ದಾಖಲೆಯ ಏರಿಕೆ ಕಂಡ ಷೇರು ಮಾರುಕಟ್ಟೆ, 60000 ದಾಟಿದ ಮುಂಬೈ ಷೇರುಪೇಟೆ ಸೂಚ್ಯಂಕ

sharemarket

 ನವದೆಹಲಿ ಸೆ 24 : ಮುಂಬೈ ಷೇರುಪೇಟೆ ಸೂಚ್ಯಂಕ ಕಳೆದ 8 ತಿಂಗಳ ಬಳಿಕ ಮೊದಲ ಬಾರಿಗೆ 60 ಸಾವಿರದ ಗಡಿ ದಾಟಿದೆ. ಕಳೆದ ಜನವರಿ 21ರಂದು ಸೆನ್ಸೆಕ್ಸ್ 50 ಸಾವಿರ ಗಡಿಯನ್ನು ದಾಟಿತ್ತು.ಇಂದು 10 ಸಾವಿರ ಅಂಕಗಳಷ್ಟು ಏರಿಕೆ ಕಂಡು ಸಾರ್ವಕಾಲಿಕ ದಾಖಲೆ ನಿರ್ಮಿಸಿತು. ಭಾರತದ ಬೆಂಚ್‌ಮಾರ್ಕ್ ಇಕ್ವಿಟಿ ಸೂಚ್ಯಂಕ ಎಸ್ & ಪಿ ಬಿಎಸ್‌ಇ ಸೆನ್ಸೆಕ್ಸ್ ಶುಕ್ರವಾರದ ಮುಂಜಾನೆ ಟ್ರೇಡ್ ಸೆಷನ್‌ನಲ್ಲಿ 60,000 ಅಂಕಗಳ ಮೈಲಿಗಲ್ಲನ್ನು ದಾಟಿದೆ. ನಿಫ್ಟಿ ಕೂಡ 17,927.20 ಪಾಯಿಂಟ್‌ಗಳ ದಾಖಲೆಯನ್ನು ಮುಟ್ಟಿದೆ.

ಕಳೆದ ಜನವರಿ 21ರಂದು ಸೆನ್ಸೆಕ್ಸ್ 50 ಸಾವಿರ ಗಡಿ ದಾಟಿದ ನಂತರ ಫೆಬ್ರವರಿ 5ರಂದು ಅಂತರಾಷ್ಟ್ರೀಯ ದಿನದ ವಹಿವಾಟಿನಲ್ಲಿ 51,000 ಅಂಕಗಳನ್ನು ಮುಟ್ಟುವ ಮೂಲಕ ಸೆಪ್ಟೆಂಬರ್ 16 ರಂದು 59,000 ಮಟ್ಟವನ್ನು ತಲುಪುವ ಮೂಲಕ ದಾಖಲೆ ನಿರ್ಮಿಸಿತ್ತು. ಮುಂದಿನ ಒಂದೆರಡು ವರ್ಷಗಳಲ್ಲಿ ಘನ ಆರ್ಥಿಕ ಚೇತರಿಕೆ ಮತ್ತು ನಿರಂತರ ಬೆಳವಣಿಗೆಯ ನಿರೀಕ್ಷೆಗಳು ಹೂಡಿಕೆಗಳನ್ನು ಉತ್ಸುಕರನ್ನಾಗಿ ಮಾಡಲಿದೆ ಎಂದು ಐಐಎಫ್ಎಲ್ ಸೆಕ್ಯುರಿಟೀಸ್ ನ ರಿಟೇಲ್ ಸಿಇಒ ಸಂದೀಪ್ ಭಾರದ್ವಾಜ್ ಹೇಳಿದ್ದಾರೆ.

ಬಿಎಸ್‌ಇ-ಸೆನ್ಸೆಕ್ಸ್ ಸೂಚ್ಯಂಕವು ಕೇವಲ 161 ಟ್ರೇಡಿಂಗ್ ಸೆಷನ್‌ಗಳನ್ನು ತೆಗೆದುಕೊಂಡು 50,000 ಪಾಯಿಂಟ್‌ಗಳಿಂದ 60,000 ಪಾಯಿಂಟ್‌ಗಳಿಗೆ ಏರಿದೆ, ಇದು ಸೂಚ್ಯಂಕದಲ್ಲಿ ಇದುವರೆಗಿನ ಅತ್ಯಧಿಕ ವೇಗದ 10,000 ಪಾಯಿಂಟ್‌ಗಳಾಗಿದೆ. ಈ ಮೊದಲು, ಸೂಚ್ಯಂಕವು 10,000 ಅಂಕಗಳ ಚಲನೆಗೆ ಸರಾಸರಿ 931 ಸೆಷನ್‌ಗಳನ್ನು ತೆಗೆದುಕೊಂಡಿತ್ತು ಎಂದು ವರದಿಗಳು ತಿಳಿಸಿವೆ

ಇಂದು ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾ ಮೌಲ್ಯ

ಏಷ್ಯನ್ ಪೇಂಟ್ಸ್ ಶೇ 3.85
ಮಹೀಂದ್ರಾ ಅಂಡ್ ಮಹೀಂದ್ರಾ ಶೇ 2.77
ಈಷರ್ ಮೋಟಾರ್ಸ್ ಶೇ 2.59
ಎಚ್​ಸಿಎಲ್ ಟೆಕ್ ಶೇ 2.25
ಎಚ್​ಡಿಎಫ್​ಸಿ ಬ್ಯಾಂಕ್ ಶೇ 2.01

Exit mobile version