ಸಿಸಿಬಿ ದಾಳಿ: ಅಪ್ರಾಪ್ತವರಿಗೆ ಮಧ್ಯ ಮಾರಾಟ ಹಿನ್ನೆಲೆ ಬೆಂಗಳೂರಿನ ಪಬ್, ಬಾರ್ ಗಳ ಮೇಲೆ ಸಿಸಿಬಿ ದಾಳಿ

Bengaluru: ಬೆಂಗಳೂರಿನಾದ್ಯಂತ (CCB Ride on Blore Pubs) ಬಾರ್ ಹಾಗೂ ರೆಸ್ಟೋರೆಂಟ್ ಗಳಲ್ಲಿ ಅಪ್ರಾಪ್ತರಿಗೆ ಹಾಗೂ ಶಾಲೆ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಧ್ಯ ಸೇವನೆಗೆ ಅವಕಾಶ

ನೀಡುತ್ತಿರುವ ಪ್ರಕರಣಗಳು ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಇದರ ವಿರುದ್ಧ ಏಕಕಾಲಕ್ಕೆ ನಗರದ ಹಲವೆಡೆ ಕಾರ್ಯಾಚರಣೆ ನಡೆಸಿದ ಸಿಸಿಬಿ (CCB) ಪೊಲೀಸರು ನೂರಾರು ಪ್ರಕರಣಗಳನ್ನು

ದಾಖಲು ಮಾಡಿದ್ದು, 700ಕ್ಕೂ ಹೆಚ್ಚು ಕಡೆ ಸಿಸಿಬಿ ದಾಳಿ ನಡೆಸಿ (CCB Ride on Blore Pubs) ಶೋಧ ಕಾರ್ಯಾಚರಣೆ ನಡೆಸಿದೆ ಎನ್ನುವ ಮಾಹಿತಿ ದೊರಕಿದೆ.

ಶುಕ್ರವಾರ ರಾತ್ರಿ ಬೆಂಗಳೂರು ನಗರದಲ್ಲಿನ ಬಾರ್ ಅಂಡ್ ರೆಸ್ಟೋರೆಂಟ್ (Bar and Restaurant) ಡಿಸ್ಕೋಥೆಕ್ಗಳ ಮೇಲೆ ದಾಳಿ ನಡೆಸಿ ಬಿಸಿ ಮುಟ್ಟಿಸಿದರು. ಇನ್ನು ಶಾಲಾ-ಕಾಲೇಜುಗಳ

(College) ಅಪ್ರಾಪ್ತ ವಿದ್ಯಾರ್ಥಿಗಳಿಗೆ ಮಧ್ಯ ಪೂರೈಸುತ್ತಿರುವ ಬಗ್ಗೆ ಖಾಸಗಿ ಶಾಲೆಗಳ ಒಕ್ಕೂಟವು (ಕ್ಯಾಂಪ್) ಪೋಲಿಸ್ ಆಯುಕ್ತರು, ಗೃಹ ಸಚಿವರಿಗೆ ದೂರು ನೀಡಿದ ಬೆನ್ನಲ್ಲೇ ಡಿಸಿಪಿ (DCP)

ಶ್ರೀನಿವಾಸಗೌಡ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ, ಬಾಣಸವಾಡಿ (Banasavaadi), ಕೋರಮಂಗಲ, ಇಂದಿರಾ ನಗರ, ವೈಟ್ ಫೀಲ್ಡ್

(Whitefield) ಸೇರಿ ಹಲವೆಡೆ ಶೋಧ ನಡೆಸಿದ್ದಾರೆ.

ದಾಳಿಯ ವೇಳೆಯ ಸಮಯದಲ್ಲಿ 3 ಪಬ್ಗಳಲ್ಲಿ (Pub) ಅಪ್ರಾಪ್ತರಿಗೆ ಮಧ್ಯ ಪೂರೈಸುತ್ತಿರುವುದು ಗೊತ್ತಾಗಿದ್ದು, ಕೆಲವೆಡೆ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಕಂಡುಬಂದಿದೆ.

ಇನ್ನು ಬಹುತೇಕ ಪಬ್ಗಳಲ್ಲಿ ನೋ ಸ್ಮೋಕಿಂಗ್ (No Smoking) ವಲಯ ಹೊರತುಪಡಿಸಿ ಸಿಗರೇಟ್ ಸೇವನೆ ಮೋಜು-ಮಸ್ತಿ ಮಾಡುತ್ತಿರುವುದು ತಿಳಿದುಬಂದಿದೆ.

ಜೊತೆಗೆ ನಿಯಮ ಉಲ್ಲಂಘಿಸಿ ಹಬ್ಬದ ಸಂಗೀತದ ಪಾರ್ಟಿಗಳು (Party) ನಡೆಯುತ್ತಿದ್ದು, ಪೊಲೀಸರನ್ನು ಕಂಡ ತಕ್ಷಣವೇ ಸಂಗೀತವನ್ನು ನಿಲ್ಲಿಸಲಾಗಿತ್ತು ಅಲ್ಲದೆ ನಶೆಯಲ್ಲಿದ್ದ ಕೆಲವು

ಗ್ರಾಹಕರು ಸ್ಥಳದಿಂದ ಕಾಲ್ಕಿತ್ತರು ಎಂದು (CCB Ride on Blore Pubs) ಮೂಲಗಳು ತಿಳಿಸಿವೆ.

ಪಾರ್ಟಿ ಮಾಡುತ್ತಿದ್ದ ಅಪ್ರಾಪ್ತರನ್ನು ಕೆಲ ಪಬ್ಗಳಲ್ಲಿ ವಿಚಾರಣೆ ನಡೆಸಿದಾಗ ಕೆಲವರು ನಾವು ರಾಜಕಾರಣಿಗಳ ಸಂಬಂಧಿಗಳು ಎಂದು ಹೇಳಿಕೊಂಡು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಯುವತಿಯೊಬ್ಬಳು

ನಾನು ಕಿರುತೆರೆ ನಟಿ ಎಂದು ಹೇಳಿದ್ದಾಳೆ ಹಾಗಾಗಿ ಅಪ್ರಾಪ್ತರಿಗೆ ಕಾನೂನಿನ ಪಾಠದ ಮೂಲಕ ಎಚ್ಚರಿಕೆ ನೀಡಲಾಗಿದ್ದು, ಮಧ್ಯ ಪೂರೈಸುತ್ತಿದ್ದ ಮಾಲೀಕರ ವಿರುದ್ಧ ಪ್ರಕರಣ ದಾಖಿಸಲಾಗಿದೆ ಎಂದು ತಿಳಿದುಬಂದಿದೆ.

ದಾಳಿ ವೇಳೆಯಲ್ಲಿ ಕಂಡು ಬಂದ ದೃಶ್ಯವನ್ನಾಧರಿಸಿ 480ರ ಕೋಟ ಕಾಯಿದೆ ಅಡಿಯಲ್ಲಿ ಉಲ್ಲಂಘನೆ, ಹಲವು ನಿಯಮಗಳ ಉಲ್ಲಂಘನೆಗೆ 390ರ ಪ್ರಕರಣ, ಬಾಲ ನ್ಯಾಯ ಕಾಯಿದೆ ಅನ್ವಯ 3 ಪ್ರಕರಣ,

ಅಬಕಾರಿ ಕಾಯಿದೆ ಹಾಗೂ ಉಲ್ಲಂಘನೆ ಸಂಬಂಧ ಒಂಬತ್ತು ಪ್ರಕರಣಗಳನ್ನು ಆಯಾ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಿಸಲಾಗಿದೆ ಎಂದು ಹೇಳಿದರು.

ನಗರ ಪೊಲೀಸ್ ಆಯುಕ್ತ ಬಿ.ದಯಾನಂದ (B Dayanand) ಅವರು ಸುದ್ದಿಗಾರರ ಜೊತೆ ದಾಳಿಯ ಕುರಿತು ಮಾತನಾಡಿದ್ದು, ಹಲವು ಸ್ಥಳಗಳಲ್ಲಿ ನಿಯಮಗಳ ಉಲ್ಲಂಘನೆ ಸಂಬಂಧ ದೂರುಗಳು

ಬಂದಿದ್ದ ಹಿನ್ನೆಲೆಯಲ್ಲಿ ಸಿಸಿಬಿ (CCB) ವಿಶೇಷ ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಾಗಿದೆ. ಹಾಗೂ ಈ ಕಾರ್ಯಾಚರಣೆ ನಿರಂತರವಾಗಿ ನಡೆಯಲಿದ್ದು ನಿಯಮ ಉಲ್ಲಂಘಿಸುವವರ ವಿರುದ್ಧ

ಯಾವುದೇ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಇದನ್ನು ಓದಿ: ಆರೋಗ್ಯ ಮಾಹಿತಿ: ಅರಿಶಿನ ಹಾಗೂ ತುಪ್ಪ ಸೇವಿಸೋದು ಆರೋಗ್ಯಕ್ಕೆ ಒಳ್ಳೆಯದು

Exit mobile version