ್ಷಗಳಿಂದ ಬಾಕಿ ಇರುವ ಪ್ರಕರಣಗಳು ಹಾಗೂ ಆರೋಪಿಗಳು ಕೋರ್ಟ್‌ಗೆ ಹಾಜರಾಗದೇ ಇರುವವರಿಗೆ ಎಲ್ ಪಿಆರ್ (LPR) ಪ್ರಕರಣಗಳ ಪತ್ತೆಗೆಂದೆ ವಿಶೇಷ ತಂಡ ರಚಿಸಲಾಗಿದ್ದು,

ಈ ತಂಡವು ಇದೀಗ 58 ವರ್ಷಗಳ ಬಳಿಕ ಆರೋಪಿಯನ್ನು ಪತ್ತೆ ಮಾಡಿರುವುದು ಸೇರಿ ಇಂತಹ ಒಟ್ಟು 7 ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಈ ಬಗ್ಗೆ ಪ್ರತಿಕ್ರಿಯಿಸಿರುವ

ಬೀದರ್‌ ಎಸ್‌ಪಿ ಎಸ್‌ಎಲ್‌ ಚನ್ನಬಸವಣ್ಣ (S L Channabasavanna) ಅವರು ಹೇಳಿದ್ದಾರೆ.

ಇದನ್ನು ಓದಿ: ರಾಹುಲ್ ಗಾಂಧಿ ಒಬ್ಬ ಅಜ್ಞಾನಿ : ನಟ ಚೇತನ್ ವಾಗ್ದಾಳಿ

Exit mobile version