ಗರ್ಭಿಣಿಯರು ಬೀದಿಬದಿಯ ಆಹಾರ ಸೇವಿಸಬಹುದೇ? ಇಲ್ಲಿದೆ ಉತ್ತರ

ಗರ್ಭಿಣಿಯರು ಸಾಮಾನ್ಯವಾಗಿ ಹುಳಿ ಹಾಗೂ ಮಸಾಲೆಯುಕ್ತ ಆಹಾರಗಳಾದ ಪಾನಿಪುರಿ, ಮಸಾಲೆಪುರಿಗಳನ್ನು ಇಷ್ಟಪಡುತ್ತಾರೆ. ಆದರೆ ಗರ್ಭಾವಸ್ಥೆಯಲ್ಲಿ ಇಂತಹ ಬೀದಿ ಬದಿಯ ಆಹಾರ ಸೇವಿಸುವುದು ಎಷ್ಟು ಸುರಕ್ಷಿತ?. ಗರ್ಭಿಣಿಯಾಗಿದ್ದಾಗ ನಮ್ಮನ್ನಷ್ಟೇ ಅರೈಕೆ ಮಾಡಿದರೆ ಸಾಕಾಗುವುದಿಲ್ಲ, ಒಳಗಿರುವ ಪುಟ್ಟ ಜೀವದ ಕಾಳಜಿಯೂ ಅಷ್ಟೇ ಮುಖ್ಯ. ಅದಕ್ಕಾಗಿ ಈ ಲೇಖನದಲ್ಲಿ ಗರ್ಭಿಣಿಯಾಗಿದ್ದಾಗ ಬೀದಿಬದಿಯ ಆಹಾರ ಸೇವಿಸಬಹುದೇ ಎಂಬುದರ ಕುರಿತು ವಿವರಿಸಲಾಗಿದೆ.

ಗರ್ಭಿಣಿಯಾಗಿದ್ದಾಗ ನೀವು ಪಾನಿ ಪುರಿ ಅಥವಾ ಚಾಟ್ ತಿನ್ನಬಹುದೇ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಗರ್ಭಿಣಿಯಾಗಿದ್ದಾಗ ನೀವು ಪಾನಿ ಪುರಿ ಅಥವಾ ಚಾಟ್ ತಿನ್ನಬಹುದೇ?:
ಗರ್ಭಾವಸ್ಥೆಯಲ್ಲಿ ಬೀದಿ ಆಹಾರವನ್ನು ತಿನ್ನುವುದಕ್ಕೆ ಯಾವುದೇ ನಿರ್ಬಂಧಗಳಿಲ್ಲದಿದ್ದರೂ, ನಿಮ್ಮ ದೇಹವು ಹೆಚ್ಚು ದುರ್ಬಲವಾಗಿರುವುದರಿಂದ ಬೇಗ ಸೋಂಕು ಮತ್ತು ಕಾಯಿಲೆಗಳನ್ನು ಪಡೆಯುವ ಸಾಧ್ಯತೆಯಿದೆ. ಒಮ್ಮೆ ನೀವು ಅನಾರೋಗ್ಯಕ್ಕೆ ಒಳಗಾದರೆ, ನಂತರ ನೀವು ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ, ಅದು ಹುಟ್ಟಲಿರುವ ಮಗುವಿಗೆ ಒಳ್ಳೆಯದಲ್ಲ. ಇದಲ್ಲದೆ, ನಿಮ್ಮ ದೇಹವು ಹಲವಾರು ಬದಲಾವಣೆಗಳಿಗೆ ಒಳಗಾಗುತ್ತಿರುತ್ತದೆ. ಬೀದಿ ಆಹಾರವನ್ನು ಸೇವಿಸುವುದರಿಂದ ಹೆಚ್ಚಿನ ಗ್ಯಾಸ್ ಮತ್ತು ಎದೆಯುರಿ ಉಂಟಾಗುತ್ತದೆ.

ಬೀದಿ ಬದಿಯ ಆಹಾರ ಸೇವಿಸುವಾಗ ಗರ್ಭಿಣಿಯರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು :

ನೀವು ತಿನ್ನಲು ಸ್ವಚ್ಛ ಮತ್ತು ಆರೋಗ್ಯಕರ ಸ್ಥಳವನ್ನು ಆರಿಸಿಕೊಳ್ಳುವುದು ಒಳ್ಳೆಯದು. ಉತ್ತಮ ಹೊಟೇಲ್ ಅಥವಾ ರೆಸ್ಟೊರೆಂಟ್ ಗೆ ಹೋಗಬಹುದು. ಏಕೆಂದರೆ ಅವುಗಳು ಸಾಮಾನ್ಯವಾಗಿ ನೈರ್ಮಲ್ಯ ಮತ್ತು ಆಹಾರದ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ.

ನೀವು ಯಾವುದೋ ಸ್ಥಳದಲ್ಲಿ ಮೊದಲ ಬಾರಿಗೆ ತಿನ್ನುತ್ತಿದ್ದರೆ, ಆರಂಭದಲ್ಲಿ ಮಧ್ಯಮ ಅಥವಾ ಸಣ್ಣ ಪ್ರಮಾಣದ ಆಹಾರವನ್ನು ಪ್ರಯತ್ನಿಸುವುದು ಒಳ್ಳೆಯದು. ತಿಂದ ನಂತರ ನಿಮಗೆ ಉತ್ತಮ ಎನಿಸಿದರೆ, ನಂತರ ಅದೇ ಸ್ಥಳಕ್ಕೆ ತಿನ್ನಲು ಹೋಗಬಹುದು.

ಸಾಮಾನ್ಯವಾಗಿ, ಬೀದಿ ಬದಿಯಲ್ಲಿ ಆಹಾರ ಸೇವನೆ ಮಾಡಿದ ನಂತರ ಅಲ್ಲಿನ ನೀರು ಕುಡಿಯುವುದು ಒಳ್ಳೆಯದಲ್ಲ. ಅದು ನಿಮ್ಮನ್ನು ಅನಾರೋಗ್ಯಕ್ಕೆ ದೂಡಬಹುದು. ಆದ್ದರಿಂದ, ನೀವು ಮನೆಯಿಂದ ಹೊರಬಂದಾಗಲೆಲ್ಲಾ ಸ್ವಂತ ನೀರಿನ ಬಾಟಲಿಯನ್ನು ನಿಮ್ಮೊಂದಿಗೆ ಕೊಂಡೊಯ್ಯುವುದು ಸೂಕ್ತ. ಅಥವಾ ಪ್ಯಾಕ್ ಮಾಡಿದ ನೀರನ್ನು ಕುಡಿಯಬಹುದು.

ಬೇಯಿಸದ ಅಥವಾ ಹಸಿ ಆಹಾರ ಪದಾರ್ಥಗಳನ್ನು ತಪ್ಪಿಸಿ ಏಕೆಂದರೆ ಅವು ವಿವಿಧ ವೈರಸ್‌ಗಳು ಮತ್ತು ಬ್ಯಾಕ್ಟೀರಿಯಾಗಳಿಗೆ ಸಂತಾನೋತ್ಪತ್ತಿ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ, ಕತ್ತರಿಸಿದ ಹಣ್ಣುಗಳು, ತರಕಾರಿಗಳು ಅಥವಾ ಹಸಿ ಆಹಾರವನ್ನು ಸೇವಿಸಬೇಡಿ. ಬೇಯಿಸಿದ ಆಹಾರಗಳನ್ನು ಯಾವಾಗಲೂ ಆರಿಸಿಕೊಳ್ಳಿ.

ಅಂತೆಯೇ, ಬೀದಿ ಬದಿ ವ್ಯಾಪಾರಿಗಳಿಂದ ಹಸಿ ಅಥವಾ ಬೇಯಿಸದ ಮೊಟ್ಟೆಯ ವಿವಿಧ ಪದಾರ್ಥಗಳನ್ನು ತಿನ್ನುವುದು ಸಹ ಒಳ್ಳೆಯದಲ್ಲ. ಹಸಿ ತರಕಾರಿಗಳೊಂದಿಗೆ ಮೊಟ್ಟೆ ಹಾಕಿ ಕೊಡುವ ಸ್ಯಾಂಡ್‌ವಿಚ್‌ಗಳು ಅಥವಾ ಬರ್ಗರ್‌ಗಳನ್ನು ತಿನ್ನುವುದನ್ನು ತಪ್ಪಿಸಬೇಕು.

ಬೀದಿ ಬದಿ ವ್ಯಾಪಾರಿಗಳಿಂದ ಮಿಲ್ಕ್‌ಶೇಕ್‌ಗಳು ಅಥವಾ ಕೋಲ್ಡ್ ಕಾಫಿಗಳನ್ನು ಕುಡಿಯುವುದು ಒಳ್ಳೆಯದಲ್ಲ. ಹಣ್ಣು ಅಥವಾ ಹಾಲಿನ ತಾಜಾತನವನ್ನು ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ. ಶೇಕ್ಸ್ ತಯಾರಿಸಲು ಬಳಸುವ ಐಸ್ ಅನ್ನು ಫಿಲ್ಟರ್ ಮಾಡಿದ ನೀರಿನಿಂದ ಮಾಡಲಾಗುವುದಿಲ್ಲ. ಕೆಲವು ಮಾರಾಟಗಾರರು ಮಿಲ್ಕ್‌ಶೇಕ್‌ಗಳನ್ನು ತಯಾರಿಸಲು ಕೃತಕ ಸುವಾಸನೆಯನ್ನು ಬಳಸುತ್ತಾರೆ, ಅದು ನಿಮಗೆ ಮತ್ತು ನಿಮ್ಮ ಹುಟ್ಟಲಿರುವ ಮಗುವಿಗೆ ಸುರಕ್ಷಿತವಾಗಿರುವುದಿಲ್ಲ.

ಬೀದಿ ಬದಿ ವ್ಯಾಪಾರಿಗಳಿಂದ ಕಾಟೇಜ್ ಚೀಸ್ ಅಥವಾ ಪನೀರ್ ಗಳನ್ನ ಬಳಸದಂತೆಯೂ ಶಿಫಾರಸು ಮಾಡಲಾಗಿದೆ. ಕಚ್ಚಾ ಪನೀರ್ ಬ್ಯಾಕ್ಟೀರಿಯಾದ ಸಂತಾನೋತ್ಪತ್ತಿಯಾಗಿದೆ, ಮತ್ತು ಅದರ ತಾಜಾತನವನ್ನು ಉಳಿಸಿಕೊಳ್ಳುವುದು ಕಷ್ಟ.

ಬೀದಿ ಬದಿಯಲ್ಲಿ ಪುದಿನಾ, ಮೆಣಸಿನಕಾಯಿ ಅಥವಾ ಹುಳಿಯಂತಹ ವಿವಿಧ ಚಟ್ನಿಗಳನ್ನು ತಿನ್ನಬಾರದು. ಪ್ಯಾಕ್ ಮಾಡಿದ ಟೊಮೆಟೊ ಕೆಚಪ್ ಅಥವಾ ಸಾಸ್ ಅನ್ನು ಆರಿಸುವುದು ಉತ್ತಮ ಆಯ್ಕೆಯಾಗಿದೆ. ಚಟ್ನಿಗಳಲ್ಲಿನ ಕಚ್ಚಾ ಪದಾರ್ಥಗಳು ವಾಂತಿ ಮತ್ತು ಅತಿಸಾರಕ್ಕೂ ಕಾರಣವಾಗಬಹುದು.

ಹೆಚ್ಚಿನ ಮಹಿಳೆಯರು ಗರ್ಭಾವಸ್ಥೆಯಲ್ಲಿದ್ದಾಗ ಪಾನಿಪುರಿಯನ್ನು ಹಂಬಲಿಸುತ್ತಾರೆ. ಆದರೆ, ಮಳೆಗಾಲದಲ್ಲಿ ಅವುಗಳನ್ನು ತಿನ್ನಲು ಯೋಚನೆ ಮಾಡಿದರೆ ಹೆಚ್ಚುವರಿ ಜಾಗರೂಕರಾಗಿಬೇಕು. ಏಕೆಂದರೆ ನೀರಿನ ಮಾಲಿನ್ಯದ ಅಪಾಯವು ಹೆಚ್ಚು ಹೆಚ್ಚಾಗುತ್ತದೆ.

ಹೆಚ್ಚಿನ ಮಹಿಳೆಯರು ಮಸಾಲೆಯುಕ್ತ ಆಹಾರಕ್ಕಾಗಿ ಹಂಬಲಿಸುತ್ತಿದ್ದರೂ , ಕೆಲವು ಮಹಿಳೆಯರು ಕಬ್ಬಿನ ರಸದಂತಹ ಸಿಹಿ ಭಕ್ಷ್ಯಗಳಿಗಾಗಿ ಸಹ ಆಸೆ ಪಡುತ್ತಾರೆ. ಕಬ್ಬಿನ ರಸವನ್ನು ಹೊರತೆಗೆಯಲು ಬಳಸುವ ಯಂತ್ರವು ರೋಗಾಣುಗಳ ಸಂತಾನೋತ್ಪತ್ತಿಗೆ ಸೂಕ್ತ ಸ್ಥಳವಾಗಿದೆ. ಆದ್ದರಿಂದ, ಕಬ್ಬಿನ ರಸವನ್ನು ಕುಡಿಯುವುದು ಸೂಕ್ತವಲ್ಲ.

ರಸ್ತೆ ಮಾರಾಟಗಾರರಿಂದ ಹಣ್ಣಿನ ಚಾಟ್ ತಿನ್ನುವುದನ್ನು ತಪ್ಪಿಸಿ . ನೀವು ಮನೆಯಲ್ಲಿ ಹಣ್ಣುಗಳನ್ನು ಕತ್ತರಿಸಿ ಸ್ವಲ್ಪ ಚಾಟ್ ಮಸಾಲಾ ಸಿಂಪಡಿಸಿ ಮತ್ತು ನಿಂಬೆ ರಸವನ್ನು ಹಿಸುಕಿ ತಾಜಾ ಆಹಾರ ಸಲಾಡ್ ಅನ್ನು ಆನಂದಿಸಬಹುದು.

Exit mobile version