100 ಜನ ಸೇರುವ ಕಡೆ CCTV ಕಡ್ಡಾಯ: ಕಮಲ್‌ಪಂತ್‌ ಖಡಕ್‌ ಆದೇಶ

ಬೆಂಗಳೂರು,ಫೆ.19: ನಗರದಲ್ಲಿ ನೂರಕ್ಕಿಂತ ಹೆಚ್ಚು ಸಾರ್ವಜನಿಕರು ಸೇರುವ ಕಡೆಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿಗಳನ್ನು  ಅಳವಡಿಕೆಬೇಕು ಎಂದು ಬೆಂಗಳೂರು ನಗರ ಪೊಲೀಸ್​ ಆಯುಕ್ತ ಕಮಲ್​ ಪಂತ್ ಈ ಬಗ್ಗೆ  ಖಡಕ್ ವಾರ್ನಿಂಗ್ ನೀಡಿದ್ದಾರೆ.

ಕರ್ನಾಟಕ ಸಾರ್ವಜನಿಕರ ರಕ್ಷಣೆ ಕಾಯ್ದೆ 2017 ರ ಅನ್ವಯ ಈ ಸೂಚನೆಯನ್ನು ನೀಡಲಾಗಿದ್ದು, ಅಂಗಡಿ ಮಳಿಗೆಗಳು, ಹೊಟೇಲ್​, ರೆಸ್ಟೋರೆಂಟ್​,​ ಸೂಪರ್​ ಮಾರ್ಕೆಟ್​, ಬಿಗ್​ ಬಜಾರ್​ಗಳಲ್ಲಿ, ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.

ಈ ನಿಯಮವನ್ನು ಅಂಗಡಿ ಮಾಲೀಕರು  ಪಾಲಿಸದೆ ನಿರ್ಲಕ್ಷಿಸಿ, ಸಿಸಿಟಿವಿ ಅಳವಡಿಸಿಕೊಳ್ಳದಿದ್ದಲ್ಲಿ ಅಂಥವರ ಮೇಲೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆಯನ್ನು  ನೀಡಿದ್ದಾರೆ.

Exit mobile version