Bengaluru: ಲೋಕಸಭೆ ಚುನಾವಣೆ ಹತ್ತಿರ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ನಲ್ಲಿ (Candidate Selection Progress-INC) ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಚುರುಕು ಪಡೆದುಕೊಂಡಿದ್ದು, ಕೆಪಿಸಿಸಿ
ಇಂದಿರಾ ಗಾಂಧಿ ಭವನದಲ್ಲಿ ಜನವರಿ (January) 19ರಂದು ಚುನಾವಣಾ ಸಮಿತಿ ಸಭೆ ನಡೆಯಲಿದೆ. ಅಭ್ಯರ್ಥಿಗಳ ಆಯ್ಕೆ ಜೊತೆಗೆ ಸಚಿವರ ಸ್ಪರ್ಧೆಯ ಕುರಿತಾದ ಗೊಂದಲಕ್ಕೂ ತೆರೆ ಬೀಳಲಿದೆ.
ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಅಭ್ಯರ್ಥಿ ಆಯ್ಕೆಯ ಕುರಿತಾಗಿ ವರದಿ ನೀಡಿದ್ದು, ಈ ವರದಿಯ ಬಗ್ಗೆ ಚುನಾವಣಾ ಸಮಿತಿ ಸಭೆಯಲ್ಲಿ ಚರ್ಚೆ ನಡೆಯಲಿದೆ. ಅಭ್ಯರ್ಥಿ ಆಯ್ಕೆ ನಿಟ್ಟಿನಲ್ಲಿ ರಾಜ್ಯದ ನಾಯಕರು
ಒಂದು ಹಂತದ ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆ ಇದ್ದು, ಶುಕ್ರವಾರ ನಡೆಯಲಿರುವ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರ ರಣದೀಪ್ ಸಿಂಗ್ (Randeep Singh) ಸುರ್ಜೇವಾಲಾ, ಎಐಸಿಸಿ ಸ್ಕ್ರೀನಿಂಗ್
ಕಮಿಟಿ ಅಧ್ಯಕ್ಷ ಹರೀಶ್ ಚೌಧರಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಕೆಪಿಸಿಸಿ ಅಧ್ಯಕ್ಷ ಮತ್ತು ಡಿಸಿಎಂ ಆಗಿರುವ ಡಿ.ಕೆ ಶಿವಕುಮಾರ್ ಭಾಗಿಯಾಗಲಿದ್ದಾರೆ.
ಚುನಾವಣೆ ಸಮಿತಿ ಸದಸ್ಯರು ಕೂಡಾ ಈ ಸಭೆಯಲ್ಲಿ ಭಾಗಿಯಾಗಲಿದ್ದು, ಇವರ ಜೊತೆಗೆ 28 ಕ್ಷೇತ್ರದ ಸಂಯೋಜಕರಾಗಿರುವ ಸಚಿವರು ಕೂಡಾ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಕೆಪಿಸಿಸಿ (KPCC)
ಚುನಾವಣಾ ಸಮಿತಿ ಸಭೆಯಲ್ಲಿ 28 ಲೋಕಸಭಾ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಮಾತುಕತೆ ನಡೆಯಲಿದ್ದು, ಸುದೀರ್ಘ ಚರ್ಚೆ ಬಳಿಕ ಅಭ್ಯರ್ಥಿಗಳ ಹೆಸರನ್ನು ಎಐಸಿಸಿಗೆ ಕೆಪಿಸಿಸಿ ಶಿಫಾರಸು ಮಾಡಲಿದೆ.
ಲೋಕಸಭೆ ಚುನಾವಣೆಗೆ ಸಚಿವರ ಸ್ಪರ್ಧೆಯ ವಿಚಾರವಾಗಿಯೂ ಮಾತುಕತೆ ನಡೆಯಲಿದ್ದು, ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸುವ ನಿಟ್ಟಿನಲ್ಲಿ ಕೆಲವು ಸಚಿವರನ್ನು ಕಣಕ್ಕೆ ಇಳಿಸುವ ಬಗ್ಗೆ ಪರ
ಹಾಗೂ ವಿರೋಧ ಅಭಿಪ್ರಾಯಗಳಿವೆ. ಬಿಜೆಪಿಗೆ (BJP) ಕಠಿಣ ಸ್ಪರ್ಧೆ ಕೊಡುವ ನಿಟ್ಟಿನಲ್ಲಿ ಸಚಿವರನ್ನೇ ಕಣಕ್ಕೆ ಇಳಿಸಬೇಕು ಎಂಬ ಅಭಿಪ್ರಾಯ ಇದೆ.
ಅಂದು ನಡೆಯಲಿರುವ ಸಭೆಯಲ್ಲಿ ಯಾವ ಸಚಿವರು ಸ್ಪರ್ಧೆ ಮಾಡುತ್ತಾರೆ. ಯಾರು ಮಾಡುವುದಿಲ್ಲ? ಎಂಬುದಕ್ಕೆ ಸ್ಪಷ್ಟತೆ ಸಿಗುವ ಸಾಧ್ಯತೆ ಇದ್ದು, ಪ್ರಬಲ ಅಭ್ಯರ್ಥಿ ಕೊರತೆ ಹಿನ್ನೆಲೆಯಲ್ಲಿ ಒಂದು ಸ್ಪರ್ಧೆ
ಮಾಡಬೇಕು, ಇಲ್ಲವಾದಲ್ಲಿ ಅಭ್ಯರ್ಥಿ ಗೆಲ್ಲಿಸಿಕೊಂಡು ಬರಬೇಕು ಎಂಬ ಬಗ್ಗೆ (Candidate Selection Progress-INC) ಟಾಸ್ಕ್ ಕೊಡುವ ಸಾಧ್ಯತೆಯೂ ಇದೆ.
ಹೈಕಮಾಂಡ್ (High command) ನಾಯಕರು ಈಗಾಗಲೇ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಸಚಿವರಿಗೆ ಕೆಲವೊಂದು ಟಾಸ್ಕ್ ಕೊಟ್ಟಿದ್ದು, ಪ್ರತಿಯೊಂದು ಅಭ್ಯರ್ಥಿ ಗೆಲುವಿಗೆ ಎಲ್ಲಾ ರೀತಿಯಲ್ಲಿ ಸಂಪೂರ್ಣ
ಜವಾಬ್ದಾರಿಯನ್ನು ಸಚಿವರು ಹೊತ್ತುಕೊಳ್ಳಬೇಕು ಎಂಬ ಸೂಚನೆ ಕೊಡಲಾಗಿದೆ. ಈ ನಿಟ್ಟಿನಲ್ಲಿ ಶುಕ್ರವಾರದ ಸಭೆಯಲ್ಲೂ ಈ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ
ಇದನ್ನು ಓದಿ: ಬಿಹಾರದ ಮಾಜಿ ಸಿಎಂ ಹಾಗೂ ಸಮಾಜವಾದಿ ನಾಯಕ ಕರ್ಪೂರಿ ಠಾಕೂರ್ಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ
ಭವ್ಯಶ್ರೀ ಆರ್ ಜೆ