CBSE 10 ,12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಫೆಬ್ರವರಿ 2ಕ್ಕೆ ರಿಲೀಸ್

ನವದೆಹಲಿ, ಜ. 28: ಇಂದು ವೆಬಿನಾರ್ ಸಂವಾದದಲ್ಲಿ ಮಾತಾಡಿದ ಕೇಂದ್ರ ಸಚಿವ ರಮೇಶ್ ಫೋಖ್ರಿಯಲ್, ಫೆಬ್ರವರಿ 2 ರಂದು ಸಿಬಿಎಸ್‌ಇ 10 ಮತ್ತು 12 ನೇ ತರಗತಿ ಪರೀಕ್ಷೆಯ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಲಿದೆ ಎಂದು’ ಹೇಳಿದ್ದಾರೆ. ಅವರು ಸಂವಾದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳಿಗೆ ಈ  ಮಾಹಿತಿ ನೀಡಿದರು.

ಇದೇ ವೇಳೆ ಅವರು ಮಾತನಾಡಿ. ಎನ್ ಇಪಿಯಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ಪ್ರಾದೇಶಿಕ ಭಾಷೆಯನ್ನು ಬೋಧನೆಯ ಮಾಧ್ಯಮವಾಗಿ ಎಲ್ಲಾ ಭಾರತೀಯ ಶಾಲೆಗಳಲ್ಲಿ ಏಕರೂಪವಾಗಿ ಅನುಷ್ಠಾನಗೊಳಿಸಲಾಗುವುದು ಅಂತ ತಿಳಿಸಿದರು. ಇನ್ನು 6ನೇ ತರಗತಿಯಿಂದ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ ವನ್ನು ನೀಡಲು ನಾವು ಬಯಸುತ್ತೇವೆ, ಇದರಿಂದ ಅವರು ತಮ್ಮ ಜ್ಞಾನ ಮತ್ತು ಅನುಭವವನ್ನು ಬಳಸಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಉತ್ತಮ ಮಾರ್ಗವಾಗುವುದು ಎಂದು ಶಿಕ್ಷಣ ಸಚಿವ ಪೋಖ್ರಿಯಾಲ್ ಹೇಳಿದರು. ಕರೋನವೈರಸ್ ಸಾಂಕ್ರಾಮಿಕ ರೋಗವುಂಟಾದ ಸಮಯದಲ್ಲಿ, ನಾವು ಆನ್ ಲೈನ್ ತರಗತಿಗಳು ಮತ್ತು ಸಿಬಿಎಸ್ ಇ ಬೋರ್ಡ್, ಜೆಇಇ, ನೀಟ್ ಮತ್ತು ಇತರ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದೆವು ಎಂದು ಶಿಕ್ಷಣ ಸಚಿವರು ಹೇಳಿದರು. 28 ರಾಷ್ಟ್ರಗಳಲ್ಲಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ ಇ) ಶಾಲೆಗಳನ್ನು ನಾವು ಯಶಸ್ವಿಯಾಗಿ ನಡೆಸುತ್ತಿದ್ದೇವೆ ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ.

Exit mobile version