ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಗಳ ಬಂಧನ

ಬೆಂಗಳೂರು ನ 26 : ನಗರದಲ್ಲಿ ಹಲವು ದಿನಗಳಿಂದ ಅಕ್ಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ

ವೀಸಾ ಇಲ್ಲದೆ ನೆಲಸಿದ್ದ ಮೂವರು ಪುರುಷರು ಮತ್ತು ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ. ವಲಸಿಗರು ವೀಸಾ ಇಲ್ಲದೆ ಹೇಗೆ ಬೆಂಗಳೂರಿಗೆ ಬಂದರು ಎಂಬ ಬಗ್ಗೆ ತನಿಖೆ ನಡೆಸಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ.

ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿದ್ದು, ಬಾಂಗ್ಲಾ ಪ್ರಜೆಗಳನ್ನು ಕರೆತಂದವರ ಮೂಲದ ಬಗ್ಗೆ  ತನಿಖೆ ಮಾಡುತ್ತೇವೆ ಎಂದಿದ್ದಾರೆ.

ವಿಧಾನ ಸೌಧದಲ್ಲಿ ಮಾತನಾಡಿದ ಗೃಹ ಸಚಿವರು, ಸಿಸಿಬಿಯಿಂದ ಐದು ಬಾಂಗ್ಲಾ ವಲಸಿಗರನ್ನು ವಶಕ್ಕೆ ಪಡೆಯಲಾಗಿದೆ. ಅಕ್ರಮ ವಲಸಿಗರ ಬಗ್ಗೆ ಸರ್ಕಾರ ಎಚ್ಚರಿಕೆ ವಹಿಸಿದೆ. ಪೊಲೀಸ್ ಠಾಣೆಗಳಿಗೆ ನಿರ್ದೇಶನ ನೀಡಲಾಗಿದೆ. ಅವರನ್ನ ಡಿಟೆನ್ಷನ್ ಸೆಂಟರ್​ಗೆ ಹಾಕಲು ಸೂಚಿಸಿದ್ದೇವೆ. ಅಕ್ರಮ ವಲಸಿಗರು ದೇಶದ ಭದ್ರತೆಗೆ ಅಪಾಯಕಾರಿ. ಬಿಲ್ಡಿಂಗ್ ,‌ಕಾಫಿ ಎಸ್ಟೇಟ್ ಕೆಲಸಕ್ಕೆ ಬಂದಿದ್ದಾರೆ. ಇಂತವರನ್ನು ಕರೆತಂದವರ ಮೂಲಕ್ಕೆ ಕೈ ಹಾಕಿ ತನಿಖೆ ಮಾಡುತ್ತೇವೆ. ವಶಕ್ಕೆ ಪಡೆದು ಬಾಯಿ ಬಿಡಿಸುವ ಕೆಲಸ ಆಗುತ್ತಿದೆ ಎಂದಿದ್ದಾರೆ.

Exit mobile version