Visit Channel

ಗ್ರೀನ್ ಟೀ ಕುಡಿಯುವುದರಿಂದ ಸೌಂದರ್ಯಕ್ಕೂ ಪ್ಲಸ್ ಪಾಯಿಂಟ್!

Does-Green-Tea-Reduce-the-Risk-of-Cancer_

ಉತ್ತಮ ಉತ್ಕರ್ಷಣ ನಿರೋಧಕ ಅಂಶದಿಂದಾಗಿ ಗ್ರೀನ್ ಟೀ ಕುಡಿಯುವುದು ಬೇರೆ ಯಾವುದೇ ಪಾನೀಯಗಳಿಗಿಂತ ಉತ್ತಮವೆಂದು ಹೇಳಲಾಗುತ್ತದೆ. ಆರೋಗ್ಯ ದೃಷ್ಟಿಯಿಂದ ಬಹಳ ಒಳ್ಳೆಯದು ಎಂದು ಹೇಳುವ ಗ್ರೀನ್ ಟೀಯಿಂದ ನಿಮ್ಮ ಸೌಂದರ್ಯಕ್ಕೂ ಸಹಾಯವಾಗುವುದು ಎಂಬುದು ನಿಮಗೆ ತಿಳಿದಿದೆಯೇ? ಹೌದು, ಇದರಲ್ಲಿರುವ ನೈಸರ್ಗಿಕ ಉತ್ಕರ್ಷಣ ನಿರೋಧಕಗಳು ವಯಸ್ಸಾಗುವಿಕೆಯ ಲಕ್ಷಣಗಳನ್ನು ದೂರಮಾಡುವುದು. ಹಾಗಾದರೆ ಬನ್ನಿ ಈ ಗ್ರೀನ್ ಟೀ ಯಿಂದ ಸಿಗುವ ಇತರ ಸೌಂದರ್ಯ ಪ್ರಯೋಜನಗಳನ್ನು ನೋಡೋಣ.

ಗ್ರೀನ್ ಟೀಯ ಸಾಮಾನ್ಯ ಪ್ರಯೋಜನಗಳು ಹೀಗಿವೆ:
ಪ್ರತಿದಿನ ಗ್ರೀನ್ ಟೀ ಕುಡಿಯುವುದು ಉತ್ತಮ ಆಯ್ಕೆಯಾಗಿದೆ, ಏಕೆಂದರೆ ಇದು ಉತ್ತಮ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಉದಾಹರಣೆಗೆ, ನಿಯಮಿತವಾಗಿ ಇದನ್ನು ಕುಡಿಯುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯವಾಗುತ್ತದೆ. ಜೊತೆಗೆ ದೇಹದಿಂದ ಹೆಚ್ಚಿನ ಪ್ರಮಾಣದ ನೀರನ್ನು ತೆಗೆದುಹಾಕುತ್ತದೆ. ಈ ಚಹಾದಲ್ಲಿ ಟ್ಯಾನಿನ್ ಇರುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಈ ಪಾನೀಯದ ಮತ್ತೊಂದು ಪ್ರಯೋಜನವೆಂದರೆ ಅದರ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳು. ಇದನ್ನು ಕುಡಿಯುವುದರಿಂದ ಹಲ್ಲುಗಳಿಗ ಉತ್ತಮ ಲಾಭವಿದ್ದು ಮತ್ತು ಉಸಿರಾಟವನ್ನು ಸಹ ಉಲ್ಲಾಸಗೊಳಿಸುತ್ತದೆ.

ಗ್ರೀನ್ ಟೀಯ ಸೌಂದರ್ಯ ಪ್ರಯೋಜನಕ್ಕಾಗಿ ಅದನ್ನ ಈ ರೀತಿ ಬಳಸಿ:

ಸ್ಕ್ರಬ್ ಆಗಿ ಬಳಸಲು:
ಗ್ರೀನ್ ಟೀ ಯ ಸ್ಚ್ರಬ್ ನಿಮ್ಮ ಮುಖವನ್ನು ಸ್ವಚ್ಛಗೊಳಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವುದು. ಅದಕ್ಕಾಗಿ ನೀವು ಬಾದಾಮಿ, ಗ್ರೀನ್ ಟೀ ಎಲೆ ಮತ್ತು ಮೊಸರು ಮಿಶ್ರಣ ಮಾಡಿ, ಮುಖ ಮತ್ತು ದೇಹದ ಸ್ಕ್ರಬ್ ಬಳಸಿ.

ಮೊಡವೆ ಚಿಕಿತ್ಸೆಗಾಗಿ:
ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಗಳನ್ನು ಹೊಂದಿದ್ದು, ಮೊಡವೆಗಳನ್ನು ನಿಯಂತ್ರಿಸಲು ಬಳಸಬಹುದು. ಗ್ರೀನ್ ಟೀ ಎಲೆಗಳ ಪುಡಿಯನ್ನು ತಯಾರಿಸಿ, ಸ್ವಲ್ಪ ದಾಲ್ಚಿನ್ನಿ ಪುಡಿ ಮತ್ತು ನಿಂಬೆ ರಸದೊಂದಿಗೆ ಮಿಶ್ರಣ ಮಾಡಿ. ಇದನ್ನು ಮೊಡವೆಗಳ ಮೇಲೆ ನೇರವಾಗಿ ಹಚ್ಚಿ ಮತ್ತು 20 ನಿಮಿಷಗಳ ನಂತರ ಸರಳ ನೀರಿನಿಂದ ತೊಳೆಯಿರಿ.

ಕಣ್ಣುಗಳ ಪಫಿನೆಸ್ ಕಡಿಮೆ ಮಾಡಲು:
ಕಣ್ಣಿನ ಪ್ಯಾಡ್‌ಗಳಾಗಿ ಬಳಸುವ ಟೀ ಬ್ಯಾಗ್‌ಗಳು ಕಣ್ಣುಗಳ ಸುತ್ತಲಿನ ಪಫಿನೆಸ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಜೊತೆಗೆ ಕಣ್ಣಿಗೆ ವಿಶ್ರಾಂತಿಯನ್ನು ನೀಡುವುದು. ಅಷ್ಟೇ ಅಲ್ಲ, ಒತ್ತಡವನ್ನು ಕಡಿಮೆ ಮಾಡಲು ಕೂಡ ನೆರವಾಗುವುದು. ಇದಕ್ಕಾಗಿ ನೀವು ಬಿಸಿನೀರಿನಲ್ಲಿ ಗ್ರೀನ್ ಟೀ ಬ್ಯಾಗ್ ಇರಿಸಿ, ಅವುಗಳನ್ನು ತಣ್ಣಗಾಗಲು ಬಿಡಿ, ನಂತರ ಅವುಗಳನ್ನು ಕಣ್ಣಿನ ಪ್ಯಾಡ್‌ಗಳಾಗಿ ಬಳಸಿ.

ಉಗುರುಗಳು ಹೊಳೆಯಲು:
ಇದು ಹೆಚ್ಚಿನವರಿಗೆ ತಿಳಿದೇ ಇದೆ. ನಿಮ್ಮ ಉಗುರುಗಳನ್ನು ಹೊಳೆಯುವಂತೆ ಮಾಡಲು ಗ್ರೀನ್ ಟೀಯಲ್ಲಿ ಬೆರಳುಗಳನ್ನ ಅದ್ದಿ ಇಡಿ. ಹೀಗೆ ಮಾಡುವುದರಿಂದ ನಿಮ್ಮ ಉಗುರುಗಳು ನಿಧಾನವಾಗಿ ಹೊಳೆಯಲು ಪ್ರಾರಂಭವಾಗುವುದು.

ಕೂದಲಿನ ಚಿಕಿತ್ಸೆಗಾಗಿ:
ಹಸಿರು ಚಹಾವು ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುವುದಲ್ಲದೇ, ಸೋರಿಯಾಸಿಸ್ ಮತ್ತು ತಲೆಹೊಟ್ಟು ಮುಂತಾದ ಪರಿಸ್ಥಿತಿಗಳನ್ನು ಎದುರಿಸುವಲ್ಲಿ ಪರಿಣಾಮಕಾರಿ ಎಂದು ಸಂಶೋಧನೆ ಸೂಚಿಸುತ್ತದೆ. ಅದಕ್ಕಾಗಿ ಪ್ರತಿದಿನ ಗ್ರೀನ್ ಟೀ ಕುಡಿಯುವುದು ಉತ್ತಮ.

Latest News

bsy
ರಾಜಕೀಯ

ಬಿಜೆಪಿಯ ಸಂಸದೀಯ ಮಂಡಳಿಗೆ ಯಡಿಯೂರಪ್ಪ ; ರಾಜಕೀಯವಾಗಿ ಮತ್ತಷ್ಟು ಬಲಗೊಂಡ ಬಿಎಸ್‌ವೈ

ಇನ್ನು ಸಂಸದೀಯ ಮಂಡಳಿಯಲ್ಲಿ ಉತ್ತರಪ್ರದೇಶ(UttarPradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌(Yogi Adityanath) ಅವರಿಗೆ ಸ್ಥಾನ ನೀಡಲಾಗುತ್ತದೆ ಎನ್ನಲಾಗಿತ್ತು. ಆದರೆ ಅವರಿಗೆ ಸ್ಥಾನ ಲಭಿಸಿಲ್ಲ.

bjp
ರಾಜಕೀಯ

ಡಿಕೆಶಿ ಸ್ವಾತಂತ್ರ್ಯದ ನಡಿಗೆಯ ಉದ್ದೇಶ, ಸಿದ್ದರಾಮಯ್ಯ ಕಿರುಕುಳದಿಂದ ಸ್ವಾತಂತ್ರ್ಯ ಪಡೆಯುವುದೋ? : ಬಿಜೆಪಿ

ಸಿದ್ದರಾಮಯ್ಯ(Siddaramaiah) ಕಿರುಕುಳದಿಂದ ಸ್ವಾತಂತ್ರ್ಯ ಪಡೆಯುವುದೋ ಅಥವಾ ಕಾಂಗ್ರೆಸ್(Congress) ಹಿರಿಯ ನಾಯಕರು ಡಿಕೆಶಿ(DKS) ಸುತ್ತ ಹೆಣೆದಿರುವ ಜಾಲದಿಂದ ಸ್ವಾತಂತ್ರ್ಯ ಪಡೆಯುವುದೋ?

Ghee
ಆರೋಗ್ಯ

ತುಪ್ಪದ ಬಗ್ಗೆ ತಪ್ಪು ಕಲ್ಪನೆ ಬೇಡ! ; ತಪ್ಪದೇ ತುಪ್ಪ ಸೇವಿಸಿ, ಈ ಆರು ಪ್ರಯೋಜನಗಳನ್ನು ಪಡೆದುಕೊಳ್ಳಿ

ತುಪ್ಪವು ರೋಗನಿರೋಧಕ ಶಕ್ತಿಯನ್ನು ವೃದ್ದಿಸುತ್ತದೆ, ಮೂಳೆಯ ಆರೋಗ್ಯವನ್ನು ಉತ್ತೇಜಿಸುತ್ತದೆ, ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.

Assam
ದೇಶ-ವಿದೇಶ

500 ರೂ. ಬೆಟ್ಟಿಂಗ್ ಸೋಲಿಗೆ ಸ್ನೇಹಿತನ ಶಿರಚ್ಛೇದ ; 25 ಕಿ.ಮೀ ದೂರದ ಪೊಲೀಸ್ ಠಾಣೆಗೆ ಹೋಗಿ ಶರಣು!

ಆತನ ತಲೆಯನ್ನು ಹಿಡಿದುಕೊಂಡು ರಾತ್ರಿಯ ವೇಳೆ 25 ಕಿ.ಮೀ ದೂರವಿರುವ ಪೊಲೀಸ್ ಠಾಣೆಗೆ(Police Station) ನಡೆದು ಶರಣಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.