ವರ್ಷಕ್ಕೆ ಎರಡು ಬಾರಿ ಬೋರ್ಡ್ ಪರೀಕ್ಷೆ : ಕೇಂದ್ರ ಸರ್ಕಾರದ ಹೊಸ ನಿಯಮ

New Delhi : ನೂತನ ಶಿಕ್ಷಣ ನೀತಿಗೆ ಅನುಗುಣವಾಗಿ 2024ರ ಶೈಕ್ಷಣಿಕ ವರ್ಷದಿಂದ ವರ್ಷಕ್ಕೆ ಎರಡು ಬಾರಿ ಬೋರ್ಡ್ (Central Govt new rule) ಪರೀಕ್ಷೆಗಳನ್ನು ನಡೆಸಲು ಕೇಂದ್ರ

ಶಿಕ್ಷಣ ಸಚಿವಾಲಯ ನಿರ್ಧರಿಸಿದೆ. ಈ ಕ್ರಮವು ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆಯಲು ಅವಕಾಶವನ್ನು ಒದಗಿಸುತ್ತದೆ. ಏಕ ವಾರ್ಷಿಕ ಪರೀಕ್ಷೆಗಳಿಂದ ಉಂಟಾಗುವ ಒತ್ತಡವನ್ನು

ಇದು ಕಡಿಮೆ ಮಾಡುತ್ತದೆ ಎಂದು ಶಿಕ್ಷಣ (Central Govt new rule) ಸಚಿವಾಲಯ ಹೇಳಿದೆ.

ಇನ್ನು 2024ರ ಶೈಕ್ಷಣಿಕ ವರ್ಷದಿಂದ ನೂತನ ಶಿಕ್ಷಣ ನೀತಿ (NEP) ಪ್ರಕಾರ, 11 ಮತ್ತು 12ನೇ ತರಗತಿಗಳಲ್ಲಿ, ವಿದ್ಯಾರ್ಥಿಗಳು ಎರಡು ಭಾಷೆಗಳನ್ನು ಅಧ್ಯಯನ ಮಾಡಬೇಕಾಗುತ್ತದೆ ಮತ್ತು

ಅವುಗಳಲ್ಲಿ ಒಂದು ಭಾರತೀಯ ಭಾಷೆಯಾಗಿರಬೇಕು ಎಂದು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ದಾಖಲೆ ತಿಳಿಸಿದೆ.

ಕಂಠಪಾಠದ ಮೇಲೆ ಅವಲಂಬಿತರಾಗುವುದಕ್ಕಿಂತ ಹೆಚ್ಚಾಗಿ ವಿದ್ಯಾರ್ಥಿಗಳ ತಿಳುವಳಿಕೆ ಮತ್ತು ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲು ಹೊಸ ಚೌಕಟ್ಟು ಪ್ರತಿಪಾದಿಸುತ್ತದೆ. ಈ ವಿದ್ಯಾರ್ಥಿ

ಕೇಂದ್ರಿತ ವಿಧಾನವು ವಿಷಯಗಳ ಆಳವಾದ ಗ್ರಹಿಕೆ ಮತ್ತು ಪ್ರಾಯೋಗಿಕ ಕೌಶಲ್ಯಗಳೊಂದಿಗೆ ಕಲಿಯುವವರಿಗೆ ಪ್ರೋತ್ಸಾಹಿಸುತ್ತದೆ ಎನ್ನಲಾಗಿದೆ.

Exit mobile version