ಎಲ್ಲರಿಗೂ ತಿಳಿದಿರುವ ಹಾಗೆ ಅರಿಶಿನದಲ್ಲಿ ರೋಗನಿರೋಧಕ ಶಕ್ತಿ ಇದ್ದು, ಈ ಅರಿಶಿನವು ಆರೋಗ್ಯಕ್ಕೆ ಬಹಳ ಉಪಯುಕ್ತವಾಗಿದೆ. ಇನ್ನು ಅರಿಶಿನವನ್ನು (benefits of turmeric and ghee)
ಹಾಲಿಗೆ ಬೆರೆಸಿ ಕುಡಿಯುವುದರ ಬಗ್ಗೆ ಸಹ ನೀವೆಲ್ಲಾ ಕೇಳಿರಬಹುದು. ಆದರೆ ತುಪ್ಪಕ್ಕೆ ಅರಿಶಿನವನ್ನು ಮಿಕ್ಸ್ ಮಾಡಿ ತಿನ್ನೋದ್ರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿದ್ದು,
ಇದರಲ್ಲಿ ಆಯುರ್ವೇದಿಕ್ (Ayurvedic) ಗುಣಗಳು ಬಹಳಷ್ಟಿದೆ.

ತುಪ್ಪವನ್ನು ಅರಿಶಿನದೊಂದಿಗೆ ಬೆರೆಸಿದ ಮಿಶ್ರಣವನ್ನು ಸೇವಿಸಿದಾಗ ಆರೋಗ್ಯಕರ ಕೊಬ್ಬುಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತದೆ. ಅಲ್ಲದೆ ಪ್ರತಿನಿತ್ಯ ಇದನ್ನು ಸೇವಿಸುವುದರಿಂದ
ಆರೋಗ್ಯ ಸುಧಾರಿಸುವುದಲ್ಲದೆ ಅರಿಶಿನ ಮತ್ತು ತುಪ್ಪವನ್ನು ಒಟ್ಟಿಗೆ ಸೇರಿಸಿ ತಿನ್ನುವುದರಿಂದಾಗುವ ಲಾಭಗಳು ಏನು ಎಂದು ತಿಳಿದುಕೊಳ್ಳೋಣ.
ಇವೆರಡನ್ನು ಬೆರೆಸಿ ತಿನ್ನುವುದರಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ಒದಗಿಸುವುದಲ್ಲದೆ ಇದು ಉರಿಯೂತದ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದ್ದು, ಇದು ಸಂಧಿವಾತದಂತಹ
ಕಾಯಿಲೆಗಳಿಗೆ ಸಂಬಂಧಿಸಿದ ಊತ ಮತ್ತು ನೋವನ್ನು ಕಡಿಮೆ ಮಾಡಲು ಸಹಾಯಕಾರಿಯಾಗಿದೆ. ಇದರಲ್ಲಿರುವ ಕರ್ಕ್ಯುಮಿನ್ ಉತ್ಕರ್ಷಣ ನಿರೋಧಕವು ರಕ್ಷಣೆಯನ್ನು ಒದಗಿಸುತ್ತದೆ ಹಾಗೂ
ತುಪ್ಪದಲ್ಲಿರುವ ಬ್ಯುಟರಿಕ್ ಆಮ್ಲವು ಕರುಳಿನ (benefits of turmeric and ghee) ಆರೋಗ್ಯವನ್ನು ಉತ್ತೇಜಿಸುತ್ತದೆ.
ಅಡುಗೆಯಲ್ಲಿ ಬಳಸುವ ವಿಧಾನ
ಇದನ್ನು ದಿನನಿತ್ಯದ ಅಡುಗೆಯಲ್ಲಿ ಬಳಸಬಹುದಾಗಿದ್ದು, ಚಹಾ ಅಥವಾ ಕಾಫಿಯಂತಹ ಬಿಸಿ ಪಾನೀಯಗಳಿಗೆ ಸೇರಿಸಿಕುಡಿಯಬಹುದಲ್ಲದೆ ಹೆಚ್ಚುವರಿ ಸುವಾಸನೆ ಮತ್ತು ಪೋಷಕಾಂಶಗಳಿಗಾಗಿ
ಅಕ್ಕಿ ಅಥವಾ ತರಕಾರಿಗಳ ಮೇಲೆ ಸುರಿಯಬಹುದು.

ತಯಾರಿಸುವ ವಿಧಾನ:
ಇದನ್ನು ಮನೆಯಲ್ಲಿಯೇ ತುಂಬಾ ಸರಳವಾಗಿ ತಯಾರಿಸಬಹುದಾಗಿದ್ದು, ಇದಕ್ಕೆ ಬೇಕಾಗಿರುವುದು ಉತ್ತಮ ಗುಣಮಟ್ಟದ ತುಪ್ಪ ಮತ್ತು ಸಾವಯವ ಅರಿಶಿನ ಪುಡಿ. ಮೊದಲಿಗೆ ಅದು ಸ್ಪಷ್ಟವಾಗುವವರೆಗೆ
ಕಡಿಮೆ ಉರಿಯಲ್ಲಿ ತುಪ್ಪವನ್ನು ಕರಗಿಸಿ ತದ ನಂತರ ರುಬ್ಬಿದ ಅರಿಶಿನ ಪುಡಿಯನ್ನು ಸೇರಿಸುವ ಮೊದಲು ತುಪ್ಪವನ್ನು ಸೋಸಿಕೊಳ್ಳಬೇಕು ಆಮೇಲೆ ಸಂಪೂರ್ಣವಾಗಿ ಕರಗುವ ತನಕ ಚೆನ್ನಾಗಿ
ಬೆರೆಸಿ ಇದನ್ನು ಸಂಗ್ರಹಿಸುವ ಮೊದಲು ತಣ್ಣಗಾಗಲು ಬಿಡಬೇಕು.
ಗಮನದಲ್ಲಿಡಬೇಕಾದ ಅಂಶ:
ಪ್ರತಿನಿತ್ಯ ಇದನ್ನು ಸೇವಿಸುವುದು ಉಪಯುಕ್ತವಾಗಿದ್ದರೂ ತುಪ್ಪದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬಿನಂಶವಿರುವ ಕಾರಣ ಅತಿಯಾದ ಸೇವನೆಯು ಕೆಲವು ಜನರಲ್ಲಿ ಅತಿಸಾರ ಅಥವಾ ವಾಕರಿಕೆ ಮುಂತಾದ
ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುಲ್ಲದೆ ಪಿತ್ತಕೋಶದ ಕಾಯಿಲೆ ಹೊಂದಿದ್ದವರು ಅಥವಾ ಗರ್ಭಿಣಿಯಾಗಿದ್ದವರು ಮಾತ್ರ ಆಹಾರದಲ್ಲಿ ಸೇರಿಸಿ ತಿನ್ನುವ ಮೊದಲು ವೈದ್ಯರ ಸಲಹೆಯನ್ನು
ಪಡೆಯುವುದು ಬಹಳ ಒಳ್ಳೆಯದು.
ಇದನ್ನು ಓದಿ: ಹೈಕೋರ್ಟ್ ಶಾಕ್ : ಸೌಜನ್ಯ ಕೊಲೆ ಪ್ರಕರಣ ಮರುತನಿಖೆ ಅರ್ಜಿ ವಜಾ ಮಾಡಿದ ಹೈಕೋರ್ಟ್
- ಭವ್ಯಶ್ರೀ ಆರ್.ಜೆ