ಲೈಂಗಿಕ ಸುಖಕ್ಕಾಗಿ ವೇಶ್ಯಾಗೃಹಕ್ಕೆ ಹೋಗುವವರು ಅಪರಾಧಿಗಳಲ್ಲ : ಕೋಲ್ಕತ್ತಾ ಹೈಕೋರ್ಟ್!

ಲೈಂಗಿಕ ಸುಖಕ್ಕಾಗಿ ವೇಶ್ಯಾವಾಟಿಕೆ(Prostitution) ಗೃಹಕ್ಕೆ ಹೋಗುವ ಗ್ರಾಹಕರನ್ನು ಅನೈತಿಕ ಸಂಚಾರ ಎಂದು ‘ಅನೈತಿಕ ಸಂಚಾರ ಕಾಯ್ದೆ’ (ಪಿಐಟಿಎ) ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸುವಂತಿಲ್ಲ ಎಂದು ಕೋಲ್ಕತ್ತಾ ಹೈಕೋರ್ಟ್(Kolkata Highcourt) ತೀರ್ಪು(Verdict) ನೀಡಿದೆ.

ಅರ್ಜಿಯೊಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಜೋಯ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ, ವೇಶಾವಾಟಿಕೆ ಗೃಹಕ್ಕೆ ಹೋಗುವವರ ಕೇವಲ ಲೈಂಗಿಕ ಸುಖಕ್ಕಾಗಿ(Sexual Relief) ಮಾತ್ರ ಹೋಗುವುದಿಲ್ಲ. ಬೇರೆ ಕಾರಣಗಳಿಗೆ ಹೋಗುವವರು ಇದ್ದಾರೆ ಎಂಬ ಅಂಶವನ್ನು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.
2019ರ ಜನವರಿ 4ರಂದು ಪೊಲೀಸ್ ದಾಳಿ ವೇಳೆ ಎನ್‍ಆರ್‍ಐ ಉದ್ಯಮ ಸುರೇಶ್ ಬಾಬು ಅವರನ್ನು ಬಂಧಿಸಲಾಗಿತ್ತು. ಈ ಪ್ರಕರಣದ ಕುರಿತು ವಿಚಾರಣೆ ನಡೆಸಿದ ಪೀಠ ಅವರ ಮೇಲಿದ್ದ ಎಲ್ಲ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಿದೆ.

ಸುರೇಶ್ ಬಾಬು ಅವರನ್ನು ಮಸಾಜ್ ಸೆಂಟರೊಂದರಲ್ಲಿ ಎಂಟು ಮಹಿಳೆಯರು ಮತ್ತು ಒರ್ವ ಪುರುಷನೊಂದಿಗೆ ಬಂಧಿಸಲಾಗಿತ್ತು. ಅವರೆಲ್ಲರೂ ಮಸಾಜ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಎಂಟು ಮಹಿಳೆಯರು ಲೈಂಗಿಕ ಕಾರ್ಯಕರ್ತೆಯರಾಗಿದ್ದು, ಒರ್ವ ಪಿಂಪ್ ಕಾರ್ಯ ಮಾಡುತ್ತಿದ್ದ. ಹೀಗಾಗಿ ಅವರ ಮೇಲೆ ಅನೈತಿಕ ಸಂಚಾರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಇನ್ನು ಅನೈತಿಕ ಸಂಚಾರ ಕಾಯ್ದೆಯ ನಿಬಂಧನೆಗಳು ವಾಣಿಜ್ಯ ಉದ್ದೇಶಕ್ಕಾಗಿ ಲೈಂಗಿಕ ಶೋಷಣೆ ಅಥವಾ ನಿಂದನೆಗೆ ಶಿಕ್ಷಿಸುತ್ತದೆ.

ಆದರೆ ಸುನೀಲ್ ಬಾಬು ಅವರು ಈ ವ್ಯಾಪ್ತಿಯೊಳಗೆ ಬರುವುದಿಲ್ಲ. ಹೀಗಾಗಿ ಅವರ ಮೇಲೆ ದಾಖಲಿಸಿರುವ ಆರೋಪ ಪಟ್ಟಿ ಮತ್ತು ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಪಡಿಸಲಾಗಿದೆ ಎಂದು ಕೋಲ್ಕತ್ತಾ ಹೈಕೋರ್ಟ್ ಹೇಳಿದೆ.

Exit mobile version