ಡಿಕೆಶಿ ಒಡೆತನದ ವಿದ್ಯಾಸಂಸ್ಥೆಯ ಮೇಲೆ CBI ದಾಳಿ!

Bengaluru : ಕರ್ನಾಟಕ ರಾಜ್ಯ ಕಾಂಗ್ರೆಸ್ (CBI raid on DKC) ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ನಡೆಸುತ್ತಿದ್ದ ಕಾಲೇಜಿನ ಮೇಲೆ ಡಿ.19 ರಂದು ಸಿಬಿಐ ದಾಳಿ ನಡೆಸಿದೆ.

ಕರ್ನಾಟಕ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ, ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ (CBI raid on DKC) ನಡೆಸುತ್ತಿರುವ ಕಾಲೇಜಿನ ಮೇಲೆ ಕೇಂದ್ರೀಯ ತನಿಖಾ ದಳ (ಸಿಬಿಐ) ದಾಳಿ ನಡೆಸಿದೆ.

ಡಿ.ಕೆ ಶಿವಕುಮಾರ್ ಅವರಿಗೆ ಸಂಬಂಧಿಸಿದಂತೆ ಬೆಂಗಳೂರು ನಗರದಲ್ಲಿರುವ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ (Global Academy of Technology) ಎಂಬ ಶಿಕ್ಷಣ ಸಂಸ್ಥೆಯ ಮೇಲೆ ದಾಳಿ ನಡೆಸಲಾಗಿದೆ.

https://vijayatimes.com/delhi-election-result/

ಕೇಂದ್ರ ತನಿಖಾ ಸಂಸ್ಥೆ ಸಿಬಿಐ, ಸೋಮವಾರ ಕಾಲೇಜು ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಈ ಮಧ್ಯೆ ಡಿ.ಕೆ ಶಿವಕುಮಾರ್ ಅವರ ಪುತ್ರಿ ಡಿ.ಕೆ.ಎಸ್ ಐಶ್ವರ್ಯ (Aishwarya), ಕಾಲೇಜಿನ ಟ್ರಸ್ಟಿ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ಡಿ.ಕೆ ಶಿವಕುಮಾರ್ ಅವರ ಪತ್ನಿ ಕಾಲೇಜಿನ ಟ್ರಸ್ಟ್‌ನ ಸದಸ್ಯರಾಗಿದ್ದಾರೆ.

ಇದನ್ನೂ ಓದಿ : https://vijayatimes.com/i-am-modi-bilawal-bhutto/

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್‌ನ (Congress) ಕರ್ನಾಟಕ ಘಟಕದ ಮುಖ್ಯಸ್ಥರನ್ನು ಜಾರಿ ನಿರ್ದೇಶನಾಲಯ (ಇಡಿ) ಎರಡು ತಿಂಗಳ ಹಿಂದೆ ಪ್ರಶಿಸಿದ್ದ ಬೆನ್ನಲ್ಲೇ ಸಿಬಿಐ ಈ ದಾಳಿಯನ್ನು ಕೈಗೊಂಡಿದೆ. ನ್ಯಾಷನಲ್ ಹೆರಾಲ್ಡ್(National Herald) ಪ್ರಕರಣದಲ್ಲಿ,

ನವೆಂಬರ್ 14 ರಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ (New Delhi) ಡಿ.ಕೆ ಶಿವಕುಮಾರ್ ಅವರನ್ನು ಏಜೆನ್ಸಿ ತನಿಖೆಗೆ ಒಳಪಡಿಸಿ, ವಿಚಾರಣೆಯನ್ನು ನಡೆಸಿತ್ತು.

ಒಂದೆಡೆ ರಾಜ್ಯ ಕಾಂಗ್ರೆಸ್ ಮುಂಬರುವ 2023ರ ವಿಧಾನಸಭಾ ಚುನಾವಣೆಗೆ(Assembly election) ಭಾರಿ ಪ್ರಚಾರ ಕೈಗೊಂಡಿದ್ದು,

ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಚುನಾವಣಾ ತಂತ್ರಗಾರಿಕೆಯನ್ನು ರೂಪಿಸಿ ಭಾರಿ ತಯಾರಿ ನಡೆಸುತ್ತಿದ್ದರೇ,

ಅತ್ತ ಸಿಬಿಐ ಡಿ.ಕೆ ಶಿವಕುಮಾರ್ ಅವರ ಕಛೇರಿ ಮೇಲೆ ಏಕಾಏಕಿ ದಾಳಿ ನಡೆಸಿರುವುದು ಡಿಕೆಶಿಗೆ ಎತ್ತ ಸಾಗುವುದು ಎಂಬುದು ತಿಳಿಯದಾಗಿದೆ ಮತ್ತು ದೊಡ್ಡ ಗೊಂದಲ ಎದುರಾದಂತಿದೆ.

ಇದನ್ನೂ ಓದಿ : https://vijayatimes.com/statement-by-greek-prime-minister/

ಸದ್ಯ ರಾಜ್ಯ ಬಿಜೆಪಿ (State BJP) ಸರ್ಕಾರದ ವಿರುದ್ದ ಆರೋಪಗಳ ಪಟ್ಟಿಯನ್ನು ಪ್ರದರ್ಶಿಸುತ್ತಿರುವ ರಾಜ್ಯ ಕಾಂಗ್ರೆಸ್ ನಾಯಕ ಡಿಕೆಶಿ ಮತ್ತು ಸಿದ್ದರಾಮಯ್ಯ ಅವರಿಗೆ,

ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (C.T.Ravi) ಮಾತಿನ ಚಾವಟಿ ಬೀಸುತ್ತಿರುವುದು ಎರಡು ಪಕ್ಷಗಳ ನಡುವೆ ಚುನಾವಣಾ ಕಿಡಿಯನ್ನು ಹೊತ್ತಿಸದಂತಾಗಿದೆ.
Exit mobile version