ರಾಜಧಾನಿಗೆ ಮತ್ತೊಂದು ಶಾಕ್ ; ಪ್ರತಿ ಯೂನಿಟ್‍ಗೆ 5% ಏರಿಕೆ ಮಾಡಲು ಜಲಮಂಡಳಿ ಪ್ರಸ್ತಾಪ !

BWSSB

ದೇಶದಲ್ಲಿ ಬೆಲೆ ಏರಿಕೆಯ ಹೊಸ ಯೋಜನೆಯೊಂದೇ ಪ್ರಾರಂಭವಾಗಿದೆ. ಹೌದು, ಕಳೆದ ಎರಡು ತಿಂಗಳಿನ ಅವಧಿಯಲ್ಲಿ ಗೃಹಬಳಕೆ ಎಲ್‍ಪಿಜಿ(Domestic LPG) ಸೇರಿದಂತೆ ವಾಣಿಜ್ಯ ಎಲ್‍ಪಿಜಿ ಸಿಲಿಂಡರ್(Commercial LPG) ಬೆಲೆ, ವಿದ್ಯುತ್ ಬಿಲ್(Electricity Bill), ಡಿಸೇಲ್-ಪೆಟ್ರೋಲ್(Diesel-Petrol) ಬೆಲೆ ಕ್ರಮೇಣವಾಗಿ ಏರಿಕೆಯಾಗುತ್ತಲೇ ಇದೆ.

ಜನಸಾಮಾನ್ಯರು ಈ ನಿರಂತರ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದು, ದೇಶದ ಅರ್ಥಿಕ ಪರಿಸ್ಥಿತಿ ಕುಗ್ಗಿದ್ಯಾ? ಎಂಬ ಗೊಂದಲಗಳು ಜನರಲ್ಲಿ ಮೂಡುತ್ತಿದೆ. ಸದ್ಯ ಇಂಧನ ಬೆಲೆ, ಗ್ಯಾಸ್ ಬೆಲೆ ಎಲ್ಲದರಲ್ಲೂ ದುಬಾರಿ ಏರಿಕೆ ಮಾಡುತ್ತಿರುವ ಸರ್ಕಾರವೂ ಈಗ ರಾಜ್ಯ(State) ಜಲಮಂಡಳಿ(BWSSB) ನೀರಿನ ಬಿಲ್‍ನಲ್ಲಿ 5% ರಷ್ಟು ಹೆಚ್ಚಿಸಲು ಚಿಂತನೆ ನಡೆಸಿದೆ. ಹೌದು, ಬೆಂಗಳೂರಿನ ಜನತೆಗೆ ಈಗ ಮತ್ತೊಂದು ಶಾಕ್ ಎದುರಾಗಿದೆ.

ನೀರಿನ ಬಿಲ್‍ನ ಪ್ರತಿ ಯೂನಿಟ್‍ಗೆ 5% ಹೆಚ್ಚಳವಾಗಲಿದ್ದು, ಕೈಗಾರಿಕಾ ಪ್ರದೇಶದ ಬಳಕೆಗೆ 8% ಹೆಚ್ಚಳ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ. ಈ ಕುರಿತು ಸಿಎಂ ಬಸವರಾಜ್ ಬೊಮ್ಮಾಯಿ ಅವರೊಡನೆ ಚರ್ಚೆ ನಡೆಸಲಾಗುವುದು, ಸಿಎಂ ಇದಕ್ಕೆ ಅಸ್ತು ಅಂದ್ರೆ ನಾವು ನಾಳೆಯಿಂದಲೇ ಈ ನಿಯಮವನ್ನು ಜಾರಿ ಮಾಡುತ್ತೇವೆ ಎಂದು ಬೆಂಗಳೂರು ಜಲಮಂಡಳಿ ತಿಳಿಸಿದೆ.

Exit mobile version