New Delhi: ಕಾವೇರಿ ಕಣಿವೆ ಪ್ರದೇಶದಲ್ಲಿ ನಿರೀಕ್ಷೆಗಿಂತ ಕಡಿಮೆ ಮಳೆಯಾಗಿರುವುದರಿಂದ ಕರ್ನಾಟಕ (Cauvery water to TamilNadu) ಮತ್ತು ತಮಿಳುನಾಡು(Tamil Nadu) ನಡುವೆ ಕಾವೇರಿ
(Kaveri River) ಹೋರಾಟ ಮತ್ತೆ ಆರಂಭವಾಗಿದೆ. ಕರ್ನಾಟಕ ನೀರು ಬಿಟ್ಟರೆ ಮಾತ್ರ ರಾಜ್ಯದ ಕುರುವೈ ಬೆಳೆ ಉಳಿಯುತ್ತದೆ ಎಂದು ಹೇಳಿರುವ ತಮಿಳುನಾಡು ಸರ್ಕಾರ ಮೆಟ್ಟೂರು ಜಲಾಶಯಕ್ಕೆ
ಕರ್ನಾಟಕ ಅಗತ್ಯ ಪ್ರಮಾಣದಲ್ಲಿ ನೀರು ಬಿಟ್ಟಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ದೂರು ನೀಡಿದೆ. ಹಾಗಾಗಿ ಕೇಂದ್ರ ಸರ್ಕಾರ ಕೂಡಲೇ ತಮಿಳುನಾಡಿಗೆ ನ್ಯಾಯ ಕೊಡಿಸಲು ಮುಂದಾಗಿದೆ.

ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (M.K Stalin) ಅವರು ಕೇಂದ್ರ ಜಲ ಮತ್ತು ವಿದ್ಯುತ್ ಸಚಿವ ಗಜೇಂದ್ರ ಸಿಂಗ್ ಶೇಖಾವತ್ (Gajendra Singh Shekhavat) ಅವರಿಗೆ ಪತ್ರ ಬರೆದಿದ್ದು,
ತಮಿಳುನಾಡಿನ ಕಾವೇರಿ ಕಣಿವೆ ಜಿಲ್ಲೆಯ ರೈತರಿಗೆ ಅಲ್ಪಾವಧಿಯ ಕುರುವೈ ಬೆಳೆ(Kuruvai Crop) ಅತ್ಯಂತ ಪ್ರಮುಖ ಬೆಳೆಯಾಗಿದೆ. ಜೂನ್ 1ರಿಂದ ಜುಲೈ 17ರ ನಡುವೆ ಅಂತಾರಾಜ್ಯ ಗಡಿಭಾಗವಾದ
ಬಿಳಿಗುಂಡ್ಲು ತಮಿಳುನಾಡಿಗೆ ಕೇವಲ 3.78 ಟಿಎಂಸಿ ನೀರು ಪೂರೈಸಿದೆ. ಈ ಅವಧಿಯಲ್ಲಿ 26.32 ಟಿಎಂಸಿ ನೀರು ಬಿಡುವ ತೀರ್ಪನ್ನು ಉಲ್ಲಂಘಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : 2 ತಿಂಗಳಲ್ಲಿ ರಾಜ್ಯದಲ್ಲಿ 42 ರೈತರ ಆತ್ಮಹತ್ಯೆ: ಜೀವ ಹಿಂಡುತ್ತಿದೆ ಸಾಲ ಬಾಧೆ !
ಬಾಕಿ ಇರುವ 22.54 ಟಿಎಂಸಿ ನೀರು ಬಿಡುಗಡೆ ಮಾಡಿಲ್ಲ. ಕುರುವಾಯಿ ಬೆಳೆಗಳಿಗೆ ನಿಗದಿತ ಸಮಯಕ್ಕೆ ನೀರು ಪೂರೈಸಲು ಮೆಟ್ಟೂರು(Mettur) ಜಲಾಶಯವನ್ನು ಜೂನ್ 12 ರಂದು ತೆರೆಯಲಾಯಿತು.
ನೈಋತ್ಯ ಮುಂಗಾರು ಆರಂಭ ತಡವಾಗಿದ್ದರೂ ಜುಲೈನಲ್ಲಿ ವೇಗ (Cauvery water to TamilNadu) ಪಡೆದುಕೊಂಡಿದೆ.

ಆದರೆ ಕರ್ನಾಟಕವು ನಿಗದಿತ ಕಬಿನಿ (Kabini) ಮತ್ತು ಕೆಆರ್ಎಸ್ (KRS) ಜಲಾಶಯಗಳಿಂದ ತಮಿಳುನಾಡಿಗೆ ನೀರು ಬಿಟ್ಟಿಲ್ಲ.ಸೇಲಂ (Selam) ಜಿಲ್ಲೆಯ ಮೆಟ್ಟೂರು ಜಲಾಶಯದಲ್ಲಿ ಇದರ ಪರಿಣಾಮವಾಗಿ
ನೀರು ಸಂಗ್ರಹಣೆ ಕ್ಷೀಣಿಸುತ್ತಿದೆ. 20 ದಿನಗಳ ನೀರಾವರಿಗಷ್ಟೇ ಪ್ರಸ್ತುತ ಸಂಗ್ರಹಣೆಯ ನೀರು ಸಾಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : 8ನೇ ತರಗತಿಯಿಂದ ಕನ್ನಡ ಪಾಠ ಬೇಡ : ಪ್ರಾಂಶುಪಾಲರ ಬಳಿ ಕೆಲ ಪೋಷಕರ ಆಗ್ರಹ!
ಸಿಎಂ ಸ್ಟಾಲಿನ್ ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಮಂಡಳಿಗೆ ನೀರು ಬಿಡುಗಡೆ ಸಂಬಂಧ ಸೂಚನೆ ನೀಡಲು ನೀವು ನಿರ್ದೇಶಿಸಬೇಕು ಎಂದು ಕೇಂದ್ರ ಸಚಿವರಲ್ಲಿ ಕೋರಿದ್ದಾರೆ. ತಮಿಳುನಾಡು
ಜಲಸಂಪನ್ಮೂಲ ಸಚಿವ ದುರೈಮುರುಗನ್ ಗುರುವಾರದಂದು ಜುಲೈ 19ರಂದು ಸಿಎಂ ಬರೆದ ಪತ್ರವನ್ನು ದೆಹಲಿಯಲ್ಲಿ (Delhi) ಕೇಂದ್ರ ಸಚಿವರಿಗೆ ಹಸ್ತಾಂತರಿಸಿದ್ದಾರೆ.
ಸ್ಟಾಲಿನ್ ಪತ್ರದಲ್ಲಿ ಏನಿದೆ??
- ಮೆಟ್ಟೂರು ಜಲಾಶಯಕ್ಕೆ ಕರ್ನಾಟಕ ನಿಗದಿತ ಪ್ರಮಾಣದಲ್ಲಿ ಬಿಡುಗಡೆ ಮಾಡಿಲ್ಲ.
- ಸೇಲಂ ಜಿಲ್ಲೆಯ ಮೆಟ್ಟೂರು ಜಲಾಶಯದಲ್ಲಿ ಈಗಾಗಲೇ ನೀರು ಸಂಗ್ರಹಣೆ ಕ್ಷೀಣವಾಗುತ್ತಿದೆ
- ಕರ್ನಾಟಕ ಸರ್ಕಾರ ಐತೀರ್ಪು ಉಲ್ಲಂಘನೆ ಮಾಡಿದೆ
- ತಕ್ಷಣ ಕಾವೇರಿ ನೀರನ್ನು ಅಲ್ಪಾವಧಿಯ ಕುರುವೈ ಬೆಳೆ ರಕ್ಷಣೆಗೆ ಹರಿಸಬೇಕು.
ರಶ್ಮಿತಾ ಅನೀಶ್