ಅಪರಾಧಗಳಿಗೂ ಇದೆಯೇ ಜಾತಿಯ ಶ್ರೀರಕ್ಷೆ!

ಹಲವಾರು ಸಲ ಅಪರಾಧಿ ಅಥವಾ ಅಪರಾಧಿ ಕೃತ್ಯಕ್ಕೆ ಒಳಗಾದವರ ಜಾತಿ, ವರ್ಚಸ್ಸಿನ ಆಧಾರದ ಮೇಲೆ ಆತನ ಕೃತ್ಯ, ಅದರ ಗಂಭೀರತೆ, ಅದರಿಂದಾದ ಹಾನಿ ಇವೆಲ್ಲವನ್ನೂ ಮರೆಮಾಚುವ ಪ್ರಯತ್ನ ಬಹಳ ವ್ಯವಸ್ಥಿತವಾಗಿಯೇ ನಡೆಯುತ್ತದೆ. ಗೊತ್ತಿದ್ದೋ, ಗೊತ್ತಿಲ್ಲದೆಯೋ ನಾವೆಲ್ಲರೂ ಈ ಪದ್ದತಿಗೆ ಒಗ್ಗಿಕೊಂಡಿದ್ದೇವೆ. ಇದಕ್ಕೆ ಸಮಾಜದಲ್ಲಿ ಹಲವು ಉದಾಹರಣೆಗಳೂ ಪ್ರಸ್ತುತವಾಗಿವೆ.

ದೆಹಲಿಯಲ್ಲಿ‌ ಬ್ರಾಹ್ಮಣ ಯುವತಿ ನಿರ್ಭಯಾ ಮೇಲೆ ಬಲಾತ್ಕಾರವಾದಾಗ ದೇಶಾದ್ಯಂತ ಬೀದಿಗಳಲ್ಲಿ ದೀಪ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು. ಹೈದರಾಬಾದ್‌ನ ರೆಡ್ಡಿ ಸಮುದಾಯದ ಯುವತಿ ದಿಶಾಳನ್ನು ರೇಪ್ ಮಾಡಿ ಕೊಂದ ಎರಡೇ ದಿನಗಳಲ್ಲಿ ಪಾಪಿಗಳ ಎನ್ ಕೌಂಟರ್ ಆಯಿತು. ಇಡೀ ದೇಶವೇ ಆನಂದಿಸಿತು.

ಆದರೆ ಹತ್ರಾಸ್ ಪ್ರಕರಣದಲ್ಲಿ ದಲಿತ ಬಾಲಕಿಯನ್ನು ರೇಪ್ & ಮರ್ಡರ್ ನಡೆದಾಗ ಮೇಲ್ಜಾತಿಯ ಅಪರಾಧಿಗಳನ್ನು ರಕ್ಷಿಸಲು ಉತ್ತರಪ್ರದೇಶದ ಸರ್ಕಾರವೇ ಮುಂದಾಗಿ ಮಧ್ಯರಾತ್ರಿಯಲ್ಲಿ ಆ ಯುವತಿಯನ್ನು ಶವಸಂಸ್ಕಾರ ಮಾಡದೇ ಪೊಲಿಸರೇ ಸುಟ್ಟು ಹಾಕಿದರು.

ಉನ್ನಾವ್‌ ಪ್ರಕರಣದಲ್ಲಿ ದಲಿತ ಯುವತಿಯನ್ನು ಬಿಜೆಪಿ ಸಶಾಸಕನೇ ಅತ್ಯಾಚಾರಗೈದಿದ್ದಾನೆಂದು ದೂರು ದಾಕಖಲಾಗಿದ್ದರೂ ಆತನನ್ನು ಅರೆಸ್ಟ್ ಮಾಡಲಿಲ್ಲ. ಬದಲಾಗಿ ದಲಿತ ಯುವತಿಯ ತಂದೆಯನ್ನು ಜೈಲಿನಲ್ಲಿ, ಚಚಿಕ್ಕಪ್ಪನನ್ನು ಅಪಗಘಾತ ಮಾಡಿಸಿ ಕೊಲ್ಲಲಾಯಿತು.

ಪ್ರಸ್ತುತ ದೆಹಲಿಯಲ್ಲಿ 9 ವರ್ಷದ ದಲಿತ ಬಾಲಕಿಯೋರ್ವಳ ಮೇಲೆ ಅತ್ಯಾಚಾರ ನಡೆದಿದ್ದರೂ ಯಾವುದೇ ದೊಡ್ಡ ಮಟ್ಟದ ಪ್ರತಿಭಟನೆಗಳಿಲ್ಲ, ಬೀದಿಗಳಲ್ಲಿ ಮೋಂಬತ್ತಿ ಹಚ್ಚಚುವವರೂ ಯಾರೂ ಇಲ್ಲ. ಜಾತಿಗಳೇ ಸುಳ್ಳು, ಜಾತಿವಾದವೇ ಇಲ್ಲ ಎಂದು ಹೇಳಿಕೊಳ್ಳುವ ಜನರೂ, ತಮ್ಮ ದೇಶದ ಹೆಣ್ಣುಮಗಳೊಬ್ಬಳ ಬಗ್ಗೆ ಕಿಂಚಿತ್ತೂ ಯೋಚನೆ ಮಾಡದೇ ಇರುವುದು ವಿಪರ್ಯಾಸವೇ ಸರಿ.

Latest News

ರಾಜಕೀಯ

`ಬ್ಲ್ಯಾಕ್‌ ಮೇಲ್‌ ಕುಮಾರಸ್ವಾಮಿʼ ; ಕಣ್ಣೀರ ಕೋಡಿಯಿಂದ ಕುಟುಂಬಕ್ಕೆ ಲಾಭವೇ ಹೊರತು ಜನತೆಗೇನು ಲಾಭ? : ಅಶ್ವಥ್ ನಾರಾಯಣ್‌

ನೀವು ಈವರೆಗೆ ಹೇಳಿದ ಸುಳ್ಳುಗಳನ್ನು ಎಣಿಸಲು ಸಾಧ್ಯವೇ? ಎಂದು ಸಚಿವ(Minister) ಅಶ್ವಥ್‌ ನಾರಾಯಣ್(Ashwath Narayan) ಪ್ರಶ್ನಿಸಿದ್ದಾರೆ.

ದೇಶ-ವಿದೇಶ

ಇಬ್ಬರು ಭಯೋತ್ಪಾದಕರನ್ನು ಹತ್ಯೆಗೈದ ಭಾರತೀಯ ಸೇನೆ ; ದಾಳಿಯಲ್ಲಿ ಮೂವರು ಯೋಧರು ಹುತಾತ್ಮ!

ಸ್ವಾತಂತ್ರ್ಯ ದಿನಾಚರಣೆ(Independence Day) ಸಂದರ್ಭದಲ್ಲಿ ಉಗ್ರರು ದೇಶದ ವಿವಿಧ ಭಾಗಗಳಲ್ಲಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

ದೇಶ-ವಿದೇಶ

‘ಡಾನಿ’ ಬುಡಕಟ್ಟು ಜನಾಂಗದಲ್ಲಿ ಬೆರಳನ್ನು ಕತ್ತರಿಸುವುದೇ ಸಂಪ್ರದಾಯವಂತೆ!

ಇಂಡೋನೇಷ್ಯಾದ, ಪಪುವಾ ಗಿನಿಯಾ ದ್ವೀಪದಲ್ಲಿ ವಾಸಿಸುವ ಎಲ್ಲಾ ಡಾನಿ ಬುಡಕಟ್ಟಿನ ಮಹಿಳೆಯರನ್ನು ಕತ್ತರಿಸಿದ ಬೆರಳುಗಳಿಂದ ಬದುಕಲು ಒತ್ತಾಯಿಸಲಾಗುತ್ತದೆ.

ರಾಜಕೀಯ

`ನನ್ನಲ್ಲೂ ದಾಖಲೆಗಳಿವೆ ; `ಸರ್ಟಿಫಿಕೇಟ್ ಕೋರ್ಸ್ʼಗಿಂತ ಬೃಹತ್ ಚಾಪ್ಟರ್ 1, 2, 3 ಆಗುತ್ತವೆ, ಬಿಚ್ಚಲೇ? : ಹೆಚ್.ಡಿಕೆ

ಕಟ್ಟಡಗಳ ಹೆಸರಿನಲ್ಲಿ ಕಮೀಷನ್ ಕಾಂಚಾಣ, ಅಧಿಕಾರಿಗಳನ್ನು ಒಳಕ್ಕೆ ಹಾಕಿಕೊಂಡು ಡೀಲ್ ಮಾಡುವ ಅಶ್ವತ್ ನಾರಾಯಣ್, ಇದೇನಾ ನೀವು ನೀಡುತ್ತಿರುವ ಉನ್ನತ ಶಿಕ್ಷಣ?