ದೇಶದ ಪ್ರತಿಷ್ಠಿತ ಭಾರತೀಯ ಸ್ಟೇಟ್ ಬ್ಯಾಂಕ್ ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆ (State Bank of India Specialist Cadre Officer Job)ಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಈ ಹುದ್ದೆಗಳಿಗೆ ಪರೀಕ್ಷೆ ಹಾಗೂ ಸಂದರ್ಶನ ಮೂಲಕ ಆಯ್ಕೆ ನಡೆಲಾಗುತ್ತದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
![SBI Bank](https://sp-ao.shortpixel.ai/client/to_webp,q_glossy,ret_img,w_960,h_720/https://vijayatimes.com/wp-content/uploads/2024/06/1696345089845.jpg)
ಉದ್ಯೋಗ ಬ್ಯಾಂಕ್: ಭಾರತೀಯ ಸ್ಟೇಟ್ ಬ್ಯಾಂಕ್
ಹುದ್ದೆ ಹೆಸರು: ಟ್ರೇಡ್ ಫೈನಾನ್ಸ್ ಆಫೀಸರ್ (Trade Finance Officer)
ಒಟ್ಟು ಹುದ್ದೆಗಳ ಸಂಖ್ಯೆ: 150
ವೇತನ ಶ್ರೇಣಿ: ರೂ.48,170 – 69810
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆಗೆ ಆರಂಭಿಕ ದಿನಾಂಕ: 08-06-2024
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ: 27-06-2024
ಶುಲ್ಕ ಪಾವತಿಗೆ ಕೊನೆ ದಿನಾಂಕ: 27-06-2024
![Job Vacancy](https://sp-ao.shortpixel.ai/client/to_webp,q_glossy,ret_img,w_612,h_459/https://vijayatimes.com/wp-content/uploads/2024/04/istockphoto-693293382-612x612-1.jpg)
ವಿಶೇಷ ಸೂಚನೆಗಳು :
• ವಿದ್ಯಾರ್ಹತೆ ಅಂಕಗಳು ಮತ್ತು ಕಾರ್ಯಾನುಭವ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.
• ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.
• ಟ್ರೇಡ್ ಫೈನಾನ್ಸ್ / ಇಂಟರ್ನ್ಯಾಷನಲ್ ಬ್ಯಾಂಕಿಂಗ್ (International Banking)ನಲ್ಲಿ ಸರ್ಟಿಫಿಕೇಟ್ ಹೊಂದಿರುವವರಿಗೆ ಮೊದಲ ಆಧ್ಯತೆ.
• ಟ್ರೇಡ್ ಫೈನಾನ್ಸ್ ಅಥವಾ ಕಮರ್ಷಿಯಲ್ ಬ್ಯಾಂಕ್ಗಳಲ್ಲಿ (Commercial Bank) ಉದ್ಯೋಗ ಮಾಡಿದ ಅನುಭವ ಹೊಂದಿರುವವರಿಗೆ ಮೊದಲ ಆಧ್ಯತೆ.
• ಇಂಗ್ಲೀಷ್ ಭಾಷೆಯ ಉತ್ತಮ ಸಂವಹನ, ಪ್ರೆಸೆಂಟೇಷನ್ ಕೌಶಲ್ಯ ಇರಬೇಕು.
• ಅರ್ಜಿ ಸಲ್ಲಿಸಲು SSLC, ಪದವಿ ಅಂಕಪಟ್ಟಿ ಕಾರ್ಯಾನುಭವ ದಾಖಲೆ ಸಲ್ಲಿಸಬೇಕು.
ಎಸ್ಬಿಐ ನೇಮಕಾತಿ ಪೋರ್ಟಲ್: https://recruitment.bank.sbi/crpd-sco-2024-25-06/apply
ನೋಟಿಫಿಕೇಶನ್: https://www.sbi.co.in/documents/77530/0/060624-sco-05.pdf/03121e9e-14e0-b9fa-6665-4fcef91859e4?t=1717673593920