ಮಹಿಳೆಯರಿಗೆ ಕಂಟಕವಾಗಿರುವ ಬುಲ್ಲಿ ಆ್ಯಪ್‌

ಬೆಂಗಳೂರು ಜ 5 : ಕಳೆದ ಕೆಲವು ದಿನಗಳಿಂದ ಬುಲ್ಲಿ ಬಾಯಿ ಆ್ಯಪ್‌ ಸಾಕಷ್ಟು ವಿವಾದಗಳಿಗೆ ಕಾರಣವಾಗಿದೆ. ಮುಖ್ಯಮಾಗಿ ಮುಸ್ಲಿಂ ಮಹಿಳೆಯರನ್ನು ಟಾರ್ಗೆಟ್‌ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.  ಈ ಅಪ್ಲಿಕೇಶನ್ ಅನ್ನು GitHub ನಿಂದ ಡೌನ್‌ಲೋಡ್ ಮಾಡಲಾಗಿದೆ. ಗಿಟ್‌ಹಬ್ ಸಾಫ್ಟ್‌ವೇರ್ ಕೋಡಿಂಗ್ ಪ್ರೊವೈಡರ್ ಪ್ಲಾಟ್‌ಫಾರ್ಮ್ ಆಗಿದ್ದು, ಅಂತಹ ಓಪನ್ ಸೋರ್ಸ್ ಸಮುದಾಯ ಅಪ್ಲಿಕೇಶನ್‌ಗಳು ಕಂಡುಬರುತ್ತವೆ. 

ಬುಲ್ಲಿ  ಬಾಯಿ  ಅಪ್ಲಿಕೇಶನ್ (Bulli Bai App)ನಲ್ಲಿ ಟ್ವಿಟರ್‌ನ ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಂದ (Social Media Platforms)  ಕದ್ದ ಅನೇಕ ಮಹಿಳೆಯರ ಫೋಟೋಗಳನ್ನು  ಹಾಕಲಾಗಿದೆ. ಈ ಅಪ್ಲಿಕೇಶನ್‌ನಲ್ಲಿ  (Application)  ಮಹಿಳೆಯರ ಆನ್‌ಲೈನ್ ಬಿಡ್ಡಿಂಗ್ ಮಾಡಲಾಗುತ್ತದೆ. 

ಅದೇ ಸಾಲಿನಲ್ಲಿ, 6 ತಿಂಗಳ ಹಿಂದೆ GitHub ನಲ್ಲಿ ಸುಲ್ಲಿ ಡೀಲ್ಸ್  (Sully Deals) ಎಂಬ ಇದೇ ರೀತಿಯ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಾಗಿತ್ತು. ಆನ್‌ಲೈನ್ ಹರಾಜಿನ ಮೂಲಕ ಈ ಅಪ್ಲಿಕೇಶನ್‌ಗೆ ಹೋಲುವ ಅನೇಕ ಮಹಿಳೆಯರ ಚಿತ್ರಗಳು ಮತ್ತು ಪ್ರೊಫೈಲ್‌ಗಳನ್ನು ಪೋಸ್ಟ್ ಮಾಡಲಾಗಿತ್ತು. ಆಗಲೂ ಸಾಮಾಜಿಕ ಮಾಧ್ಯಮದಿಂದಲೇ ಈ ಅಪ್ಲಿಕೇಷನ್‌ನಲ್ಲಿ ಮಹಿಳೆಯರ ಪ್ರೊಫೈಲ್‌ಗಳು ಮತ್ತು ಚಿತ್ರಗಳನ್ನು ಅಪ್‌ಲೋಡ್ ಮಾಡಲಾಗಿತ್ತು. ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ನಿರ್ದಿಷ್ಟ ಕ್ರಮ ಕೈಗೊಂಡಿರಲಿಲ್ಲ.

 ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 21 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಇದಲ್ಲದೆ, 21 ವರ್ಷದ ಎಂಜಿನಿಯರ್ ಮತ್ತು ಉತ್ತರಾಖಂಡದ ಮಹಿಳೆಯನ್ನು ಸಹ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಆರೋಪಿ ವಿಶಾಲ್ ನನ್ನು ಜನವರಿ 10 ರವರೆಗೆ ಪೊಲೀಸ್ ಕಸ್ಟಡಿಗೆ (Police Custody) ಕಳುಹಿಸಲಾಗಿದೆ. ಇದಲ್ಲದೆ ಇದರ ಜಾಲ ಪತ್ತೆ ಹಚ್ಚಲು ಪೊಲೀಸರು ಹಲವೆಡೆ ದಾಳಿ ನಡೆಸಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ

Exit mobile version