ನಾನು ಕ್ರಿಕೆಟ್ ನೋಡದಿರುವ ಕಾರಣ ಅವರು ರಿಷಬ್ ಪಂತ್ ಎಂದು ನನಗೆ ತಿಳಿಯಲಿಲ್ಲ: ಬಸ್‌ ಚಾಲಕ ಸುಶೀಲ್‌ ಮಾನ್‌

New delhi : ರಸ್ತೆ ಅಪಘಾತದಲ್ಲಿ ಕ್ರಿಕೆಟಿಗ ರಿಷಬ್‌ ಪಂತ್‌(Rishabh Pant) ಅವರನ್ನು ಸಾವಿನ ದವಡೆಯಿಂದ ಪಾರು ಮಾಡಿದ ಬಸ್‌ ಚಾಲಕ ನೀಡಿರುವ ಹೇಳಿಕೆ ಇದೀಗ ಹಲವರ ಅಶ್ಚರ್ಯಕ್ಕೆ ಕಾರಣವಾಗಿದೆ. ನಾನು ಕ್ರಿಕೆಟ್‌(Cricket) ನೋಡುವುದಿಲ್ಲ ಹೀಗಾಗಿ ರಿಷಬ್‌ ಪಂತ್‌ ಯಾರು ಎಂಬುದು ನನಗೆ ಕಡೆಯವರೆಗೂ ತಿಳಿಯಲಿಲ್ಲ ಎಂದು ಬಸ್‌ ಚಾಲಕ ಸುಶೀಲ್‌ ಮಾನ್‌ಹೇಳಿದ್ದಾರೆ.

ರಿಷಬ್‌ ಪಂತ್‌ ಅವರು ದೆಹಲಿ(Delhi)-ಡೆಹ್ರಾಡೂನ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವಾಗ ವಿಭಜಕಕ್ಕೆ ಡಿಕ್ಕಿ ಹೊಡೆದು ಮರ್ಸಿಡಿಸ್ ಎಸ್‌ಯುವಿ ದಿಢೀರ್‌ ಬೆಂಕಿಗೆ ಆಹುತಿಯಾಯಿತು. ಈ ವೇಳೆ ಕ್ರಿಕೆಟಿಗ ರಿಷಬ್ ಪಂತ್ ಅವರನ್ನು ಹೊರಕ್ಕೆ ಕರೆದೊಯ್ದ ಹರಿಯಾಣ ರೋಡ್‌ವೇಸ್ ಬಸ್ ಚಾಲಕ, ಗಾಯಗೊಂಡ ವ್ಯಕ್ತಿ ಯಾರೆಂದು ತಿಳಿದಿಲ್ಲ ಮತ್ತು ಆಂಬ್ಯುಲೆನ್ಸ್‌ಗೆ ವ್ಯವಸ್ಥೆ ಮಾಡಲು ನಿರಂತರವಾಗಿ ಕೆಲಸ ಮಾಡಿದೆ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಹೆಚ್ಚು ಮಾಹಿತಿ ನೀಡಿದ ಬಸ್‌ ಚಾಲಕ, ಎಸ್‌ಯುವಿ(SUV) ವಿರುದ್ಧ ದಿಕ್ಕಿನಿಂದ ಅತಿವೇಗದಲ್ಲಿ ಬರುತ್ತಿದ್ದು, ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ನಾನು ನನ್ನ ಬಸ್ ಅನ್ನು ಬದಿಯಲ್ಲಿ ನಿಲ್ಲಿಸಿ, ತಕ್ಷಣವೇ ಡಿವೈಡರ್ ಕಡೆಗೆ ಓಡಿದೆ. ಕಾರು ನಿಲ್ಲುವ ಮೊದಲು ಬಸ್ಸು ತಿರುಗುತ್ತಿದ್ದರಿಂದ ಅದರ ಕೆಳಗೆ ಪಲ್ಟಿಯಾಗುತ್ತದೆ ಎಂದು ನಾನು ಭಾವಿಸಿದೆ.

ಇದನ್ನೂ ಓದಿ : https://vijayatimes.com/kumaraswamy-tweeted-amit-shah/

ಅಷ್ಟರಲ್ಲಿ ನಾನು ನೋಡಿದಾಗ ರಿಷಬ್ ಪಂತ್ ಅವರು ತಮ್ಮ ಕಾರಿನ ಕಿಟಕಿಯಿಂದ ಅರ್ಧದಷ್ಟು ಹೊರಗಿದ್ದರು. ರಿಷಭ್‌ ಅವರನ್ನು ಕೂಡಲೇ ಕಾರಿನಿಂದ ಹೊರತೆಗೆದ ಬಳಿಕ ಬೇರೆ ಯಾರಾದರೂ ಇದ್ದಾರೆಯೇ ಎಂದು ಪರಿಶೀಲಿಸಲು ನಾನು ಕಾರಿನೊಳಗೆ ಹುಡುಕಿದೆ. ಆದ್ರೆ, ಅಲ್ಲಿ ಬೇರೆ ಯಾರು ಇರಲಿಲ್ಲ.

ನಾನು ಅವರ ನೀಲಿ ಬ್ಯಾಗ್ ಮತ್ತು ಕಾರಿನಲ್ಲಿದ್ದ 7,000-8,000 ರೂಪಾಯಿಗಳನ್ನು ತೆಗೆದುಕೊಂಡು ಆಂಬ್ಯುಲೆನ್ಸ್‌ನಲ್ಲಿದ್ದ(Ambulance) ಅವರಿಗೆ ನೀಡಿದೆ. ನಾನು ಕ್ರಿಕೆಟ್ ನೋಡುವುದಿಲ್ಲ ಹಾಗಾಗಿ ಅವರು ರಿಷಬ್ ಪಂತ್ ಎಂಬುದು ಆ ಸಮಯಕ್ಕೆ ನನಗೆ ತಿಳಿಯಲಿಲ್ಲ. ಆದರೆ ನನ್ನ ಬಸ್‌ನಲ್ಲಿದ್ದ ಇತರರು ಅವರನ್ನು ಗುರುತಿಸಿ, ನನಗೆ ತಿಳಿಸಿದರು ಎಂದು ಹೇಳಿದ್ದಾರೆ.

Exit mobile version