ಜಿಪಿಎಸ್ ಬಳಸಿ ನದಿಗೆ ಬಿದ್ದ ಕಾರು ಕೇರಳದಲ್ಲಿ ನಡೆದ ದುರ್ಘಟನೆ: ಇಬ್ಬರು ವೈದ್ಯರ ಸಾವು

Kerala: ದೈನಂದಿನ ಕೆಲಸ ಕಾರ್ಯಗಳಲ್ಲಿ ತಂತ್ರಜ್ಞಾನವು ನಮಗೆ ಜೀವನವನ್ನು ನಡೆಸಲು ಸಹಾಯ ಮಾಡುತ್ತದೆ ಮತ್ತು ನೆರವು ನೀಡುತ್ತದೆ. ಅದೇ ತಂತ್ರಜ್ಞಾನವನ್ನು ಹೆಚ್ಚಾಗಿ ಅವಲಂಬಿಸಿದರೆ ಜೀವಕ್ಕೇ ಕುತ್ತಾಗಬಹುದು ಇಂತಹ ದುರ್ಘಟನೆಯೊಂದು ಕೇರಳ ರಾಜ್ಯದ ಕೊಚ್ಚಿಯಲ್ಲಿ ನಡೆದಿದೆ.

ಇಬ್ಬರು ಯುವ ವೈದ್ಯರು ಕಾರ್‌ನಲ್ಲಿ ಪ್ರಯಾಣಿಸುತ್ತಿದ್ದು, ಮಾರ್ಗದ ಕುರಿತಾಗಿ ಮಾಹಿತಿ ನೀಡಲು ಗೂಗಲ್ ಮ್ಯಾಪನ್ನು ಹಾಕಲಾಗಿತ್ತು. ಈ ವೇಳೆ ಕಾರಿನ ಮಾರ್ಗದ ಕುರಿತಾದ ಎಡವಟ್ಟಿನಿಂದಾಗಿ ವೈದ್ಯರು ಪ್ರಯಾಣಿಸುತ್ತಿದ್ದ ಕಾರು ಪೆರಿಯಾರ್ (Periyar) ನದಿಗೆ ಬಿದ್ದು, ಇಬ್ಬರೂ ವೈದ್ಯರು ಸಾವಿಗೀಡಾಗಿದ್ದಾರೆ.

ಕೊಚ್ಚಿಯ (Kochi) ಗೋಥೂರತ್ ಎಂಬಲ್ಲಿ ಈ ಘಟನೆ ನಡೆದಿದ್ದು, ಈ ಘಟನೆಯಲ್ಲಿ ಯುವ ವೈದ್ಯರಾದ 29 ವರ್ಷ ವಯಸ್ಸಿನ ಅದ್ವೈತ್ (Advaith) ಹಾಗೂ ಅಜ್ಮಲ್ (Ajmal) ಮೃತಪಟ್ಟಿದ್ದಾರೆ. ಖಾಸಗಿ ಆಸ್ಪತ್ರೆಯೊಂದರಲ್ಲಿ ಇವರಿಬ್ಬರೂ ಕೊಚ್ಚಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇದೇ ಕಾರಿನಲ್ಲಿ ಇಬ್ಬರು ಯುವ ವೈದ್ಯರ ಜೊತೆಗೆ ಇನ್ನೂ ಮೂವರು ಪ್ರಯಾಣಿಸುತ್ತಿದ್ದರು. ಅದೃಷ್ಟವಶಾತ್ ಎಲ್ಲರೂ ಬದುಕುಳಿದಿದ್ದಾರೆ. ಗಾಯಗೊಂಡ ಮೂವರನ್ನೂ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಭಾನುವಾರ ಬೆಳಗಿನ ಜಾವ 12.30ಕ್ಕೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಅಪಘಾತ ಸಂಭವಿಸುವ ವೇಳೆ ಮಧ್ಯ ರಾತ್ರಿಯಾಗಿತ್ತು. ಜೊತೆಗೆ ಅತೀಯಾದ ಮಳೆ ಕೂಡಾ ಬರುತ್ತಿತ್ತು. ಕಾರು ಚಾಲಕನಿಗೆ ಮುಂದೇನಿದೆ ಎಂದೇ ಗೊತ್ತಾಗದಂಥಾ ಪರಿಸ್ಥಿತಿ ಎದುರಾಗಿತ್ತು. ಸರಿಯಾಗಿ ಏನೂ ಕಾಣುತ್ತಿರಲಿಲ್ಲ. ಹಾಗಾಗಿ ಗೂಗಲ್‌ ಮ್ಯಾಪ್‌ನ (Google Map) ಮಾರ್ಗವನ್ನು ಆತ ಸೂಕ್ತವಾಗಿ ಗ್ರಹಿಸಲು ಸಾಧ್ಯವಾಗಲಿಲ್ಲ.

ಈ ಘಟನೆ ಕುರಿತು ಮಾತಾಡಿದ ಗಾಯಾಳುಗಳ ಪ್ರಕಾರ ಗೂಗಲ್ ಮ್ಯಾಪ್ ಅವರಿಗೆ ಬಲಕ್ಕೆ ತಿರುಗಿ ಎಂದು ಹೇಳಿತ್ತು. ಆದರೆ ಕಾರು ಚಲಾಯಿಸುತ್ತಿದ್ದ ಯುವ ವೈದ್ಯ ತಪ್ಪಾಗಿ ಕಾರನ್ನು ಎಡಕ್ಕೆ ತಿರುಗಿಸಿದ್ದ ಆದ್ದರಿಂದ ಕಾರು ನದಿ ದಡದಲ್ಲಿ ಸಾಗುವ ವೇಳೆ ನದಿಗೆ ಬಿದ್ದಿದೆ ಎಂದು ಪೊಲೀಸರು ಹೇಳಿದ್ದಾರೆ.

ಭವ್ಯಶ್ರೀ ಆರ್.ಜೆ

Exit mobile version